ಉಜಿರೆ: ಜಿಲ್ಲಾ ಮಟ್ಟದ ಶೈಕ್ಷಣಿಕ ಸಮಾವೇಶ 2022-23

0

ಉಜಿರೆ: ದ.ಕ ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಪ್ರಾಚಾರ್ಯರ ಸಂಘ ಮಂಗಳೂರು ಮತ್ತು   ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಪೂರ್ವ ಕಾಲೇಜು, ಉಜಿರೆ ಬೆಳ್ತಂಗಡಿ ತಾಲೂಕು ಇದರ ಜಂಟಿ ಸಹಭಾಗಿತ್ವದಲ್ಲಿ ಜಿಲ್ಲಾ ಮಟ್ಟದ ಶೈಕ್ಷಣಿಕ ಸಮಾವೇಶ 2022-23 ಕಾರ್ಯಕ್ರಮವು ಸೆ.16ರಂದು ಉಜಿರೆ ಶ್ರೀ ಸಿದ್ಧವನ ಗುರುಕುಲ ಸಭಾಭವನ ದಲ್ಲಿ ಜರುಗಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ರಾಜ್ಯಸಭಾ ಸದಸ್ಯರು, ಧರ್ಮಾಧಿಕಾರಿಗಳಾದ ಡಾ|| ಡಿ ವೀರೇಂದ್ರ ಹೆಗ್ಗಡೆಯವರು ನೆರವೇರಿಸಿ, ಅಧ್ಯಕ್ಷತೆ ವಹಿಸಿದ್ದರು.

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಹಾಗೂ ಸಕಾಲ ಇಲಾಖೆಯ ಸಚಿವರು ಬಿ.ಸಿ ನಾಗೇಶ್ ರವರು  ಡಾ|| ಡಿ ವೀರೇಂದ್ರ ಹೆಗ್ಗಡೆಯವರಿಗೆ  ಸನ್ಮಾನಿಸಿ ಗೌರವಿಸಿದರು.
ಮುಖ್ಯ ಅತಿಥಿಗಳಾಗಿ ಮೂಡಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಅಧ್ಯಕ್ಷ  ಡಾ|ಎಂ ಮೋಹನ ಆಳ್ವ, ಪದವಿ ಪೂರ್ವ ಶಿಕ್ಷಣ ಇಲಾಖೆ ದ.ಕ ಜಿಲ್ಲೆ ಮಂಗಳೂರು ಇದರ ಉಪನಿರ್ದೇಶಕರು ಸಿ.ಡಿ ಜಯಣ್ಣ, ಉಜಿರೆ ಶ್ರೀ.ಧ.ಮಂ ಎಜುಕೇಶನ್ ಸೊಸೈಟಿ ಕಾರ್ಯದರ್ಶಿ ಡಾ| ಎಸ್.ಸತೀಶ್ ಚಂದ್ರ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಡಾ|| ಡಿ ವೀರೇಂದ್ರ ಹೆಗ್ಗಡೆಯವರು   ಎಸ್.ಡಿ.ಎಂ ಪದವಿ ಪೂರ್ವ ಕಾಲೇಜಿನಲ್ಲಿ ಉಚಿತ ಶಿಕ್ಷಣ ಯೋಜನೆಯ ಅಡಿಯಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಪತ್ರವನ್ನು ವಿತರಿಸಿದರು ಮತ್ತು ಸೇವಾ ನಿವೃತ್ತಿ ಹೊಂದಿದ ಪ್ರಾಚಾರ್ಯರಿಗೆ ಸನ್ಮಾನಿಸಿ ಗೌರವಿಸಿದರು.

ಸಚಿವ ಬಿ.ಸಿ ನಾಗೇಶ್  ಕೋವಿಡ್ ಗೆ ಬಲಿಯಾದ ಯೂಟ್ಯೂಬ್ ತರಗತಿಗಳನ್ನು ನಡೆಸಿದ ಉಪನ್ಯಾಸಕರ ಕುಟುಂಬಕ್ಕೆ ಸಹಾಯಧನವನ್ನು ವಿತರಿಸಿ, ಯೂಟ್ಯೂಬ್ ತರಗತಿಗಳನ್ನು ಪ್ರಾರಂಭಿಸಲು ಪ್ರೇರಣೆ ಹಾಗೂ ಕಾರರ್ಣಕರ್ತರಾದವರಿಗೆ ಹಾಗೂ ಯೂಟ್ಯೂಬ್ ತರಗತಿಗಳನ್ನು ನಡೆಸಿದ ಉ ಪನ್ಯಾಸಕರಿಗೆ  ಗೌರವಾರ್ಪಣೆ ಹಾಗೂ ದ್ವಿತೀಯ ಪಿಯುಸಿಯಲ್ಲಿ ಅತ್ಯಧಿಕ ಅಂಕ ಗಳಿಸಿದ ದ.ಕ ಜಿಲ್ಲೆಯ ಸಾಧಕ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ಮತ್ತು ಶೇಕಡಾ 100 ಫಲಿತಾಂಶ ಪಡೆದ ಕಾಲೇಜುಗಳಿಗೆ ಅಭಿನಂದನೆಯನ್ನು ಸಲ್ಲಿಸಿದರು.
ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯರಿಂದ ಪ್ರಾರ್ಥನೆ ನಡೆದು, ಗಂಗಾಧರ ಆಳ್ವ ಸ್ವಾಗತಿಸಿದರು, ಸಂಘದ ಕಾರ್ಯದರ್ಶಿ ಧನ್ಯವಾದಗೈದರು.

LEAVE A REPLY

Please enter your comment!
Please enter your name here