ಶ್ರೀ ನಾರಾಯಣ ಗುರು ಧರ್ಮ ಪರಿಪಾಲನ ಯೋಗಂ ಧರ್ಮಸ್ಥಳ ಆಶ್ರಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 168ನೇ ಜನ್ಮದಿನಾಚರಣೆ

0

ಧರ್ಮಸ್ಥಳ : ಶ್ರೀ ನಾರಾಯಣ ಗುರು ಧರ್ಮ ಪರಿಪಾಲನ ಯೋಗಂ (SNDP) ಧರ್ಮಸ್ಥಳ ಇದರ ಆಶ್ರಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 168ನೇ ಜನ್ಮದಿನಾಚರಣೆ ಕಾರ್ಯಕ್ರಮವನ್ನು  ಸೆ.18ರಂದು  ಆಚರಿಸಲಾಯಿತು.

ಎಸ್ ಎನ್ ಡಿಪಿ ಶಾಖೆ ಧರ್ಮಸ್ಥಳ ಇದರ ಉಪಾಧ್ಯಕ್ಷ  ಸಚಿನ್ ಇಂಚರ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ತಾಲೂಕಿನ ಶಾಸಕರು  ಹರೀಶ್ ಪೂಂಜ ಇವರು ಆಗಮಿಸಿ, “ಶ್ರೀ ನಾರಾಯಣ ಗುರುಗಳು ನಮ್ಮೆಲ್ಲರ ಪ್ರೇರಣೆ, ಅವರ ತತ್ವ , ಆದರ್ಶ ಸಿದ್ದಾಂತಗಳನ್ನು ನಾವೆಲ್ಲರೂ ಅನುಸರಿಸಬೇಕು. ನಾರಾಯಣ ಗುರುಗಳ ರೂಪದಲ್ಲಿ ನಾವಿಲ್ಲಿ ನೋಡುವಂತದು ಶ್ರೀ ಶ್ರೀ ಬ್ರಹ್ಮಾನಂದ ಸರಸ್ವತಿ ಯತಿವರ್ಯರನ್ನು ಯತಿವರ್ಯರು ಶ್ರೀ ನಾರಾಯಣ ಗುರುಗಳ ಆದರ್ಶ ತತ್ವ ಪ್ರೇರಣೆಗಳ ಮೂಲಕ ನಮಗೆಲ್ಲರಿಗೂ ಆಶೀರ್ವಾದ ಮಾಡುತ್ತಿದ್ದಾರೆ ಹಾಗೆಯೇ ಬ್ರಹ್ಮಶ್ರೀ ನಾರಾಯಣ ಗುರುಗಳ ಜೀವನ ಸಂದೇಶ ಸಾರುವ ಅನೇಕ ಪುಸ್ತಕಗಳನ್ನು ಓದುವ ಪರಿಪಾಠ ಮಾಡಿಕೊಂಡು ತಮ್ಮ ಜೀವನದಲ್ಲಿ ಪಾಲಿಸುವ ಮೂಲಕ ತಮ್ಮ ಜೀವನ   ಯಶಸ್ಸುಗೊಳಿಸಲು ಸಾಧ್ಯ.  ಹಾಗೆಯೇ ಪುಂಜಾಲಕಟ್ಟೆಯಲ್ಲಿ  ಬ್ರಹ್ಮಶ್ರೀ  ನಾರಾಯಣ ಗುರುಗಳ ವಸತಿ ಶಾಲೆಯ ನಿರ್ಮಾಣದ ಶಿಲಾನ್ಯಾಸವನ್ನು ಸದ್ಯದಲ್ಲಿಯೇ ಮಾಡಲಿದ್ದೇವೆ ಎಂದು  ಕಾರ್ಯಕ್ರಮಕ್ಕೆ ಶುಭಹಾರೈಸಿದರು.

ಧರ್ಮಸ್ಥಳ ಗ್ರಾಮ ಪಂಚಾಯತ್ ಅಧ್ಯಕ್ಷೆ  ಜಯಮೋಣಪ್ಪ ಗೌಡ , ಉಪಾಧ್ಯಕ್ಷ ಶ್ರೀನಿವಾಸ್ ರಾವ್, ಧರ್ಮಸ್ಥಳ ಬ್ರಹ್ಮಶ್ರೀ ನಾರಯಣ ಗುರು ಸೇವಾ ಸಂಘದ ಅಧ್ಯಕ್ಷ ಪ್ರಕಾಶ್ ಪೂಜಾರಿ,    ಎಸ್ ಎನ್ ಡಿಪಿ ಉಪಾಧ್ಯಕ್ಷರಾದ ಸಚಿನ್ ಇಂಚರ, ಎಸ್ ಎನ್ ಡಿಪಿ ಕಾರ್ಯದರ್ಶಿಗಳಾದ ಸ್ಮಿತೇಶ್ ಎನ್,  ಗುರು ನಾರಯಣ ಸೇವಾ ಸಂಘ ಬೆಳ್ತಂಗಡಿ ಇದರ ನಿರ್ದಶಕರು ಪುರುಷೋತ್ತಮ್ ಪೂಜಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಈ ಕಾರ್ಯಕ್ರಮಕ್ಕೆ ಗ್ರಾ. ಪo ಮಾಜಿ ಅಧ್ಯಕ್ಷ ಪ್ರಭಾಕರ ಪೂಜಾರಿ,  ತಾಲೂಕು ಬಿಜೆಪಿ ಯುವಮೋರ್ಚಾ ಇದರ ಉಪಾಧ್ಯಕ್ಷರಾದ ಪ್ರೀತಂ ಧರ್ಮಸ್ಥಳ , ಎಸ್ ಎನ್ ಡಿಪಿ  ಸ್ಥಾಪಕ ಅಧ್ಯಕ್ಷ ರಾಜನ್ ಪೋಸೋಲಿಕೆ, ಯುವ ಬಿಲ್ಲವ ವೇದಿಕೆ ಉಪಾಧ್ಯಕ್ಷರಾದ ಹರೀಶ್ ಸುವರ್ಣ  ಎಸ್ ಎನ್ ಡಿಪಿ ಯೂನಿಯನ್ ಸದಸ್ಯರಾದ ಸೋಮನಾಥನ್ , ಬೆಳ್ತಂಗಡಿ ನಾರಾಯಣ ಗುರು ಸಂಘದ ನಿರ್ದೇಶಕ ಅರುಣ್ ಬೋಲಿಯರ್, ಭಾಸ್ಕರ್ ಧರ್ಮಸ್ಥಳ , ಗಂಗಾಧರ್ ಬೇಕಲ್, ಗ್ರಾಂ. ಪo ಸದಸ್ಯರುಗಳಾದ ರವಿ ಆನಂದ ಭವನ್, ದಿನೇಶ್ ರಾವ್,ಸುಧಾಕರ್, ಹರ್ಷಿತ್ ಜೈನ್ ಹಾಗೂ ಹಲವು ಗಣ್ಯರು ಆಗಮಿಸಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

ಶಾಸಕರ ಸಮ್ಮುಖದಲ್ಲಿ  ಎಸ್ ಎನ್ ಡಿಪಿ  ಸದಸ್ಯೆ ಹಾಗೂ ಶೃಂಗೇರಿ ತಾಲೂಕು ಕಚೇರಿಯಲ್ಲಿ ಗ್ರಾಮಲೆಕ್ಕಿಗರಾಗಿ ಸೇವೆ ಸಲ್ಲಿಸುತ್ತಿರುವ ಕುಮಾರಿ ಅನುಪ ಹಾಗೂ ಉಜಿರೆ ಎಸ್ ಡಿಎಂ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿರುವ  ಡಾ. ಹರ್ಷಿತಾ ಇವರನ್ನು ಸನ್ಮಾನಿಸಲಾಯಿತು.

ಎಸ್ ಎನ್ ಡಿಪಿ ಕಾರ್ಯದರ್ಶಿ ಸ್ಮಿತೇಷ್ ಇವರು ಸ್ವಾಗತ ನೀಡಿ,  ಕುಮಾರಿ ರಿನಿತಾ ಪ್ರಾರ್ಥನೆ ಮಾಡಿದರು. ರೂಪೇಶ್ ಮಲ್ಲರ್ಮಾಡಿ ಕಾರ್ಯಕ್ರಮ ನಿರೂಪಿಸಿದರು.
168ನೇ ಜನ್ಮದಿನಾಚರಣೆಯ ಪ್ರಯುಕ್ತ ವಿವಿಧ ಆಟೋಟ ಸ್ಪರ್ಧೆಗಳನ್ನು ಆಯೋಜಿಸಯುವ ಮೂಲಕ ಸಂಭ್ರಮದಿಂದ ಆಚರಿಸಲಾಯಿತು.

LEAVE A REPLY

Please enter your comment!
Please enter your name here