ಅಖಿಲ ಕರ್ನಾಟಕ ರಾಜ ಕೇಸರಿ ಟ್ರಸ್ಟ್ ಬೆಳ್ತಂಗಡಿ ವತಿಯಿಂದ ಉಚಿತ ಆರೋಗ್ಯ ಕಾರ್ಡ್ ನೋಂದಾವಣೆ ಶಿಬಿರ

0

ಬೆಳ್ತಂಗಡಿ:  ಅನುಗ್ರಹ ಜನಸೇವಾ ಕೇಂದ್ರ ಬೆಳ್ತಂಗಡಿ ಇದರ ಆಶ್ರಯದಲ್ಲಿ ನಗರ ಪಂಚಾಯತ್ ಬೆಳ್ತಂಗಡಿ ಮತ್ತು ಖಾಸಗಿ ಬಸ್ ನೌಕರರ ಸಂಘ ಬೆಳ್ತಂಗಡಿ ಇದರ ಸಹಯೋಗದಲ್ಲಿ ರಾಜ ಕೇಸರಿ ಸಂಘಟನೆ ಸಂಸ್ಥಾಪಕರಾದ ದೀಪಕ್ ಬೆಳ್ತಂಗಡಿ ಇವರ ನೇತೃತ್ವದಲ್ಲಿ 524ನೆಯ ಯೋಜನೆ ಬೃಹತ್ ಉಚಿತ ಆಭಾ ಆರೋಗ್ಯ ಕಾರ್ಡ್ ನೋಂದಾವಣೆ  ಶಿಬಿರವನ್ನು ಸೆ.19 ರಂದು ಬೆಳ್ತಂಗಡಿ ಬಸ್ ನಿಲ್ದಾಣದ ಬಳಿ ಹಮ್ಮಿಕೊಳ್ಳಲಾಯಿತು.

ಶಿಬಿರದ ಉದ್ಘಾಟನೆಯನ್ನು  ನಗರ ಪಂಚಾಯತ್ ಮುಖ್ಯ ಅಧಿಕಾರಿ ರಾಜೇಶ್ ಕೋಟ್ಯಾನ್ ನೆರವೇರಿಸಿದರು.

ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನುರಾಜ ಕೇಸರಿ ಸಂಘಟನೆ ಸಂಸ್ಥಾಪಕರ ದೀಪಕ್ ಜಿ ಬೆಳ್ತಂಗಡಿ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸುದ್ದಿ ಪತ್ರಿಕೆ ವರದಿಗಾರ ಕೆ.ಎನ್.ಗೌಡ, ಶ್ರೀ ದುರ್ಗಾ ಗ್ರಾಂಡ್ ಹೋಟೆಲ್ ಮಾಲಕ ಪ್ರವೀಣ್,  ಬೆಳ್ತಂಗಡಿ ಉದ್ಯಮಿ ಕೇಶವ ಭಂಡಾರಿ, ಬೆಳ್ತಂಗಡಿ  ಜೆಸಿಐ ಅಧ್ಯಕ್ಷ  ಸ್ವರೂಪ್  , ಬೆಳ್ತಂಗಡಿ ಖಾಸಗಿ ಬಸ್ ನೌಕರ ಸಂಘ  ಉಪಾಧ್ಯಕ್ಷ  ಪದ್ಮಪ್ರಸಾದ್ ಜೈನ್ ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಆರೋಗ್ಯ ಸಲಹೆಗಾರ ಅಜಯ್ ರಾಜ ಕೇಸರಿ ನಿರೂಪಣೆ ಮತ್ತು ಧನ್ಯವಾದ ಗೈದರು.

LEAVE A REPLY

Please enter your comment!
Please enter your name here