ಮಡಂತ್ಯಾರ್ : ಗ್ರಾಮ ಪಂಚಾಯತ್ ಮಡಂತ್ಯಾರ್ ವತಿಯಿಂದ ಕುಂಜತ್ತೋಡಿ ಶಾಲೆಯ ನಲಿಕಲಿ (1ರಿಂದ 3ನೇ ತರಗತಿ) ವಿದ್ಯಾರ್ಥಿಗಳಿಗೆ ರೂ.30,000 ಮೌಲ್ಯದ ಮರದ 5 ಟೇಬಲ್ ಗಳನ್ನು ಕೊಡುಗೆಯಾಗಿ ನೀಡಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಶಶಿಪ್ರಭಾ , ಉಪಾಧ್ಯಕ್ಷೆ ಸಂಗೀತ ಶೆಟ್ಟಿ, ಕಾರ್ಯದರ್ಶಿ ಮೊರ್ಲಿನ್ ಕ್ರಿಸ್ತಿನ ಡಿಸೋಜ, ಸದಸ್ಯರಾದ ರಾಜೀವ್ ದಡ್ಡಲ್ಪಾಡಿ, ಉಮೇಶ್ ಹಾಗೂ ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷ ಶಶಿಕಿರಣ್, ಉಪಾಧ್ಯಕ್ಷೆ ನಳಿನಿ, ಸದಸ್ಯರಾದ ಸುಂದರ ಪೂಜಾರಿ,ಪದ್ಮಾವತಿ, ಸುಮಿತ್ರ, ಜಾನಕೀ, ರೋಹಿಣಿ, ಕರಿಯ, ಶೋಭಾ, ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಸಬೀನಾ, ಸಹ ಶಿಕ್ಷಕಿ ಚಿತ್ರ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.