ವಿಶ್ವಕಮಾ೯ಭ್ಯುದಯ ಸಭಾ ಲಾಯಿಲ- ಬೆಳ್ತಂಗಡಿ ವಿಶ್ವ ಕರ್ಮಯಜ್ಞ ಮತ್ತು ಪೂಜೆ ಹಾಗೂ ಪಾಕಶಾಲಾ ಉದ್ಘಾಟನೆ

0

ಬೆಳ್ತಂಗಡಿ: ವಿಶ್ವಕಮಾ೯ಭ್ಯುದಯ ಸಭಾ ಲಾಯಿಲ ಬೆಳ್ತಂಗಡಿ ಇದರ ವತಿಯಿಂದ ಪರಮಪೂಜ್ಯ ಶ್ರೀ ಕಾಲಹಸ್ತೇಂದ್ರ ಸರಸ್ವತಿ ಮಹಾಸ್ವಾಮೀಜಿಯವರ ದಿವ್ಯ ಆಶೀರ್ವಾದದೊಂದಿಗೆ, ಶಿವಪ್ರಸಾದ ಪುರೋಹಿತ್ ಸವಣಾಲು ಇವರ ಪೌರೋಹಿತ್ವದಲ್ಲಿ ವಿಶ್ವ ಕರ್ಮಯಜ್ಞ ಮತ್ತು ಪೂಜೆ ಹಾಗೂ ಪಾಕಶಾಲಾ ಉದ್ಘಾಟನಾ ಸಮಾರಂಭವು ಲಾಯಿಲದ ಸಂಘದ ಸಭಾಭವನದಲ್ಲಿ ಸೆ.17ರಂದು ಜರುಗಿತು.

ಪಾಕಶಾಲೆಯ  ಉದ್ಘಾಟನೆಯನ್ನು ಶಾಸಕ ಹರೀಶ್ ಪೂಂಜ ನೆರವೇರಿಸಿ, ಜಗತ್ತಿಗೆ ಶಿಲ್ಪಕಲೆ ಪರಂಪರೆಯನ್ನು ಪರಿಚಯಿಸಿದರು. ವಿಶ್ವಕರ್ಮ ಸಮಾಜದವರು ಈ ಸಮಾಜದ‌ ಅಭಿವೃದ್ಧಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು.

ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಲಾಯಿಲ ವಿಶ್ವಕರ್ಮಾಭ್ಯುದಯ ಸಭಾದ ಅಧ್ಯಕ್ಷ ಗೋಪಾಲ ಆಚಾರ್ಯ ಕನ್ನಾಜೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ನವೋದಯ ವಿಶ್ವಬ್ರಾಹ್ಮಣ ಸಂಘ ಅಂಡಿಂಜೆ ಇದರ ಅಧ್ಯಕ್ಷ ಪ್ರಭಾಕರ ಆಚಾರ್ಯ, ವಿಸ್ತೃತ ಕಟ್ಟಡ ಸಮಿತಿ ವಿಶ್ವಕರ್ಮಾಭ್ಯುದಯ ಅಧ್ಯಕ್ಷ ರಾಘವೇಂದ್ರ ಆಚಾರ್ಯ, ಗಾಯತ್ರಿ ಮಹಿಳಾ ಮಂಡಳಿ ಬೆಳ್ತಂಗಡಿ ಅಧ್ಯಕ್ಷ ವಸಂತಿ ಮೋಹನ ಆಚಾರ್ಯ ಉಪಸ್ಥಿತರಿದ್ದರು.

ಸನ್ಮಾನ ಕಾರ್ಯಕ್ರಮ:

ಈ ಸಂದರ್ಭದಲ್ಲಿ ರಾಷ್ಟ್ರ ಪ್ರಶಸ್ತಿ ಪುರಸ್ಕೃತ , ಶಿಕ್ಷಕರು ದಿವಾಕರ ಆಚಾರ್ಯ, ಶ್ರೀ ಗಾಯತ್ರಿ ವಿಶ್ವಕರ್ಮ ಮ.ಮಂಡಳಿ ಮಾಜಿ ಅಧ್ಯಕ್ಷರು ರೀತಾ ವೈ ಆಚಾರ್ಯ, ನಗರ ಪಂಚಾಯತ್  ನಾಮ ನಿರ್ದೇಶನ ಸದಸ್ಯ ಪ್ರಕಾಶ್ ಆಚಾರ್ಯ, ಸವಣಾಲು ಶಿಕ್ಷಣ ಸಾರಥಿ -2022 ಪ್ರಶಸ್ತಿ ಪುರಸ್ಕೃತ ರಾಜೇಶ್ ಆಚಾರ್ಯ, ಕೈಪೋಡಿ, ಗುಮಾಸ್ತರ, ಪಂ.ಇಂ.ಉ ವಿಭಾಗದ ಸರಸ್ವತಿ ನಿರಂಜನ ಆಚಾರ್ಯ, ಅತೀ ಚಿಕ್ಕ ಡಾಟ್ ಮಂಡಲ ರಚನೆ ಮೂಲಕ ವಿಶ್ವದಾಖಲೆ ಮಾಡಿದ ಕು.ಸುರಕ್ಷಾ ಕನ್ನಾಜೆ, ಹೆಟ್ಲೊಟ್ಟು ಸಿ ಎ ಬ್ಯಾಂಕ್ ನಿರ್ದೇಶಕರು ಕೆ ನಾರಾಯಣ ಆಚಾರ್ಯ,  ಸ್ಪಂದನ ಚಾನೆಲ್ ನಿರೂಪಕಿ ಕು.ಕೀರ್ತಿ ಎಸ್ ಕೊಕ್ರಾಡಿ ಇವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಅಧ್ಯಕ್ಷರು ಗೋಪಾಲ ಆಚಾರ್ಯ ಕನ್ನಾಜೆ, ಕಾರ್ಯದರ್ಶಿ ಗಣೇಶ್ ಆಚಾರ್ಯ ಬಲ್ಯಾಯಕೋಡಿ, ಸಹ ಕಾರ್ಯದರ್ಶಿ ಸದಾನಂದ ಆಚಾರ್ಯ ಸುಲ್ಕೇರಿಮೊಗ್ರು, ಕೋಶಾಧಿಕಾರಿ ಯೋಗೀಶ ಆಚಾರ್ಯ ಸವಣಾಲು, ಸಂಘಟನಾ ಕಾರ್ಯದರ್ಶಿ ರಾಘವೇಂದ್ರ ಆಚಾರ್ಯ ನೈಕುಳಿ ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರು ಮತ್ತು ಸರ್ವ ಸದ್ಸಯರು , ಶ್ರೀ ಗಾಯತ್ರಿ ವಿಶ್ವಕರ್ಮ ಮಹಿಳಾ ಸಂಘ ಉಪಸ್ಥಿತರಿದ್ದರು.

ಗಾಯತ್ರಿ ಪ್ರಾಥಿ೯ಸಿದರು. ಉಪಾಧ್ಯಕ್ಷ ಸೀತಾರಾಮ ಆಚಾರ್ಯ ವೇಣೂರು ಇವರು ಸ್ವಾಗತಿಸಿದರು

LEAVE A REPLY

Please enter your comment!
Please enter your name here