ಉಜಿರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಕಟ್ಟಡಕ್ಕೆ ಶಿಲಾನ್ಯಾಸ

0

ಉಜಿರೆ : ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ನೂತನವಾಗಿ 3 ಕೋಟಿ ವೆಚ್ಚದಲ್ಲಿ ನಿರ್ಮಾಣ ಗೊಳ್ಳಲಿರುವ ನೂತನ ಕಟ್ಟಡ ಮತ್ತು ಗೋದಾಮು ಕಟ್ಟಡಕ್ಕೆ ಶೀಲಾನ್ಯಾಸ ಸೆ.17 ರಂದು ನಡೆಯಿತು. ಉಜಿರೆ ಜನಾರ್ದನ ದೇವಸ್ಥಾನದ ಶರತ್ ಕೃಷ್ಣ ಪಡುವೆಟ್ನಯ ಶೀಲಾನ್ಯಾಸ ನೆರವೇರಿದರು. ಶಾಸಕ ಹರೀಶ್ ಪೂಂಜಾ, ವಿಧಾನ ಪರಿಷತ್ ಶಾಸಕ ಪ್ರತಾಪ್ ಸಿಂಹ ನಾಯಕ್, ಉಜಿರೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಪುಷ್ಪಾವತಿ ಆರ್. ಶೆಟ್ಟಿ, ಉಪಾಧ್ಯಕ್ಷ ರವಿ ಕುಮಾರ್ ಬರೆಮೇಲು,ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಸಂಘದ ಅಧ್ಯಕ್ಷ ಇಚ್ಚಿಲ ಸುಂದರ ಗೌಡ ಅಧ್ಯಕ್ಷತೆ ವಹಿಸಿದ್ದರು. ಸಂಘದ ನಿರ್ದೇಶಕರು, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಸರಸ್ವತಿ ಸಿ. ರೈ, ಸಿಬ್ಬಂದಿಗಳು, ಸದಸ್ಯರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಸುಂದರ ಗೌಡ ಮತ್ತು ಅವರ ಪುತ್ರ ಅಶ್ವಥ್ ಇ. ಎಸ್. ರವರ ಸಿಮೆಂಟ್ ಪೀಠೋಪರರಣ ಘಟಕದ ಚಿನ್ಮಯಿ ಇಂಡಸ್ಟ್ರಿಯನ್ನು ಶಾಸಕ ಹರೀಶ್ ಪೂಂಜಾ ಉದ್ಘಾಟಿಸಿದರು ಬಳಿಕ ಸಂಘದ 2021-22 ನೇ ಸಾಲಿನ ಮಹಾ ಸಭೆ ನಡೆಯಿತು.

ಸಂಘದ ನಿರ್ದೇಶಕರು, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಸರಸ್ವತಿ ಸಿ. ರೈ, ಸಿಬ್ಬಂದಿಗಳು, ಸದಸ್ಯರು ಉಪಸ್ಥಿತರಿದ್ದರು. ಬಳಿಕ ಸಂಘದ 2021-22 ನೇ ಸಾಲಿನ ಮಹಾ ಸಭೆ ನಡೆಯಿತು.ಮಹಾಸಭೆಯಲ್ಲಿ ಸ್ವಚ್ಛ ಹಿ ಪ್ರಶಸ್ತಿ ಪುರಸ್ಕಾರಗೊಂಡ ಉಜಿರೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪಿ. ಎಚ್.ಪ್ರಕಾಶ ಶೆಟ್ಟಿ ನೊಚ್ಚ ಇವರನ್ನು ಸನ್ಮಾನಿಸಲಾಯಿತು.

LEAVE A REPLY

Please enter your comment!
Please enter your name here