ಬ್ಲಾಕ್ ಕಾಂಗ್ರೆಸ್ ಅಲ್ಪ ಸಂಖ್ಯಾತ ಘಟಕ ಬೆಳ್ತಂಗಡಿ ಗ್ರಾಮೀಣ ಮತ್ತು ನಗರ ಸಭೆ

0

ಬೆಳ್ತಂಗಡಿ: ಬ್ಲಾಕ್ ಕಾಂಗ್ರೆಸ್ ಅಲ್ಪ ಸಂಖ್ಯಾತ ಘಟಕ ಬೆಳ್ತಂಗಡಿ ಗ್ರಾಮೀಣ ಮತ್ತು ನಗರ ಇದರ ಸಭೆಯು ಬ್ಲಾಕ್ ಕಾಂಗ್ರೆಸ್ ನಗರದ ಅಧ್ಯಕ್ಷ ಶೈಲೇಶ್ ಕುಮಾರ್ ರವರ ನೇತೃತ್ವದಲ್ಲಿ ಗ್ರಾಮೀಣ ಬ್ಲಾಕ್ ಅಧ್ಯಕ್ಷ ಬಿ.ಅಶ್ರಫ್ ನೆರಿಯ ಇವರ ಅಧ್ಯಕ್ಷತೆಯಲ್ಲಿ ಬ್ಲಾಕ್ ಕಾಂಗ್ರೆಸ್ ಕಛೇರಿಯಲ್ಲಿ ನಡೆಯಿತು.

ಸಭೆಯಲ್ಲಿ ಸೆ.20 ರಂದು  ಮಂಗಳೂರಿನಲ್ಲಿ ನಡೆಯಲಿರುವ ಸರಕಾರದ ತಾರತಮ್ಯ ನೀತಿಯ ವಿರುದ್ದ ಮಂಗಳೂರು ಮೌನ ಪ್ರತಿಭಟನೆ ಬಗ್ಗೆ ಚರ್ಚೆನಡೆಯಿತು.

ಈ ಸಂದರ್ಭದಲ್ಲಿ  ಕೆ.ಪಿ.ಸಿ.ಸಿ.ಅಲ್ಪಸಂಖ್ಯಾತರ ಘಟಕದ ಸಂಘಟಣ ಕಾರ್ಯದರ್ಶಿಯಾದ ಅಬಿಬುಲ್ಲಾ ಕಣ್ಣೂರು,  ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ.ಉಪಾಧ್ಯಕ್ಷ ಅಬ್ದುಲ್ ಸಮದ್ , ಖಾಲಿದ್ ಕೆ.ಎಚ್ ಕಕ್ಯಾನ , ಬೆಳ್ತಂಗಡಿ ಹುಸೈನ್ ಕುಳೂರು, ದ.ಕ.ಜಿಲ್ಲಾ ಕಾಂಗ್ರೆಸ್ ಮಾಹಿತಿ ತಂತ್ರಜ್ಞಾನ ಘಟಕದ ಅಧ್ಯಕ್ಷ ಅಲೆಸ್ಟಿನ್ ಡಿಕುನ್ಹ, ಜಿಲ್ಲಾ ಕಾಂಗ್ರೆಸ್ ಅಲ್ಪ ಸಂಖ್ಯಾತರ ಘಟಕದ ಸಂಘಟನಾ ಕಾರ್ಯದರ್ಶಿ ಕೆರೀಂಗೇರುಕಟ್ಟೆ, ಮಹಮ್ಮದ್ ಕಾಜೂರು, ಬ್ಲಾಕ್ ಅಲ್ಪಸಂಖ್ಯಾತರ ಉಭಯ ಘಟಕಗಳ ಪ್ರಧಾನ ಕಾರ್ಯದರ್ಶಿ ರೋಶನ್ ಸೆಬಾಸ್ಟಿನ್ ಮುಂಡಾಜೆ,   ಮೇರಿಟಾಪಿಂಟೋ ಕಳಿಯ, ಸಂಘಟನಾ ಕಾರ್ಯದರ್ಶಿಗಳಾದ ಮಹಮ್ಮದ್ ನಝೀರ್ ಶಕ್ತಿನಗರ, ರಮೀಝ್ ಬೆಳ್ತಂಗಡಿ ಮುಂತಾದ ನಾಯಕರುಗಳು ಉಪಸ್ಥಿತರಿದ್ದರು.

ನೂತನವಾಗಿ ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಕಾರ್ಮಿಕ ಘಟಕದ ಅಧ್ಯಕ್ಷರಾಗಿ ಆಯ್ಕೆಯಾದ ಮೆಹಬೂಬ್ ಬೆಳ್ತಂಗಡಿ ಇವರನ್ನು ಸನ್ಮನಿಸಲಾಯಿತು.

LEAVE A REPLY

Please enter your comment!
Please enter your name here