ಸರಕಾರಿ ಪದವಿ ಪೂರ್ವ ಕಾಲೇಜು ಕೊಕ್ಕಡದಲ್ಲಿ ರೋವರ್ಸ್ – ರೇಂಜರ್ಸ್ ವಿದ್ಯಾರ್ಥಿಗಳಿಗೆ ತರಬೇತಿ

0

ಕೊಕ್ಕಡ: ಸ. ಪ. ಪೂ ಕಾಲೇಜು ಕೊಕ್ಕಡ ಇದರ ರೋವರ್ಸ್ ಮತ್ತು ರೇಂಜರ್ಸ್ ಘಟಕದ ವಿದ್ಯಾರ್ಥಿಗಳಿಗೆ ” ನಾಯಕತ್ವ ” ಎಂಬ ವಿಷಯದ ಕುರಿತು ಶ್ರೀ ಶಂಕರ್ ರಾವ್ ಜೆಸಿಐ ಭಾರತದ ಪ್ರೋವಿಷನಲ್ ಝೋನ್ ಟ್ರೈನರ್ ಮತ್ತು ವಾಣಿಜ್ಯ ಶಾಸ್ತ್ರ ಉಪನ್ಯಾಸಕರು ವಾಣಿ ಪದವಿ ಪೂರ್ವ ಕಾಲೇಜು ಬೆಳ್ತಂಗಡಿ ಇವರು ತರಬೇತಿ  ಸೆ.21ರಂದು ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಭಾರ ಪ್ರಾಂಶುಪಾಲರಾದ ವಿಶ್ವನಾಥ ರೈ ಅರ್ಥಶಾಸ್ತ್ರ ಉಪನ್ಯಾಸಕರು ವಹಿಸಿದರು.

ರೇಂಜರ್ ಲೀಡರ್ ಭೌತಶಾಸ್ತ್ರ ಉಪನ್ಯಾಸಕ ಸೀತಾಲಕ್ಷ್ಮಿ ಕೆ ಸ್ವಾಗತಿಸಿ, ಜೀವಶಾಸ್ತ್ರ ಉಪನ್ಯಾಸಕ ಜೋಳಿ ಜೇಕಬ್ ವಂದಿಸಿದರು. ರೇಂಜರ್ ಕುಮಾರಿ ಪ್ರೇಮಾ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here