ಬೆಳ್ತಂಗಡಿ ತಾಲೂಕು ಧ್ವನಿವರ್ಧಕ ಮತ್ತು ದೀಪಾಲಂಕಾರ ಮಾಲಕರ ಸಂಘದ ಮಹಾಸಭೆ

0

ಬೆಳ್ತಂಗಡಿ : ಬೆಳ್ತಂಗಡಿ ತಾಲೂಕು ಧ್ವನಿವರ್ಧಕ ಮತ್ತು ದೀಪಾಲಂಕಾರ ಮಾಲಕರ ಸಂಘದ 2021-22ನೇ ಸಾಲಿನ 12ನೇ ವಾರ್ಷಿಕ ಮಹಾಸಭೆ ಮತ್ತು
ಸಂಘದ ಹಿರಿಯ ಸದಸ್ಯರಿಗೆ ಸನ್ಮಾನ ಕಾರ್ಯಕ್ರಮ ಸೆ.15 ರಂದು ಲಾಯಿಲ ಗಣೇಶ ಕಲಾ ಮಂದಿರದಲ್ಲಿ ಜರುಗಿತು.


ಬೆಳ್ತಂಗಡಿ ತಾಲೂಕು ಧ್ವನಿವರ್ಧಕ ಮತ್ತು ದೀಪಾಲಂಕಾರ ಮಾಲಕರ ಸಂಘದ ಅಧ್ಯಕ್ಷ ಚಂದ್ರಶೇಖರ ಎಂ. ವಹಿಸಿದ್ದರು. ಜಿಲ್ಲಾ ಧ್ವನಿವರ್ಧಕ ಮತ್ತು ದೀಪಾಲಂಕಾರ ಮಾಲಕರ ಸಂಘದ ಅಧ್ಯಕ್ಷ ರಾಜಶೇಖರ ಶೆಟ್ಟಿ, ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು.

ಬಂಟ್ವಾಳ ಧ್ವನಿವರ್ಧಕ ಮತ್ತು ದೀಪಾಲಂಕಾರ ಸಂಘದ ಅಧ್ಯಕ್ಷ ಧನರಾಜ್ ಶೆಟ್ಟಿ, ಸುಳ್ಯ ದೀಪಾಲಂಕಾರ ಮಾಲಕರ ಸಂಘದ ಅಧ್ಯಕ್ಷ ಗಿರಿಧರ ಸ್ಕಂದ, ದ.ಕ. ಜಿಲ್ಲಾ ಶಾಮಿಯಾನ ಮಾಲಕರ ಸಂಘದ ಅಧ್ಯಕ್ಷ ಪ್ರಭಾಕರ ಶೆಟ್ಟಿ ಬೆಳ್ತಂಗಡಿ, ಮಂಗಳೂರು ಸುಪ್ರೀಮ್ ಡೇಕೋರೇಟರ್ ಮತ್ತು ಸೌಂಡ್ಸ್ ನ ಮುಸಬ್ಬ ಕೆ. ಎ., ಮಂಗಳೂರು ,ಮಹೇಂದ್ರ ಪವರ್‌ಆಲ್ ಜನರೇಟರ್ ನ ಕಿರಣ್ ಶೆಟ್ಟಿ, ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಹಿರಿಯ ಸದಸ್ಯರಾದ ಅಧ್ಯಕ್ಷ ಚಂದ್ರಶೇಖರ ಎಂ. ಸಂಜೀವ ಸಂಜಯ್ ಸೌ0ಡ್ಸ್, ಪ್ರಭಾಕರ ಅಳದಂಗಡಿ ಇವರನ್ನು ಸನ್ಮಾನಿಸಲಾಯಿತು.

ಸಂಘದ ಎಲ್ಲಾ ಪದಾಧಿಕಾರಿಗಳು, ಸದಸ್ಯರು ಹಾಜರಿದ್ದರು. ಕಾರ್ಯದರ್ಶಿ ವಸಂತ ಕೆ. ನಾವೂರು ವರದಿ ವಾಚಿಸಿದರು. ಕೋಶಾಧಿಕಾರಿ ರೋಹಿತ್ ಕುಮಾರ್ ಆಯ ವ್ಯಯ ಮಂಡಿಸಿದರು, ಮಾತುಕುಟ್ಟಿ ಧರ್ಮಸ್ಥಳ ಸ್ವಾಗತಿಸಿ, ಜತೆ ಕಾರ್ಯದರ್ಶಿ ಹರೀಶ್ ಗೇರುಕಟ್ಟೆ ನಿರೂಪಿಸಿದರು.

LEAVE A REPLY

Please enter your comment!
Please enter your name here