ಬೆಳ್ತಂಗಡಿ: ಕೃಷಿ ಇಲಾಖೆ, ಸುದ್ದಿ ಕೃಷಿ ಸೇವಾ ಕೇಂದ್ರದಿಂದ ಕೃಷಿಗರಿಗೆ ತರಬೇತಿ ಕಾರ್ಯಾಗಾರ

0

ಬೆಳ್ತಂಗಡಿ: ಕೃಷಿ ಇಲಾಖೆ ಹಾಗೂ ಸುದ್ದಿ ಕೃಷಿ ಸೇವಾ ಕೇಂದ್ರದ ಸಹಯೋಗದಲ್ಲಿ ಕೃಷಿಕರಿಗೆ ಮಾಹಿತಿ ಕಾರ್ಯಾಗಾರ ಸೆ. 19 ರಂದು ಬೆಳ್ತಂಗಡಿ ಅಂಬೇಡ್ಕರ್ ಭವನದಲ್ಲಿ ಜರುಗಿತು.

ಸಮಾರಂಭವನ್ನು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ರಂಜಿತ್ ಉದ್ಘಾಟಿಸಿದರು.

ಪಿ.ಎಂ.ಎಫ್.ಎಂ.ಇ. ಜಿಲ್ಲಾ ಸಂಪನ್ಮೂಲ ವ್ಯಕ್ತಿ ಡಾ. ಎ.ಎ. ಫಝಲ್ ಅವರು ಪ್ರಧಾನಮಂತ್ರಿ ಕಿರು ಆಹಾರ ಸಂಸ್ಕರಣಾ ಉದ್ದಿಮೆ ಔಪಚಾರೀಕರಣ ಯೋಜನೆಯ ಬಗ್ಗೆ ಮಾಹಿತಿ ನೀಡಿದರು.

ಸುದ್ದಿ ಕೃಷಿ ಸೇವಾ ಸಂಸ್ಥೆಯ ಬಗ್ಗೆ ಗಣೇಶ್ ಎನ್. ಕಲ್ಲರ್ಪೆ ವಿವರಿಸಿದರು.  ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಚಂದ್ರಶೇಖರ್, ಸುದ್ದಿ ಕೃಷಿ ಸೇವಾ ಸಂಸ್ಥೆಯ ಚೇತನ್ ಶರ್ಮಾ ಉಪಸ್ಥಿತರಿದ್ದರು.

ಬೆಳ್ತಂಗಡಿ ಕೃಷಿ ಅಧಿಕಾರಿ ಹುಮೇರಾ ಜಬೀನ್ ಸ್ವಾಗತಿಸಿ, ಕೊಕ್ಕಡ ಕೃಷಿ ಅಧಿಕಾರಿ ಚಿದಾನಂದ ಹೂಗಾರ್ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here