ಲಾಯಿಲ ಗ್ರಾ.ಪಂ ನ ಖಾಲಿ ಹುದ್ದೆಗಳನ್ನು ಭರ್ತಿಗೊಳಿಸುವಂತೆ ಕೋರಿ ಕಾರ್ಯನಿರ್ವಹಣಾಧಿಕಾರಿ ಕುಸುಮಾಧರ್ ರವರಿಗೆ ಲಾಯಿಲ ಮಾಜಿ ತಾ.ಪಂ ಸದಸ್ಯ ಸುಧಾಕರ್ ಬಿ.ಎಲ್ ರಿಂದ ಮನವಿ

0

ಲಾಯಿಲ: ರಾಷ್ಟ್ರೀಯ ಗೌರವ, ಗ್ರಾಮ ಸಭಾ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಯ ಗೌರವಗಳನ್ನು ಪಡೆದಿರುವ  ಲಾಯಿಲ  ಗ್ರಾ.ಪಂ ನಲ್ಲಿ ಖಾಲಿ ಹುದ್ದೆಗಳನ್ನು ಭರ್ತಿಗೊಳಿಸುವಂತೆ ಕೋರಿ ಬೆಳ್ತಂಗಡಿ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಕುಸುಮಾಧರ್ ಇವರಿಗೆ ತಾ.ಪಂ ಕ್ಷೇತ್ರ ಲಾಯಿಲ ಇಲ್ಲಿಯ ಮಾಜಿ ಸದಸ್ಯ ಸುಧಾಕರ್ ಬಿ.ಎಲ್ ಮನವಿಯನ್ನು ನೀಡಿದರು.

ಲಾಯಿಲ ಗ್ರಾ.ಪಂ ನಲ್ಲಿ ಕಳೆದ ಒಂದುವರೆ ವರ್ಷದಿಂದ ಅಭಿವೃದ್ಧಿ ಅಧಿಕಾರಿ, ಕಾರ್ಯದರ್ಶಿ ಮತ್ತು ಲೆಕ್ಕ ಸಹಾಯಕಿ ಹುದ್ದೆಗಳು ಖಾಲಿ ಇದ್ದು, ಅಭಿವೃದ್ಧಿ ಅಧಿಕಾರಿ ಮತ್ತು ಕಾರ್ಯದರ್ಶಿಯವರನ್ನು ತಾತ್ಕಾಲಿಕವಾಗಿ ಒದಗಿಸಲಾಗಿದೆ. ಲೆಕ್ಕ ಸಹಾಯಕಿ ಹುದ್ದೆಗಳು ಖಾಲಿ ಇದೆ ಆದರೆ ಈಗಿರುವ ಅಧಿಕಾರಿಗಳಿಗೆ ತಮ್ಮ ತಮ್ಮ ಖಾಯಂ ಪಂಚಾಯತ್ ಗಳಲ್ಲಿ ಕಾರ್ಯನಿರ್ವಹಿಸಬೇಕಾದ ಒತ್ತಡವೂ ಇರುವ ಕಾರಣ. ಲಾಯಿಲ ಗ್ರಾ.ಪಂ ಗೆ ಬೇಕೆಂದಾಗ ಲಭ್ಯವಾಗುತ್ತಿಲ್ಲ. ಅಲ್ಲದೆ ಅವರು ಲಭ್ಯವಿರುವ ದಿನಗಳಲ್ಲಿ ಹಲವು ಬಾರಿ ನೆಟ್ ವರ್ಕ್ ಸರ್ವರ್ ಸಮಸ್ಯೆಗಳು ಬಂದು ಆನ್ ಲೈನ್ ಕೆಲಸಗಳು ಆಗದೆ ಜನ ಸಾಮಾನ್ಯರು ಸಣ್ಣ ಪುಟ್ಟ ಕೆಲಸಗಳಿಗೂ ಪಂಚಾಯತ್ ಗೆ ದಿನ ನಿತ್ಯ ಅಲೆದಾಡುವುದರೊಂದಿಗೆ ತಿಂಗಳ ಮೇಲೆಯೂ ಕಾಯುವಂತಾಗಿದೆ.

ಲಾಯಿಲ ಗ್ರಾ.ಪಂ ಗೆ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಿ ಇಲ್ಲಿಯ ತನಕ ಆಗುತ್ತಿರುವ ತೊಂದರೆಯನ್ನು ದೂರವಾಗುವಂತೆ ಮಾಡಿ ಸಾರ್ವಜನಿಕರಿಗೆ ಸಹಕರಿಸುವಲ್ಲಿ ಕ್ರಮವನ್ನು ಕೈಗೊಳ್ಳುವಂತೆ ಸಾರ್ವಜನಿಕರ ಪರವಾಗಿ ಮನವಿಯ ಮೂಲಕ ಆಗ್ರಹಿಸಲಾಯಿತು.

LEAVE A REPLY

Please enter your comment!
Please enter your name here