ಇಳಂತಿಲ: ಜಾಗೃತಿಗಾಗಿ ಬೀದಿನಾಟಕ ಕಾರ್ಯಕ್ರಮ

0

ಇಳಂತಿಲ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿಸಿ ಟ್ರಸ್ಟ್ (ರಿ) ಗುರುವಾಯನಕೆರೆ ಯೋಜನಕಚೇರಿ ವತಿಯಿಂದ ಜ್ಞಾನ ವಿಕಾಸ ಕಾರ್ಯಕ್ರಮದಡಿಯಲ್ಲಿ ಕಣಿಯೂರ್ ವಲಯದ ಇಳಂತಿಲ ಕಾರ್ಯಕೇತ್ರದಲ್ಲಿ ಕೊರೋನ ಜಾಗೃತಿ, ರಸ್ತೆ ನಿಯಮ, ಮೊಬೈಲ್ ಬಳಕೆ,ಪ್ಲಾಸ್ಟಿಟಿಕ್ ದುರ್ಬಳಕೆ ಕುರಿತಾದ ಬೀದಿನಾಟಕ ಕಾರ್ಯಕ್ರಮ ಹಮ್ಮಿಕೊಂಡಿದ್ದು ರಾಮಕುಂಜೇಶ್ವರ ಕಾಲೇಜಿನ ಪ್ರಾಂಶುಪಾಲರಾದ ಗಣರಾಜ ಕುಂಬ್ಳೆ ರವರು ತಮ್ಕಿ ಭಾರಿಸುವ ಮೂಲಕ ಕಾರ್ಯಕ್ರಮ ಕ್ಕೆ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ತಾಲೂಕಿನ ಯೋಜನಾಧಿಕಾರಿಯಾದ ಯಶವಂತ ಯಸ್, ಒಕ್ಕೂಟ ಅಧ್ಯಕ್ಷ ಬಾಲಕೃಷ್ಣ, ಮೇಲ್ವಿಚಾರಕಿ ಪ್ರೇಮ, ಕೇಂದ್ರ ಸದಸ್ಯರು ಉಪಸ್ಥಿತರಿದ್ದರು.

ಬೀದಿನಾಟಕವನ್ನು ಸಂಸಾರ ಕಲಾ ತಂಡ ಜೋಡುಮಾರ್ಗದ ಮೌನೇಶ್ ವಿಶ್ವಕರ್ಮ ದ ಬಳಗದವರು ನಡೆಸಿಕೊಟ್ಟರು. ಜ್ಞಾನ ವಿಕಾಸ ಸಮನ್ವಯಧಿಕಾರಿ  ಹರಿಣಿ. ಎಂ ಕಾರ್ಯಕ್ರಮ ನಿರೂಪಿಸಿದರು. ಸೇವಾಪ್ರತಿನಿಧಿ ವಸಂತಿರವರು ಧನ್ಯವಾದವಿತ್ತರು.

LEAVE A REPLY

Please enter your comment!
Please enter your name here