ಗೇರುಕಟ್ಟೆ ಹಾಲು ಉತ್ಪಾದಕರ ಸಹಕಾರಿ ಸಂಘದ ವಾರ್ಷಿಕ ಸಾಮಾನ್ಯ ಸಭೆ

0

ಗೇರುಕಟ್ಟೆ : ಗೇರುಕಟ್ಟೆ ಹಾಲು ಉತ್ಪಾದಕರ ಸಹಕಾರ ಸಂಘದ 2021-22 ನೇ ಸಾಲಿನ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆ ಡಿ.19 ರಂದು ಕಳಿಯ ಸಿ.ಎ.ಬ್ಯಾಂಕ್ ಸಹಕಾರಿ ಸಭಾಂಗಣದಲ್ಲಿ ನಡೆಯಿತು.

ಸರಕಾರದ ಯೋಜನೆಗಳ ಬಗ್ಗೆ ಮತ್ತು ದನಗಳ ಸಾಕಾಣಿಕೆ, ಹೈನುಗಾರಿಕೆಯಲ್ಲಿ ಉತ್ತಮ ಗುಣಮಟ್ಟದ ಹಾಲು ಹಾಗೂ ಹೆಚ್ಚಿನ ಲಾಭ ಪಡೆಯುವ ಬಗ್ಗೆ ಮಾಹಿತಿಯನ್ನು ಪಶು ವೈದ್ಯಾಧಿಕಾರಿ ಡಾ.ಪೂಜಾ, ಒಕ್ಕೂಟದ ಉಪ ವ್ಯವಸ್ಥಪಕರಾದ ಡಾ.ಚಂದ್ರಶೇಖರ ಭಟ್ ಮತ್ತು ದ.ಕ.ಹಾಲು ಒಕ್ಕೂಟದ ನಿರ್ದೇಶಕ ಪದ್ಮನಾಭ ಆರ್ಕಜೆ ಹಾಗೂ ದ.ಕ.ಜಿ.ಹಾ.ಉ. ವಿಸ್ತಾರಣಾಧಿಕಾರಿ ರಾಜೇಶ್ ಕಾಮತ್ ಸಂಘದ ಸದಸ್ಯರಿಗೆ ಮಾಹಿತಿ ತಿಳಿಸಿದರು.

ಕಳಿಯ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ವಸಂತ ಮಜಲು ವೇದಿಕೆಯಲ್ಲಿ ಉಪಸ್ಥಿತರಿದ್ದು ಹಾಲು ಉತ್ಪಾದಕ ಸಹಕಾರಿ ಸಂಘದ ಬಗ್ಗೆ ಸದಸ್ಯರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಜನಾರ್ಧನ ಗೌಡ ವಹಿಸಿ ಮಾತನಾಡುತ್ತಾ ಉತ್ತಮ ಗುಣಮಟ್ಟದ ಹಾಲು ಸಂಘಕ್ಕೆ ಪೂರೈಸುವಂತೇ ಹೇಳಿದರು.

ಈ ಸಂದರ್ಭದಲ್ಲಿ ಸಂಘದ ನಿರ್ದೇಶಕರುಗಳಾದ ಕುಶಲಾವತಿ,ಪ್ರವೀಣ್ ಪೂಜಾರಿ, ಗಿರಿಯಪ್ಪ ಗೌಡ ಕೆ, ಸಿರಿಲ್ ಪಿಂಟೊ, ಕೇಶವ ಪೂಜಾರಿ, ವಸಂತ ನಾಯ್ಕ,ಕೇಶವತಿ ನೆವಿಲ್ ಸ್ಟೀವನ್ ಮೊರಾಸ್,ರಂಜನ್ ಹೆಚ್ ಮತ್ತು ಯೋಗಿನಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಹಾಲು ಉತ್ಪಾದಕರ ಸಂಘದ ಸದಸ್ಯರ ಮಕ್ಕಳು 10 ನೇ ತರಗತಿ ಮತ್ತು ಪಿ.ಯು.ಸಿ. ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.

ಸಂಘಕ್ಕೆ ಅತಿ ಹೆಚ್ಚು ಹಾಲು ಪೂರೈಕೆ ಮಾಡಿದ ಪ್ರಥಮ : ನವೀಣ್ ಶೆಟ್ಟಿ, ದ್ವಿತೀಯ : ಉರ್ಬನ್ ಮೋರಸ್, ತೃತೀಯ : ವಲೇರಿಯನ್ ಡಿ.ಸೋಜ ರವರನ್ನು ವೇದಿಕೆಯಲ್ಲಿ ಸನ್ಮಾನಿಸಿ ಗೌರವಿಸಿದರು.

ಒಟ್ಟು ವ್ಯವಹಾರ 11,78,83,820.92 ಹಾಗೂ ಲಾಭಾಂಶ :ನಿವ್ವಳ ಲಾಭ 813,369.10 ರೂಪಾಯಿ.

ಷೇರು ಡಿವಿಡೆಂಟ್ : ಸದಸ್ಯರಿಗೆ 12% ಶೇಕಡ.ನೀಡುವುದಾಗಿ ಸಭೆಯಲ್ಲಿ ತೀರ್ಮಾನಿಸಲಾಯಿತು.

ಗೇರುಕಟ್ಟೆ ಹಾಲು ಉತ್ಪಾದಕರ ಸಂಘದ ಸ್ಥಾಪಕ ಅಧ್ಯಕ್ಷ ದಿವಂಗತ ಅನಂದ ಸಾಲ್ಯಾನ್ ರವರ ಭಾವ ಚಿತ್ರಕ್ಕೆ ಪುಚ್ಪಾರ್ಚನೆ ಮಾಡಿ ಮೌನ ಪ್ರರ್ಥಾನೆ ಸಲ್ಲಿಸಿದರು.

ಸಂಘದ ಕಾರ್ಯದರ್ಶಿ ಗುಲಾಬಿ ಕೆ. ವಾರ್ಷಿಕ ನಡವಳಿಕೆಯನ್ನು ಸಭೆಯಲ್ಲಿ ವಾಚಿಸಿದರು.ಸಂಘದ ಸಿಬ್ಬಂದಿಗಳಾದ ಗುಮಾಸ್ತೆ ಶಾಲಿನಿ,ಹಾಲು ಪರೀಕ್ಷಕ ತಾರನಾಥ, ಬಿ.ಎಮ್.ಸಿ ರಕ್ಷಿತ್ ಮತ್ತು ಕೃ.ಗ.ಕಾರ್ಯಕರ್ತ ಉಮೇಶ ಗೌಡ ಬಿ, ಉಪಸ್ಥಿತರಿದ್ದು ಸಹಕರಿಸಿದರು. ಸಂಘದ ಸದಸ್ಯರು ಸಭೆಯಲ್ಲಿ ಭಾಗವಹಿಸಿದ್ದರು.ಕಳಿಯ ಸಿ.ಎ.ಬ್ಯಾಂಕ್ ಸಿಬ್ಬಂದಿ ಜಗನ್ನಾಥ ಪ್ರಾರ್ಥನೆ ಹಾಡಿದರು. ಸಂಘದ ಸಿಬ್ಬಂದಿ ವಿಜಯ ಗೌಡ ಸ್ವಾಗತಿಸಿದರು. ನಾಳ ವ್ಯವಸ್ಥಾಪನ ಸಮಿತಿ ಸದಸ್ಯರ ಉಮೇಶ್ ಕೇಲ್ದಡ್ಕ ಕಾರ್ಯಕ್ರಮ ನಿರೂಪಿಸಿದರು.ಸಂಘದ ನಿರ್ದೇಶಕ ನೆವಿಲ್ ಸ್ಟೀವನ್ ಮೊರಾಸ್ ಧನ್ಯವಾದವಿತ್ತರು.

LEAVE A REPLY

Please enter your comment!
Please enter your name here