ಬೆಳ್ತಂಗಡಿ ಸುಪಾರಿ ಅಂಗಡಿಯಲ್ಲಿ ಕಳ್ಳತನ: ಕಳ್ಳನನ್ನು ಹಿಡಿದು ಪೊಲೀಸರಿಗೊಪ್ಪಿಸಿದ ಸ್ಥಳೀಯರು

0

ಬೆಳ್ತಂಗಡಿ: ಬೆಳ್ತಂಗಡಿ ಬಸ್ ನಿಲ್ದಾಣದ ಬಳಿ ಇರುವ ನಗರದ ಪಂಚಾಯತ್ ನೀರಿನ ಟ್ಯಾಂಕ್ ಹೋಗುವ ರಸ್ತೆಯಲ್ಲಿರುವ ಸವಣಾಲು ನಿವಾಸಿ ಜಗದೀಶ್ ಗೌಡ ಮಾಲಕತ್ವದ ಶ್ರೀ ದುರ್ಗಾ ಸುಪಾರಿ ಟ್ರೇಡರ್ಸ್ ಎಂಬ ಹೆಸರಿನ ಅಂಗಡಿಯಿಂದ ಅಂದಾಜು  ಎರಡು ಕ್ವಿಂಟಾಲ್ ಮೌಲ್ಯದ ಅಡಿಕೆ ಕಳ್ಳತನ ಮಾಡಲಾಗಿದೆ.

ಸೆ.19ರಂದು ಎಂದಿನಂತೆ ಅಂಗಡಿಯಲ್ಲಿ ಅಡಿಕೆ ಲೋಡ್ ಮಾಡಲು ಹೋದಾಗ ಅಂಗಡಿಯ ಮೇಲ್ಬಾಗದ ಸಿಮೆಂಟ್ ಶೀಟ್ ಜಾರಿದ್ದು ಕಂಡಿದೆ. ಸುತ್ತಮುತ್ತ ಪರಿಶೀಲನೆ ನಡೆಸಿದಾಗ ಹಿಂಭಾಗದಲ್ಲಿ ಕಳ್ಳತನ ಮಾಡಿ ಬಿಟ್ಟು ಹೋದ ಎರಡು ಕಬ್ಬಿಣದ ಏಣಿ ಪತ್ತೆಯಾಗಿದೆ. ತಕ್ಷಣ ಮಾಲಕರು ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಪೊಲೀಸರು ಪರಿಶೀಲನೆ ನಡೆಸಿ ಸ್ಥಳೀಯರ ಸಹಕಾರದಿಂದ  ಕಳ್ಳನನ್ನು ಸೆರೆ ಹಿಡಿದಿದ್ದಾರೆ.

LEAVE A REPLY

Please enter your comment!
Please enter your name here