ಶ್ರೀ ಕ್ಷೇ.ಧ. ಗ್ರಾ ಯೋಜನೆ ಬಿಸಿ ಟ್ರಸ್ಟ್ ಗುರುವಾಯನಕೆರೆ ವತಿಯಿಂದ ಕುತ್ಲೂರು ನಿವಾಸಿ ಪುಟ್ಟಮ್ಮ ರವರ ಮನೆ ನಿರ್ಮಾಣಕ್ಕೆ ನೆರವು

0

ಕುತ್ಲೂರು:  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ಗುರುವಾಯನಕೆರೆ ವತಿಯಿಂದ ಅನುದಾನ ಕಾರ್ಯಕ್ರಮದಡಿ ಕುತ್ಲೂರು ಕಾರ್ಯಕ್ಷೇತ್ರದ ಪುಟ್ಟಮ್ಮ ರವರ ಮಗಳು ಮತ್ತು ಅಳಿಯ ಅನಾರೋಗ್ಯದಿಂದ ಮೃತಪಟ್ಟಿದ್ದು ಅವರ ಮನೆ ನಿರ್ಮಾಣದ ಉದ್ದೇಶಕ್ಕೆ ಶ್ರೀಕ್ಷೇತ್ರ ಧರ್ಮಸ್ಥಳದಿಂದ ರೂ20000/- ಅನುದಾನ ಮಂಜೂರಾಗಿದ್ದು ಅದನ್ನು ಕುತ್ಲೂರು ಸೇವಾಕೇಂದ್ರದಲ್ಲಿ ತಾಲೂಕು ಪ್ರಗತಿ ಬಂಧು ಒಕ್ಕೂಟದ ಅಧ್ಯಕ್ಷ ಸದಾನಂದ ಬಂಗೇರರವರು ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಶೌರ್ಯ ವಿಪತ್ತು ತಂಡದ ದಿನೇಶ್ ಶೆಟ್ಟಿ,  ಸಂದೀಪ್ ಶೆಟ್ಟಿ, ವಿಕಿತ್ ಸತೀಶ್ ಆಚಾರ್ಯ, ಸಂತೋಷ ಹಾಗೂ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷರಾದ ತುಂಗಪ್ಪ ಪೂಜಾರಿ ವಲಯ ಮೇಲ್ವಿಚಾರಕರಾದ ದಮಯಂತಿ ,ಒಕ್ಕೂಟದ ಅಧ್ಯಕ್ಷರುಗಳಾದ ಕರಿಯ ಪೂಜಾರಿ ಮತ್ತು ಅಣ್ಣ ಎಂ ಕೆ,ನಾರಾವಿ ಸೇವಾ ಪ್ರತಿನಿಧಿ ಹರಿಣಾಕ್ಷಿ ,ಒಕ್ಕೂಟದ ಪದಾಧಿಕಾರಿಗಳಾದ ಹೇಮಲತಾ ಮತ್ತು ರವೀಶ್ ಅರ್ಚನಾ ಉಪಸ್ಥಿತರಿದ್ದರು.

ಕುತ್ಲೂರು ಸೇವಾ ಪ್ರತಿನಿಧಿ ಕೇಶವ ಪೂಜಾರಿ ಎಲ್ಲರನ್ನೂ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here