ಗುರುವಾಯನಕೆರೆ  ಸ ಹಿ ಪ್ರಾ  ಶಾಲೆಯಲ್ಲಿ “ನಮ್ಮ ಶಾಲೆ ನಮ್ಮ ಕೊಡುಗೆ” ವಿನೂತನ ಕಾರ್ಯಕ್ರಮ

0

ಗುರುವಾಯನಕೆರೆ: ಗುರುವಾಯನಕೆರೆ  ಸರಕಾರಿ ಹಿರಿಯ ಪ್ರಾಥಮಿಕ  ಶಾಲೆಯ ಸರ್ವತೋಮುಖ ಅಭಿವೃದ್ಧಿಗಾಗಿ ಹಳೆ ವಿದ್ಯಾರ್ಥಿಗಳ ದಾನಿಗಳ ಪೋಷಕರ, ಸಮುದಾಯದ ಸಹಕಾರವು ಪಡೆಯಲು ಹಮ್ಮಿಕೊಂಡಿರುವ ನಮ್ಮ ಶಾಲೆ ನಮ್ಮ ಕೊಡುಗೆ ಎಂಬ ವಿನೂತನ ಯೋಜನೆಯನ್ನು  ಶಾಸಕ  ಹರೀಶ್ ಪೂಂಜಾ ರವರು ಸೆ.17ರಂದು ಉದ್ಘಾಟಿಸಿದರು.

ಈ ವಿನೂತನ ಯೋಜನೆಯ ಮೂಲಕ ಶಾಲೆಯ ಸರ್ವತೋಮುಖ ಅಭಿವೃದ್ಧಿ ಖಂಡಿತವಾಗಿ ಸಾಧ್ಯವಾಗುತ್ತದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿ ಈ ಯೋಜನೆಗೆ ಮೊದಲದೇಣಿಗೆಯನ್ನು  ನೀಡಿ ಶುಭವನ್ನು ಹಾರೈಸಿದರು. ಹಾಗೂ ಶಾಲೆಯ ಸುರಕ್ಷತೆಗಾಗಿ ಶಾಲಾ ಆವರಣದಲ್ಲಿ ಸಿಸಿ ಟಿವಿ ಅಳವಡಿಸಿ ಕೊಡುವುದಾಗಿ ಭರವಸೆ ನೀಡಿದ್ದು ಮಾತ್ರವಲ್ಲದೇ ಮುಂದಿನ ದಿನಗಳಲ್ಲಿ ಗುರುವಾಯನಕೆರೆ ಶಾಲೆಯನ್ನು ಮಾದರಿ ಶಾಲೆಯನ್ನಾಗಿ ರೂಪಿಸುವಲ್ಲಿ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತುಯ ಅಧ್ಯಕ್ಷರಾದ ಹಾಜಿ ಅಬ್ದುಲ್ ಲತೀಫ್ ರವರು ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಗ್ರಾಮ ಪಂಚಾಯತ್ ಅಧ್ಯಕ್ಷೆ  ಆಶಾಲತಾ, ಉಪಾಧ್ಯಕ್ಷ  ಪ್ರದೀಪ್ ಶೆಟ್ಟಿ,  ಸದಸ್ಯರಾದ  ಗಣೇಶ್, ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷರಾದ ಹೇಮಂತ ಕುಮಾರ್ ಯರ್ಡೂರು, ಗುರುವಾಯನಕೆರೆ ಕ್ಲಸ್ಟರ್ ಸಿ, ಆರ್ ಪಿ ರಾಜೇಶ್ ಸವಣಾಲ್ ಹಳೆ ಪದಾಧಿಕಾರಿಗಳು, ಪೋಷಕರು ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕಿಯವರಾದ  ಉಮಾ ಎನ್ ರವರು ಪ್ರಾಸ್ತಾವಿಕ ನುಡಿಗಳೊಂದಿಗೆ ಸ್ವಾಗತಿಸಿ, ಸಹ ಶಿಕ್ಷಕಿ  ವೆರೋನಿಕಾ ಮಸ್ಕರೇನಸ್ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here