ವೇಣೂರಿನಲ್ಲಿ ಉಚಿತ ವೈದ್ಯಕೀಯ ಶಿಬಿರ

0

ವೇಣೂರು : ಶ್ರೀ ಸತ್ಯಸಾಯಿ ಸೇವಾ ಸಮಿತಿ ಈಶ್ವರಾಂಬಾ ಟ್ರಸ್ಟ್   ಗಾಂಧಿನಗರ, ಮಂಗಳೂರು ಇವರ ಆಶ್ರಯದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ವೇಣೂರು, ಗ್ರಾಮ ಪಂಚಾಯತ್‌ ವೇಣೂರು, ಮಹಿಳಾ ಮಂಡಲ ವೇಣೂರು, ಶ್ರೀರಾಮ ಭಜನಾ ಮಂದಿರ ನಡ್ತಿಕಲ್ಲು, ಮೂಡುಕೋಡಿ,ವಿದ್ಯೋದಯ ಎಜ್ಯುಕೇಶನ್ ಟ್ರಸ್ಟ್ ವೇಣೂರು, ಕಿಂಗ್ಸ್ ಆಫ್ ವಾಲಿಬಾಲ್, ಮೂಡುಕೋಡಿ ಇವರ ಸಹಕಾರದೊಂದಿಗೆ ಯೇನಪೋಯ ಕಾಲೇಜು ಮತ್ತು ಆಸ್ಪತ್ರೆ ದೇರಳಕಟ್ಟೆ, ಇಲ್ಲಿಯ ವೈದ್ಯರ ತಂಡದವರಿಂದ ಉಚಿತ ವೈದ್ಯಕೀಯ ಹಾಗೂ ದಂತ, ಕಣ್ಣಿನ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ ಸೆ.11 ರಂದು ವೇಣೂರು ವಿದ್ಯೋದಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರಗಿತು.

ಶಿಬಿರದಲ್ಲಿ ದಂತ ಚಿಕಿತ್ಸೆ, ಸಾಮಾನ್ಯ ವೈದ್ಯಕೀಯ, ನೇತ್ರ ಚಿಕಿತ್ಸೆ,ಬಿ.ಪಿ, ಶುಗರ್ ತಪಾಸಣೆ, ರಕ್ತ ವರ್ಗಿಕರಣ, ಕಿವಿ, ಮೂಗು ಮತ್ತು ಗಂಟಲು ತಪಾಸಣೆ ನಡೆಯಿತು.

ಭಾರತೀಯ ಜನತಾ ಪಕ್ಷ ಬೆಳ್ತಂಗಡಿ ಮಂಡಲ ಅಧ್ಯಕ್ಷ ಜಯಂತ್ ಕೋಟ್ಯಾನ್ ಉದ್ಘಾಟಿಸಿದರು. ಶ್ರೀ ಸತ್ಯ ಸಾಯಿ ಸೇವಾ ಸಮಿತಿಯ ದಯಾನಂದ, ವೇಣೂರು ಗ್ರಾಮ ಪಂಚಾಯತ್ ಅಧ್ಯಕ್ಷ ನೇಮಯ್ಯ ಕುಲಾಲ್, ವೇಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪುರುಷೋತ್ತಮ ರಾವ್, ವೇಣೂರು ಪ್ರಾ. ಕೃ. ಪ. ಸಹಕಾರ ಸಂಘದ ಅಧ್ಯಕ್ಷ ಸುಂದರ ಹೆಗ್ಡೆ, ಮುಖ್ಯ ಕಾರ್ಯನಿರ್ವಾಹಣಾ ಧಿಕಾರಿ ಜಯಂತ ಪೂಜಾರಿ, ನಡ್ತಿಕಲ್ಲು ಶ್ರೀ ರಾಮ ಭಜನಾ ಮಂಡಳಿ ಅಧ್ಯಕ್ಷ ಪ್ರವೀಣ್ ಆಚಾರ್ಯ, ಶ್ರೀ ಸತ್ಯ ಸಾಯಿ ಸೇವಾ ಟ್ರಸ್ಟ್ ನ ಕಾರ್ಯಕರ್ತರು,ಯನೋಪೋಯ ಕಾಲೇಜು ಮತ್ತು ಆಸ್ಪತ್ರೆಯ ವೈದ್ಯರು ಸಿಬ್ಬಂದಿಗಳು, ವಿವಿಧ ಸಂಘ ಸಂಸ್ಥೆಗಳ ಕಾರ್ಯಕರ್ತರು ಹಾಜರಿದ್ದರು.

LEAVE A REPLY

Please enter your comment!
Please enter your name here