ಚಾರ್ಮಾಡಿ: ಡ್ರೋನ್ ಮೂಲಕ ಬೀಜ ಬಿತ್ತನೆ ಮಾಡಿದ ಅರಣ್ಯ ಇಲಾಖೆ ಮತ್ತು ಗುಜರಾತ್ ನಾ ಪ್ರೈಮ್ UAE ಸಂಸ್ಥೆ.

0

ಚಾರ್ಮಾಡಿ:  ಮಲೆನಾಡು ಭಾಗದಲ್ಲಿ ಬಾರಿ ಗಾಳಿ ಮಳೆಗೆ ಗುಡ್ಡ ಕುಸಿದಿತ್ತು. ಅದರ ಪರಿಣಾಮವಾಗಿ ಹೆಚ್ಚಿನ ಗಿಡಗಳನ್ನು ಬೆಳೆಸುವ ಮೂಲಕ ಮಣ್ಣು ಕುಸಿಯದಂತೆ ತಡೆಯಲು ಮನುಷ್ಯ ತೆರಳಿ ಗಿಡ ನೆಡೆದಂತಹ ಪ್ರದೇಶಗಳಲ್ಲಿ ಡ್ರೋನ್ ಮೂಲಕ ಬೀಜ ಬಿತ್ತನೆ  ಮಾಡಲಾಯಿತು.

ಚಾರ್ಮಾಡಿ ಘಾಟ್, ಬಿದ್ರುತಳ, ಮದುಗುಂಡಿ, ಮೇಗೂರು, ಸೇರಿದಂತೆ ಹಲವೆಡೆ ಗುಡ್ಡ ಕುಸಿತವಾಗಿ ಅಪಾರ ಪ್ರಮಾಣದ ಹಾನಿಯಾಗಿದ್ದಲ್ಲದೇ ಪ್ರಾಣ ಹಾನಿ ಸಹ ಸಂಭವಿಸಿತ್ತು.

ಅಂತಹ ಗ್ರಾಮಗಳನ್ನು ಗುರುತಿಸಿ ಅಲ್ಲಿ  ಸೆ.16ರಂದು ಡ್ರೋನ್ ಮೂಲಕ ಬೀಜ ಬಿತ್ತನೆ ಮಾಡಿದ್ದು , ಗುಡ್ಡ ಕುಸಿತ ತಡೆಗೆ ಪ್ರಯತ್ನ ನಡೆಸಲಾಗಿದೆ ಎಂದು ಮೂಡಿಗೆರೆ ವಲಯ ಅರಣ್ಯಾಧಿಕಾರಿ ಮೋಹನ್ ಕುಮಾರ್ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಮೂಡಿಗೆರೆ ವಲಯ ಅರಣ್ಯಾಧಿಕಾರಿ ಮೋಹನ್ ಕುಮಾರ್, ಹಿಟೆನ್ ಪಟೇಲ್, CTO, ಡ್ರೋನ್ ಸಂಸ್ಥಾಪಕ ಗುಜರಾತ್, ಉಪವಲಯ ಅರಣ್ಯಾಧಿಕಾರಿ ರಮೇಶ್, ಅರಣ್ಯ ರಕ್ಷಕ ಪರಮೇಶ್, ಚಾಲಕ ಸುಮಂತ್, ಅರಣ್ಯ ದಿನಕೂಲಿಕ ದಿನೇಶ್ ಉಪಸ್ಥಿತರಿದರು.

LEAVE A REPLY

Please enter your comment!
Please enter your name here