ವೇಣೂರು ಕುಲಾಲ ಸ೦ಘದ ಮಹಾಸಭೆ, ಪ್ರತಿಭಾ ಪುರಸ್ಕಾರ ವಿತರಣೆ

0

ವೇಣೂರು: ಮೂಲ್ಯರ ಯಾನೆ ಕುಲಾಲರ ಸಂಘ ವೇಣೂರು ಘಟಕದ ಮಹಾಸಭೆ ಹಾಗೂ 12ನೇ ವರ್ಷದ ವಿದ್ಯಾರ್ಥಿವೇತನ ವಿತರಣಾ ಸಮಾರಂಭ ಸೆ.18ರಮದು ಇಲ್ಲಿಯ ಯುವಕ ಮಂಡಲದಲ್ಲಿ ಜರುಗಿತು.

ವೇಣೂರು ಪೊಲೀಸ್ ಠಾಣೆಯ ಪೊಲೀಸ್ ಹೆಡ್‌ಕಾನ್ಸ್‌ಸ್ಟೇಬಲ್ ರಾಜೇಶ್ ಎಂ. ಕಾರ್ಯಕ್ರಮವನ್ನು ಉದ್ಘಾಟಿಸಿ, ಜಾತಿ ಸಂಘಗಳು ಸಮುದಾಯದ ಏಳಿಗೆಗೆ ಶ್ರಮಿಸಬೇಕು. ಪ್ರತಿಯೊಬ್ಬರು ಕೀಳರಿಮೆ ಬಿಟ್ಟು ಅವಕಾಶಗಳನ್ನು ಬಳಸಿಕೊಂಡಾಗ ಉನ್ನತಸ್ಥಾನ ಪಡೆಯಲು ಸಾಧ್ಯ ಎಂದರು.

ಪೊಲೀಸ್ ಸಿಬ್ಬಂದಿ ಯತೀಂದ್ರ ಕೆ. ಮಾತನಾಡಿದರು. ಸಂಘದ ಅಧ್ಯಕ್ಷ ಗಣೇಶ್ ಕುಲಾಲ್ ಅಧ್ಯಕ್ಷತೆ ವಹಿಸಿದ್ದರು. ಸಂಘದ ಕಾರ್ಯದರ್ಶಿ ರುಕ್ಮಿಣಿ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು. ಗಿರೀಶ್ ಕುಲಾಲ್ ಬಡೆಕ್ಕಿಲ ವರದಿ ವಾಚಿಸಿದರು. ವೇಣೂರು ಗ್ರಾ.ಪಂ. ಅಧ್ಯಕ್ಷ ನೇಮಯ್ಯ ಕುಲಾಲ್ ಪ್ರಸ್ತಾವಿಸಿ, ಸ್ವಾಗತಿಸಿದರು. ಗಿರೀಶ್ ಕುಲಾಲ್ ಬರ್ತೇರು ನಿರೂಪಿಸಿದರು.

ಸಮ್ಮಾನ-ಪ್ರತಿಭಾ ಪುರಸ್ಕಾರ

ಪಿಯುಸಿಯಲ್ಲಿ ಸಾಧನೆಗೈದ ಸ್ವಸ್ತಿಕ್ ಮೂಲ್ಯ ಹಾಗೂ ರಮ್ಯಾ ಅವರನ್ನು ಸಮ್ಮಾನಿಸಿ ಗೌರವಿಸಲಾಯಿತು. ಶೈಕ್ಷಣಿಕವಾಗಿ ಸಾಧನೆಗೈದ ಸಮುದಾಯದ ೫೫ ಮಂದಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಪ್ರವೀಣ್ ಕುಮಾರ್ ವಾಚಿಸಿದರು.

LEAVE A REPLY

Please enter your comment!
Please enter your name here