ನಾಳ ದೇವಸ್ಥಾನದಲ್ಲಿ ಯಕ್ಷಗಾನ ತಾಳಮದ್ದಳೆ ಸಪ್ತಾಹ ಮತ್ತು ಹಿರಿಯ ಕಲಾವಿದರ ಸಂಸ್ಮರಣೆ

0

ನಾಳ : ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಮತ್ತು ಶ್ರೀ ದುರ್ಗಾಪರಮೇಶ್ವರಿ ಕೃಪಾ ಪೋಷಿತ ದಶಾವತಾರ ಯಕ್ಷಗಾನ ಮಂಡಳಿ ನಾಳ ಮತ್ತು ಯಕ್ಷಾಭಿಮಾನಿಗಳು ಗೇರುಕಟ್ಟೆ-ನಾಳ ಇವರ ಸಂಯೋಜನೆಯಲ್ಲಿ ಯಕ್ಷಗಾನ ತಾಳಮದ್ದಳೆ ಸಪ್ತಾಹ ಮತ್ತು ಸ್ಥಳೀಯ ಕೀರ್ತಿಶೇಷ ಕಲಾವಿದರ ಸಂಸ್ಮರಣೆಯು ಸೆ.18.ರಂದು ದೇವಸ್ಥಾನ ಅನ್ನಪೂರ್ಣ ಛತ್ರದಲ್ಲಿ ವಸಂತ ಮಜಲು ದೀಪ ಪ್ರಜ್ವಲಿಸುವ ಮೂಲಕ ಚಾಲನೆ ನೀಡಿ ಶುಭಹಾರೈಸಿದರು.

ಸೆ.18 ರಿಂದ ನಾಳ ಶ್ರೀ ಕೃಷ್ಣಯ್ಯ ಮಾಸ್ಟರ್ ವೇದಿಕೆಯಲ್ಲಿ ಅರ್ಕುಳ ಸುಬ್ರಾಯ ಆಚಾರ್ಯ ಪ್ರತಿಷ್ಠಾನದ ಸಹಕಾರದಿಂದ ಕೀರ್ತಿಶೇಷ ಕಲಾವಿದರಾದ ಆರ್.ಎನ್ ಸಂಪಿಗೆತ್ತಾಯ, ಕೆ. ಮೋನಪ್ಪ ಆಚಾರ್ಯ ಗೇರುಕಟ್ಟೆ, ನಾರಾಯಣ ಭಟ್ ಕುಂಟಿನಿ, ಕೊರಗಪ್ಪ ಪೂಜಾರಿ ಮೆದಿನ, ಕಿಟ್ಟಣ್ಣ ಶೆಟ್ಟಿ ರಾಯಿಮಾರು, ರುಕ್ಮಯ್ಯ ಆಚಾರ್ಯ ನಾಳ ಇವರ ಸಂಸ್ಮರಣೆಯೊಂದಿಗೆ ಪ್ರತಿದಿನ ತಾಳಮದ್ದಳೆ ನಡೆಯಲಿದೆ.

ಪ್ರಥಮ ದಿನ ಪಟ್ಟಾಭಿಷೇಕ ಅತಿಕಾಯ ಮೋಕ್ಷ,‌ ಭೀಷ್ಮ ಪ್ರತಿಜ್ಞೆ, ಕರ್ಣಾರ್ಜುನ,‌ ವಾಮನ ಚರಿತ್ರೆ, ರುಕ್ಮಾಂಗದ ಚರಿತ್ರೆ ಮತ್ತು ಸುಧನ್ವ ಕಾಳಗ ಪ್ರಸಂಗದಲ್ಲಿ ಭಾಗವತರಾಗಿ ಪ್ರಶಾಂತ ರೈ ಪಂಜ, ಮಹೇಶ್ ಕನ್ಯಾಡಿ, ಕೆ.ಜೆ ಗಣೇಶ್ ಮತ್ತು ಬಳಗ, ಭವ್ಯಶ್ರೀ ಕುಲ್ಕುಂದ, ಭರತ್ ರಾಜ್ ಶೆಟ್ಟಿ ಸಿದ್ಧಕಟ್ಟೆ, ಶ್ರೀನಿವಾಸ ಗೌಡ ಬಳ್ಳಮಂಜ, ರಮೇಶ್ ಭಟ್ ಪುತ್ತೂರು ಮತ್ತು ಹಿಮ್ಮೇಳದಲ್ಲಿ ಚಂದ್ರಶೇಖರ ಆಚಾರ್ಯ ಗುರುವಾಯನಕೆರೆ, ವೆಂಕಟೇಶ್ ಮೂರ್ಜೆ, ಯೋಗಿಶ್ ಕೊಂದಲಕೋಡಿ, ಸತೀಶ್ ವೇಣೂರು ಅರ್ಥಧಾರಿಗಳಾಗಿ ಶಂಭು ಶರ್ಮ ವಿಟ್ಲ, ಪೂಕಳ ಲಕ್ಷ್ಮೀನಾರಾಯಣ ಭಟ್, ಸುಣ್ಣಂಬಳ ವಿಶ್ವೇಶ್ವರ ಭಟ್, ಜಬ್ಬಾರ್ ಸಮೋ, ರಾಧಾಕೃಷ್ಣ ಕಲ್ಚಾರ್, ತಾರಾನಾಥ ವರ್ಕಾಡಿ, ಸುಬ್ರಾಯ ಹೊಳ್ಳ ಕಾಸರಗೋಡು, ಭಾಸ್ಕರ ರೈ ಕುಕ್ಕುವಳ್ಳಿ, ಉಮೇಶ್ ಗೇರುಕಟ್ಟೆ, ಡಾ.ವಿನಾಯಕ ಭಟ್ ಗಾಳಿಮನೆ, ರಾಘವೇಂದ್ರ ಆಸ್ರಣ್ಣ ನಾಳ, ಡಾ.ವೈಕುಂಠ ಹೇರ್ಳೆ ಪಾರಂಪಳ್ಳಿ, ಗಣರಾಜ ಕುಂಬ್ಳೆ, ರವಿರಾಜ ಪನೆಯಾಳ, ಕರುಣಾಕರ ಶೆಟ್ಟಿ ಬೆಳ್ತಂಗಡಿ, ದಿವಾಕರ ಆಚಾರ್ಯ ಗೇರುಕಟ್ಟೆ, ನಾ.ಕಾರಂತ ಪೆರಾಜೆ, ರಾಘವ.ಎಚ್ ಭಾಗವಹಿಸಿದ್ದರು.

 

 

ಸಪ್ತಾಹವನ್ನು ಶ್ರೀ ಕ್ಷೇತ್ರದ ಪ್ರಧಾನ ಅರ್ಚಕರಾದ ಶ್ರೀ ರಾಘವೇಂದ್ರ ಆಸ್ರಣ್ಣ ದೀಪ ಬೆಳಗಿಸಿ ಉದ್ಘಾಟಿಸಲಿದ್ದು ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಭುವನೇಶ ಗೇರುಕಟ್ಟೆ, ಕಳಿಯ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ವಸಂತ ಮಜಲು, ಬೆಳ್ತಂಗಡಿ ಎಲ್.ಐ.ಸಿ ಅಭಿವೃದ್ಧಿ ಅಧಿಕಾರಿಗಳಾದ ಉದಯಶಂಕರ.ಎಂ, ವಿಶ್ವೇಶ್ವರ ಶೆಟ್ಟಿ ಮತ್ತು ಗುಂಡೂರಾವ್ ನಾಳ ಉಪಸ್ಥಿತರಿರುತ್ತಾರೆ.

ಸಮಾರೋಪದಲ್ಲಿ ಡಾ.ಸುರೇಶ್ ಕುಮಾರ್ ಶೆಟ್ಟಿ ತುಂಬೆಜಾಲ್, ಕಳಿಯ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಸುಭಾಷಿಣಿ ಗೌಡ, ಎಲ್.ಐ.ಸಿ ಬಂಟ್ವಾಳ ಅಭಿವೃದ್ಧಿ ಅಧಿಕಾರಿಗಳಾದ ಮಧ್ವರಾಜ್, ದಿನೇಶ್.ಎಂ, ನಾಳ ದೇವಳದ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಯಾದವ ಗೌಡ ಮುದ್ದುಂಜ, ಅಶೋಕ್ ಆಚಾರ್ಯ ನಾಳ, ದೇವಳದ ಪ್ರಬಂಧಕರಾದ ಗಿರೀಶ್ ಶೆಟ್ಟಿ ನಾಳ ಭಾಗವಹಿಸಿದ್ದಾರೆ. ಕಾರ್ಯಕ್ರಮದ ಸಂಯೋಜಕರಾದ ಕರುಣಾಕರ ಶೆಟ್ಟಿ ಹಾಗೂ ಸ್ಥಳೀಯ ಯಕ್ಷಗಾನ ಅಭಿಮಾನಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here