ಮುಂಡಾಜೆ: ಜಿ.ಎನ್ ಭಿಡೆ- ಎನ್.ಎಸ್ ಗೋಖಲೆ ಪ್ರಶಸ್ತಿ ಪ್ರಕಟ

0

ಬೆಳ್ತಂಗಡಿ:  ಮುಂಡಾಜೆ ಯಂಗ್ ಚಾಲೆಂಜರ್ಸ್ ಕ್ರೀಡಾ ಸಂಘದ 33 ನೇ ವರ್ಷಾಚರಣೆಯ ಪ್ರಯುಕ್ತ ಕೊಡಮಾಡುವ ಕೀರ್ತಿಶೇಷ ಜಿ.ಎನ್ ಭಿಡೆ ಸಂಸ್ಮರಣಾ ಮೂರನೆಯ ಪ್ರಶಸ್ತಿಗೆ ನಿವೃತ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಂ.ಎಸ್ ವರ್ಮ ಮತ್ತು ಎ‌ನ್.ಎಸ್ ಗೋಖಲೆ ಸಂಸ್ಮರಣಾ ಪ್ರಥಮ ಪ್ರಶಸ್ತಿಗೆ ಬಂಗಾಡಿ ‌ಎನ್ ಲಕ್ಷ್ಮಣ ಗೌಡ ಅವರು ಆಯ್ಕೆಯಾಗಿದ್ದಾರೆ ಎಂದು ಕ್ರೀಡಾ ಸಂಘದ ಅಧ್ಯಕ್ಷ ಅಶ್ರಫ್ ಆಲಿಕುಂಞಿ ಮುಂಡಾಜೆ, ಸಂಚಾಲಕ ನಾಮದೇವ ರಾವ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸೆ.24 ರಂದು ಮುಂಡಾಜೆಯಲ್ಲಿ ವಿಶಿಷ್ಟ ರೀತಿಯಲ್ಲಿ ಆಯೋಜನೆಗೊಂಡಿರುವ ಕಾರ್ಯಕ್ರಮದಲ್ಲಿ ಶಾಸಕ ಹರೀಶ್ ಪೂಂಜ, ವಿಧಾನ ಪರಿಷತ್ ಶಾಸಕ ಹರೀಶ್ ಕುಮಾರ್ ಮತ್ತು ಪ್ರತಾಪಸಿಂಹ ನಾಯಕ್, ಗಣ್ಯರಾದ ಮೋಹನ್ ಕುಮಾರ್, ರಕ್ಷಿತ್ ಶಿವರಾಮ್, ರಂಜಿನಿ ಆರ್ ಮತ್ತು ಶ್ರೀಧರ ಜಿ‌ ಭಿಡೆ ಇವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

1959 ರಲ್ಲಿ ಅರಣ್ಯ ಇಲಾಖೆಯಲ್ಲಿ ಫಾರೆಸ್ಟರ್ ಹುದ್ದೆಗೆ ಸೇರಿದ ಎಂ.ಎಸ್ ವರ್ಮ ಅವರು 1973 ರಲ್ಲಿ ಆರ್.ಎಫ್.ಒ‌ ಆಗಿ, 1994 ರಲ್ಲಿ ಎಸಿಎಫ್ ಆಗಿ ನಿವೃತರಾದವರಾಗಿದ್ದಾರೆ.
ಕೃಷಿಕರು ಮತ್ತು ಹೈನುಗಾರಾಗಿರುವ ಅವರು ಅಂದಿನ ತಾಲೂಕು ಬೋರ್ಡ್ ಅಧ್ಯಕ್ಷರೂ ಹಾಗೂ ಗಾಂಧಿವಾದಿಯಾಗಿದ್ದ ಜಿ.ಎನ್ ಭಿಡೆ ಅವರ ನಿಕಟವರ್ತಿಗಳಲ್ಲೋರ್ವರಾಗಿ ಹಲವಾರು ಸಾಮಾಜಿಕ ಸೇವಾ ಕ್ಷೇತ್ರದಲ್ಲಿ ತೊಡಗಿಸಿಕೊಂಡವರಾಗಿದ್ದಾರೆ. ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರಕ್ಕೆ ಕೊಡುಗೆ ನೀಡಿದ ಅವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಸಹಕಾರಿ ಕ್ಷೇತ್ರದಲ್ಲಿ ಅಪ್ರತಿಮರೆನಿಸಿದ್ದ ಎನ್‌.ಎಸ್ ಗೋಖಲೆ ಮುಂಡಾಜೆ ಅವರ ಸಂಸ್ಮರಣಾರ್ಥ ಕೊಡಮಾಡುವ ಪ್ರಥಮ ಪ್ರಶಸ್ತಿ ಪಡೆದುಕೊಂಡಿರುವ ಎನ್ ಲಕ್ಷ್ಮಣ ಗೌಡ ಬಂಗಾಡಿ‌ ಅವರು, ಗೋಖಲೆ ಅವರ ಶಿಷ್ಯರಾಗಿದ್ದು, ಬಂಗಾಡಿ ಸಹಕಾರಿ ಬ್ಯಾಂಕಿನಲ್ಲಿ ಸುದೀರ್ಘ 26 ವರ್ಷ ಅಧ್ಯಕ್ಷರಾಗಿ ಮುನ್ನಡೆಸಿದ ಕೀರ್ತಿಹೊತ್ತಿದ್ದಾರೆ

ಸಹಕಾರಿ ಕ್ಷೇತ್ರ ಮಾತ್ರವಲ್ಲದೆ ಸಾಮಾಜಿಕ, ಧಾರ್ಮಿಕ, ರಾಜಕೀಯ ಶೈಕ್ಷಣಿಕ ಕ್ಷೇತ್ರಗಳಲ್ಲೂ ಅವರು ಛಾಪು ಮೂಡಿಸಿದ್ದು ಅವರನ್ನು ಈ ಗೌರವಕ್ಕೆ ಆಯ್ಕೆ ಮಾಡಲಾಗಿದೆ.
ಇದೂ ಅಲ್ಲದೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮೆರೆದ 10 ಮಂದಿ ಸಾಧಕರಾದ ಅರೆಕ್ಕಲ್ ರಾಮಚಂದ್ರ ಭಟ್(ಧಾರ್ಮಿಕ), ಬಾಬು ಪೂಜಾರಿ ಕೂಳೂರು(ಸಾಮಾಜಿಕ), ಸೆಬಾಸ್ಟಿಯನ್ ಅರಸಮಜಲು(ಕೃಷಿ), ಡಾ. ದಿವ್ಯಲಕ್ಷ್ಮೀ (ಆರೋಗ್ಯ), ಜಯಂತಿ ಟಿ(ಶಿಕ್ಷಣ), ರಂಜಿನಿ ಆರ್ (ಜಾನಪದ), ಎಸ್ ಸಿದ್ದೀಕ್(ಕ್ರೀಡೆ), ರಾಜೇಶ್ ಶೆಟ್ಟಿ ನೆಯ್ಯಾಲು (ಉದ್ಯಮ), ಲೀಲಮ್ಮ ಕುಂಞಿಮೋನು ಮತ್ತು ಸೋಮನಾಥ ಅರೆಕ್ಕಲ್ ಅವರಿಗೆ ಸ್ವಾಭಿಮಾನಿ ಪ್ರಶಸ್ತಿ ಪ್ರದಾನ ನಡೆಯಲಿದೆ.

LEAVE A REPLY

Please enter your comment!
Please enter your name here