ಕೊಯ್ಯೂರು ಪ್ರೌಢ ಶಾಲೆಯಲ್ಲಿ ವಿಶ್ವೇಶ್ವರಯ್ಯ ದಿನಾಚರಣೆ

0

ಕೊಯ್ಯೂರು : ಸರಕಾರಿ ಪ್ರೌಢಶಾಲೆಯಲ್ಲಿ ರಾಷ್ಟ್ರೀಯ ಇಂಜಿನೀಯರ್ ದಿನಾಚರಣೆಯನ್ನು ಸೆ.15 ರಂದು ಆಚರಿಸಲಾಯಿತು.

ಶಾಲಾ ಹಿರಿಯ ವಿದ್ಯಾರ್ಥಿ, ಭಾರತೀಯ ಭೂಸೇನೆಯ ಆಪರೇಟರ್ ರೇಡಿಯೋ ಇನ್ಸಟ್ರಕ್ಟರ್ ಆಗಿರುವ ಮಹಮ್ಮದ್ ಹಾರೀಸ್ ಕಾರ್ಯಕ್ರಮವನ್ನು ಸರ್ ಎಂ. ವಿಶ್ವೇಶ್ವರಯ್ಯರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮೂಲಕ ಉದ್ಘಾಟಿಸಿ ಮಾತನಾಡಿ ಸರ್ ಎಂ. ವಿಶ್ವೇಶ್ವರಯ್ಯನವರು ವಿಶ್ವ ಕಂಡ ಶ್ರೇಷ್ಠ ಮೇಧಾವಿಯಾಗಿದ್ದಾರೆ. ಮತ್ತು ಭಾರತೀಯ ಸೇನೆಗೆ ಇಂಜಿನಿಯರ್ ರವರ ಕೊಡುಗೆ ಅಪಾರವಾಗಿದೆ. ವಿದ್ಯಾರ್ಥಿಗಳು ಎಸ್ ಎಸ್ ಎಲ್ ಸಿ ವ್ಯಾಸಾಂಗ ಮಾಡುವಾಗಲೇ ತಮ್ಮ ಭವಿಷ್ಯದ ಬಗ್ಗೆ ಸ್ಪಷ್ಟ ಕಲ್ಪನೆ ಇರಬೇಕೆಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಮುಖ್ಯೋಪಾಧ್ಯಾಯ ರಾಧಾಕೃಷ್ಣ ತಚ್ಚಮೆ ವಹಿಸಿ ಸರ್ ಎಂ ವಿಶ್ವೇಶ್ವರಯ್ಯನವರ ಸತ್ಯ.ಪ್ರಾಮಾಣಿಕತೆ ಮತ್ತು ದಕ್ಷತೆಯಂತಹ ಗುಣಗಳನ್ನು ಮೈಗೂಡಿಸಿಕೊಳ್ಳಬೇಕೆಂದರು .

ಶಿಕ್ಷಕಿ  ಬೇಬಿ ಸ್ವಾಗತಿಸಿದರು. ವಿದ್ಯಾರ್ಥಿಗಳಾದ ವಿಜೇತ್ ಮತ್ತು ಕಾರ್ತಿಕ್ ವಿಶ್ವೇಶ್ವರಯ್ಯನವರ ಸಾಧನೆಗಳ ಬಗ್ಗೆ ತಿಳಿಸಿದರು. ವೇದಿಕೆಯಲ್ಲಿ ಸಹಲಾ ಹಾರೀಸ್ ,ಸುಧಾಕರಶೆಟ್ಟಿ, ದೀಪಿಕಾ .ಸಂತೋಷ್‌ ಕುಮಾರ್ ಉಪಸ್ಥಿತರಿದ್ದರು.

ಮೋಹನದಾಸ ವಂದಿಸಿದರು, ದೀಪ್ತಿ ಹೆಗಡೆ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here