ಗುಂಡೂರಿಯಲ್ಲಿ ರಕ್ತ ಪರೀಕ್ಷಾ ಶಿಬಿರ

0


ಗುಂಡೂರಿ:  ಆರೋಗ್ಯವೇ ಭಾಗ್ಯ, ಈ ಭಾಗ್ಯ ವನ್ನು ಉಳಿಸಿ ಬೆಳೆಸಿ ಸಮಾಜದಲ್ಲಿ ನಾವು ಸುದೃಢ ವಾಗಿದ್ದರೆ ಮಾತ್ರ ಸ್ವಸ್ಥ ಸಮಾಜ ನಿರ್ಮಾಣ ವಾಗುದರಲ್ಲಿ ಸಂದೇಹವಿಲ್ಲ ಎಂದು ಶಿಬಿರದ ಸಭಾಧ್ಯಕ್ಷ ರಾಗಿ ಅರಂಬೋಡಿ ಗ್ರಾಮ ಪಂಚಾಯತ್ ನ ಉಪಾಧ್ಯಕ್ಷರು ಮತ್ತು ಗುಂಡೂರಿ ಹಾಲು ಉತ್ಪಾದಕರ ಸಹಕಾರಿ ಸಂಘ ಇದರ ಅಧ್ಯಕ್ಷರು ಆದ ಪ್ರವೀಣ್ ಚಂದ್ರ ಜೈನ್ ಜಂತೋಡಿಗುತ್ತು ಫಲಾನುಭವಿಗಳನ್ನು ಉದ್ದೇಶಿಸಿ ಮಾತನಾಡಿದರು.

ಅವರು  ಗುಂಡೂರಿಯ ತುಂಬೆದಲೆಕ್ಕಿ ಸಾರ್ವಜನಿಕ ಸತ್ಯನಾರಾಯಣ ಪೂಜಾ ಮಂದಿರದ ಸಭಾಭವನದಲ್ಲಿ‌ ಹಿಂದ್ ಲ್ಯಾಬ್ ಮಂಗಳೂರು ಇದರ ವೈದ್ಯರು ಸಿಬ್ಬಂದಿಗಳ ತಂಡದೊಂದಿಗೆ ನಡೆಸುವ ರಕ್ತ ಪರೀಕ್ಷೆ ಹಾಗೂ ಮಾಹಿತಿ ಕಾರ್ಯಾಗಾರದ ಈ ಶಿಬಿರವನ್ನು ಕರ್ನಾಟಕ ರಾಜ್ಯ ಸರ್ಕಾರದ ಕಾರ್ಮಿಕ ಇಲಾಖೆಯ ಮೂಲಕ ಮತ್ತು ಇದಕ್ಕೆಸಹಕಾರವಾಗಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಬಿ.ಸಿ.ಟ್ರಸ್ಟ್,ಗುರುವಾಯನಕೆರೆ(ರಿ) ಗುಂಡೂರಿ ಒಕ್ಕೂಟ ಕಾರ್ಮಿಕ ಇಲಾಖೆ ಬೆಳ್ತಂಗಡಿ ವೃತ್ತ, ಶ್ರೀಗುರು ಚೈತನ್ಯ ಸೇವಾ ಪ್ರತಿಷ್ಠಾನ ಚಾರಿಟೇಬಲ್ ಟ್ರಸ್ಟ್ (ರಿ), ಸೇವಾಶ್ರಮ ಗುಂಡೂರಿ, ಸಾಮೂಹಿಕ ಸತ್ಯನಾರಾಯಣ ಪೂಜಾ ಮಂದಿರ ತುಂಬೆದಲೆಕ್ಕಿ,ಗುಂಡೂರಿ ಹಾಲು ಉತ್ಪಾದಕರ ಸಹಕಾರಿ ಸಂಘ(ನಿ) ಸ್ಪಂದನ ದ.ಕ.ಜಿಲ್ಲಾ ಕಟ್ಟಡ ಕಾರ್ಮಿಕ‌ರ ಮತ್ತು ಇತರ ಕಾರ್ಮಿಕರ ಸಂಘ ಬೆಳ್ತಂಗಡಿ ತಾಲೂಕು ವಲಯ, ಮುಂತಾದ ಸಂಘಟನೆಯ ಸಂಯುಕ್ತಾಶ್ರಯದಲ್ಲಿ   ಸೆ.18 ರಂದು  ಆಯೋಜಿಸಲಾದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಈ ಸಂದರ್ಭದಲ್ಲಿ ಬೆಳ್ತಂಗಡಿ ತಾಲೂಕಿನ ಕಾರ್ಮಿಕ ಇಲಾಖೆಯ ನಿರೀಕ್ಷಕರಾದ ಎಸ್,ಎನ್,ಹರೀಶ್ ಇವರು ಕಾರ್ಮಿಕರ ಹಾಗೂ ಅವರ ಕುಟುಂಬಗಳಿಗೆ ಆರೋಗ್ಯದ ಕಾಳಜಿಯ ಜಾಗೃತಿ ಸಂದೇಶವನ್ನು ನೀಡಿದರು. ಮತ್ತು ಸ್ಪಂದನ ಸಂಸ್ಥೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಸಂತ ನಡ ರವರು ಕಾರ್ಮಿಕರ ಶ್ರೇಯೋಭಿವೃದ್ದಿಯ ಬಗ್ಗೆ ಮಾಹಿತಿ ನೀಡಿದರು.

ಹಿಂದ್ ಲ್ಯಾಬ್ ನ ವೈದ್ಯ ಡಾಕ್ಟರ್ ‌ಅನು‌ಪ್ರಶಾಂತ್ ಹಾಗೂ ಕಾರ್ಡಿನೇಟರ್  ಚಂದ್ರಿಕಾ ಹಾಗೂ ಸಹ ಸಿಬ್ಬಂದಿಗಳು ರಕ್ತ ಪರೀಕ್ಷೆ ಯ‌ ಬಗ್ಗೆ ‌ಶಿಬಿರಾರ್ಥಿಗಳಿಗೆ ಸಮಗ್ರ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಸತ್ಯನಾರಾಯಣ ಪೂಜಾ ಮಂದಿರ ತುಂಬೆದಲೆಕ್ಕಿ ಅಧ್ಯಕ್ಷ ಪಿ.ರಮೇಶ್ ಪೂಜಾರಿ ಪಡ್ಡಾಯಿ ಮಜಲು, ಮತ್ತು ಈ ಮಂದಿರದ ನಿಕಟಪೂರ್ವ ಅಧ್ಯಕ್ಷ ಶಾಂತಿರಾಜ್ ಜೈನ್,ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವೇಣೂರು ವಲಯದ ಮೇಲ್ವಿಚಾರಕರಾದ  ಶಾಲಿನಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜನಜಾಗೃತಿ ವೇದಿಕೆಯ ವಲಯಾಧ್ಯಕ್ಷ ‌ಹರೀಶ್ ಕುಮಾರ್ ಪೂಕ್ಕಿ, ಹಾಲು ಉತ್ಪಾದಕರ ಸಹಕಾರಿ ಸಂಘ ಇದರ ಕಾರ್ಯದರ್ಶಿ ರಾಜು ಪೂಜಾರಿ, ಆರಂಬೋಡಿ ಗ್ರಾಮ ಪಂಚಾಯತ್ ನ ಸದಸ್ಯೆ‌  ತೇಜಸ್ವಿ ಪ್ರವೀಣ್ ಆಚಾರ್, ಯಾದವ ಕುಲಾಲ್ ದರ್ಖಾಸ್ತು‌ಮನೆ ಮುಂತಾದವರು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಶ್ರೀಗುರು ಚೈತನ್ಯ ಸೇವಾ ಪ್ರತಿಷ್ಠಾನ ದ ಹೊನ್ನಯ್ಯ ಕಾಟಿಪಳ್ಳ ರವರು ನಿರೂಪಿಸಿದರೆ,  ಪ್ರವೀಣ್ ಆಚಾರ್ಯರು ಸ್ವಾಗತಿಸಿ ,ಸತೀಶ್ ಕುಲಾಲ್ ರವರು ಧನ್ಯವಾದ ಅರ್ಪಿಸಿದರು.

ಶಿಬಿರದ ವ್ಯವಸ್ಥೆಗೆ ಗುಂಡೂರಿ ಗ್ರಾಮದ ಉತ್ಸಾಹಿ ತರುಣರು ಸಹಕರಿಸಿದರು.

LEAVE A REPLY

Please enter your comment!
Please enter your name here