ಗುರುವಾಯನಕೆರೆ ಉಪ್ಪಿನಂಗಡಿ ರಸ್ತೆ ಬಳಿ ಬಸ್ ತಂಗುದಾಣವನ್ನು ಉದ್ಘಾಟಿಸಿದ ಶಾಸಕರು

0

ಗುರುವಾಯನಕೆರೆ:   ವಿಶ್ವ ಹಿಂದೂ ಪರಿಷತ್ ಮಾತೃ ಮಂಡಳಿ ದುರ್ಗಾ ವಾಹಿನಿ ಬಜರಂಗದಳ  ಗುರುವಾಯನಕೆರೆ ಛತ್ರಪತಿ ಶಿವಾಜಿ ಶಾಖೆ ವತಿಯಿಂದ ಸುಸಜ್ಜಿತ ಗುರುವಾಯನಕೆರೆ ಉಪ್ಪಿನಂಗಡಿ ರಸ್ತೆ ಬಳಿ ಬಸ್ ತಂಗುದಾಣವನ್ನು ಶಾಸಕ ಹರೀಶ್ ಪೂಂಜಾ ಉದ್ಘಾಟಿಸಿ, ಎಲ್ಲರ ಸಹಕಾರದಿಂದ ಸುಸಜ್ಜಿತ ಬಸ್ಸುತಂಗುದಾಣ ದಾನ ನಿರ್ಮಾಣವಾಗಿದೆ. ತಾಲೂಕಿನಲ್ಲಿ ಇನ್ನೂ ಹಲವು ಕಡೆ ಇಂತಹ ಬಸ್ ನಿಲ್ದಾಣ ವಾಗಲಿ. ಇಲ್ಲಿ ವೀರ ಸಾರ್ವಕರ್,    ಅಬ್ದುಲ್ ಕಲಾಂ,  ಭಾರತ ಮಾತೆ,  ಯೋಧ ಏಕನಾಥ್ ಶೆಟ್ಟಿ ಇವರ ಭಾವಚಿತ್ರವಿದ್ದು ಅನೇಕ ಯುವಕರಿಗೆ ಮತ್ತು ಸಾರ್ವಜನಿಕರಿಗೆ ಅನುಕೂಲವಾಗುವ ಹಾಗೆ ಸಮಾಜ ಪ್ರೇರಣೆಯಾಗುವಂತ ಬಸ್ ನಿಲ್ದಾಣವಾಗಿದೆ ಎಂದರು.

ಬಜರಂಗದಳ ಪುತ್ತೂರು ಜಿಲ್ಲಾ ಸಂಚಾಲಕ ಭರತ್ , ಕುವೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷೆ ಆಶಾಲತಾ , ಉಪಾಧ್ಯಕ್ಷ ಪ್ರದೀಪ್ ಶೆಟ್ಟಿ, ವಿಶ್ವ ಹಿಂದೂ ಪರಿಷತ್ ಪುತ್ತೂರು ಜಿಲ್ಲಾ ಸಹಕಾರ್ಯದರ್ಶಿ ನವೀನ್ ನೆರಿಯ, ವಿಶ್ವ ಹಿಂದೂ ಪರಿಷತ್ ಬೆಳ್ತಂಗಡಿ ಘಟಕ ಅಧ್ಯಕ್ಷ ದಿನೇಶ್ ಚಾರ್ಮಾಡಿ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಮಮತಾ ಶೆಟ್ಟಿ,  ಸ್ಥಳೀಯರಾದ ಜಯಂತಿ ಶೆಟ್ಟಿ , ಸುಭಾಷ್ ಉಪಸ್ಥಿತಿಯಿದ್ದರು.

ವಿಶ್ವ ಹಿಂದೂ ಪರಿಷತ್ ಗುರುವಾಯನಕೆರೆಯ ಅಧ್ಯಕ್ಷ ರೀಜೇಶ್ ಸ್ವಾಗತಿಸಿ, ನಾರಾಯಣ ಆಚಾರ್ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here