ಅನುಗ್ರಹ ಶಾಲೆಯಲ್ಲಿ ಕಲರ್ಸ್ ಡೇ

0


ಉಜಿರೆ: ಅನುಗ್ರಹ ಶಾಲೆಯಲ್ಲಿ ಎಲ್.ಕೆ.ಜಿ, ಯು.ಕೆ.ಜಿ ಹಾಗೂ ಒಂದನೇ ತರಗತಿಯ ಪುಟಾಣಿಗಳಿಗೆ ‘ಕಲರ್‍ಸ್ ಡೇ( ಬಣ್ಣಗಳ ದಿನ) ಯನ್ನು ವಿನೂತನ ರೀತಿಯಲ್ಲಿ ವೈಭವದಿಂದ ಆಚರಿಸಲಾಯಿತು.

ಬ್ಯಾಂಡ್ ವಾದನದೊಂದಿಗೆ ಪುಟಾಣಿಗಳನ್ನು ಅವರ ಹೆತ್ತವರೊಂದಿಗೆ ಅನುಗ್ರಹ ಶಾಲಾ ಮಹಾದ್ವಾರದಿಂದ ಸಭಾಭವನಕ್ಕೆ ಶಿಸ್ತಿನಿಂದ ಕರೆತರಲಾಯಿತು.

ತದನಂತರ ಪುಟಾಣಿ ಮಕ್ಕಳ ಪ್ರಾರ್ಥನಾ ನೃತ್ಯದೊಂದಿಗೆ ಸಭಾಕಾರ್ಯವನ್ನು ಪ್ರಾರಂಭಿಸಲಾಯಿತು. ಪುಟಾಣಿ ವಿದ್ಯಾರ್ಥಿಗಳು ಗಣ್ಯರನ್ನು ಸ್ವಾಗತಿಸಿದರು. ವಿಭಿನ್ನ ಶೈಲಿಯಲ್ಲಿ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.

ಶಾಲೆಯ ಪ್ರಾಂಶುಪಾಲರಾದ ವಂದನೀಯ ಫಾ.  ವಿಜಯ್ ಲೋಬೋರವರು ಪ್ರಾಸ್ತವಿಕ ಮಾತುಗಳೊಂದಿಗೆ ಕಲರ್‍ಸ್ ಡೇಯ ಮಹತ್ವವನ್ನು ತಿಳಿಸಿದರು. ಶಾಲಾ ಆಡಳಿತ ಮಂಡಳಿಯ ಉಪಾಧ್ಯಕ್ಷರಾದ  ಅಂಟನಿ ಫೆರ್ನಾಂಡೀಸ್ ರವರು ಕಾರ್ಯಕ್ರಮಕ್ಕೆ ಶುಭಕೋರಿದರು.

ಕ್ರೀಡಾ ಚಟುವಟಿಕೆಗಳಲ್ಲಿ ವಿಜೇತ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಶಾಲಾ ಸಂಚಾಲಕರಾದ ವಂದನೀಯ ಫಾ. ಜೇಮ್ಸ್ ಡಿ’ಸೋಜ ರವರು ಈ ವಿನೂತನ ಕಾರ್ಯಕ್ರಮಕ್ಕೆ ಪುಟಾಣಿಗಳನ್ನು ಹರಸಿ, ಆಶೀರ್ವಚನ ನೀಡಿದರು. ವಿದ್ಯಾರ್ಥಿಗಳು ನೆರೆದವರೆಲ್ಲರನ್ನು ವಂದಿಸಿದರು. ಈ ಕಾರ್ಯಕ್ರಮದ ವೇದಿಕೆಯಲ್ಲಿ ಪಾಲಕ-ಪೋಷಕರ ಸಮಿತಿಯ ಉಪಾಧ್ಯಕ್ಷರಾದ ಆನಂದಕೃಷ್ಣರವರು ಹಾಗೂ ಆಡಳಿತ ಮಂಡಳಿಯ ಸದಸ್ಯರಾದ  ಪ್ರವೀಣ್ ಫೆರ್ನಾಂಡೀಸ್ ರವರು ಉಪಸ್ಥಿತರಿದ್ದರು.

ಕೆ.ಜಿ.ವಿಭಾಗದ ಮುಖ್ಯಸ್ಥೆಯಾದ  ಗ್ರೇಸಿ ಸಲ್ಡಾನರವರು ವಿದ್ಯಾರ್ಥಿಗಳಿಗೆ ಶುಭ ಕೋರಿದರು. ಈ ಕಾರ್ಯಕ್ರಮವನ್ನು ಶಿಕ್ಷಕಿಯಾದ  ವಿನ್ನಿಯವರು ನಿರೂಪಿಸಿ, ನಿರ್ವಹಿಸಿದರು.
ತದನಂತರ ಪುಟಾಣಿ ಮಕ್ಕಳಿಂದ ನಡೆದ ವೈವಿಧ್ಯಮಯ ಬಣ್ಣಗಳ ವಸ್ತ್ರಾಲಂಕಾರದಿಂದ ಕೂಡಿದ ನೃತ್ಯವು ಎಲ್ಲರ ಮನರಂಜಿಸಿತು. ಶಿಕ್ಷಕಿಯರಾದ ಸೆಲಿನ್ ಜೋಯ್ಸ್ ಹಾಗೂ ರೇಶ್ಮಾ ಸಹಕರಿಸಿದರು. ಈ ಆಕರ್ಷಿಕ ಕಾರ್‍ಯಕ್ರಮದ ಕೊನೆಯಲ್ಲಿ ವಿದ್ಯಾರ್ಥಿಗಳಿಗೆ ಸಿಹಿತಿಂಡಿಯನ್ನು ಹಂಚಲಾಯಿತು.

 

 

LEAVE A REPLY

Please enter your comment!
Please enter your name here