ಗೇರುಕಟ್ಟೆ : ಹುಟ್ಟು ಹಬ್ಬದ ಪ್ರಯುಕ್ತ ಭಜನಾ ಕಾರ್ಯಕ್ರಮ  

0

ಗೇರುಕಟ್ಟೆ : ಇಲ್ಲಿಯ ಕಳಿಯ ಗ್ರಾಮದ ಕುಲಾಯಿ “ಸುಭೋದಯ ನಿಲಯ”ದ ಅಭೀಕ್ಷಳ 9 ನೇ ವರ್ಷ ಹುಟ್ಟು ಹಬ್ಬದ ಪ್ರಯುಕ್ತ ಸೆ.20 ರಂದು ರಾತ್ರಿ ಭಜನಾ ಕಾರ್ಯ ಜರುಗಿತು.

ಕಳಿಯ ಗ್ರಾಮದ ಅಧ್ಯಕ್ಷರಾದ ಶ್ರೀಮತಿ ಸುಭಾಷಿಣಿ ಮತ್ತು ಗೇರುಕಟ್ಟೆ ಹಾಲು ಉತ್ಪಾದಕರ ಸಂಘದ ಅಧ್ಯಕ್ಷರಾದ ಜನಾರ್ದನ ಗೌಡ ದಂಪತಿಗಳ ಪುತ್ರಿ ಅಭೀಕ್ಷ ಳ ಹುಟ್ಟುಹಬ್ಬ ಆಚರಣೆ ಸಂದರ್ಭದಲ್ಲಿ ರಾತ್ರಿ, ಕೊಜಪ್ಪಾಡಿ ನಾಗ ಶ್ರೀ ಮಕ್ಕಳ ಭಜನಾ ಮಂಡಳಿ ಸದಸ್ಯರಿಂದ 1 ಗಂಟೆಗಳ ಕಾಲ ಕುಣಿತ ಭಜನಾ ಕಾರ್ಯಕ್ರಮ ನಡೆಯಿತು.

ಈ ಸಂದರ್ಭದಲ್ಲಿ ಗೇರುಕಟ್ಟೆ ಸಾರ್ವಜನಿಕ ಗಣೇಶೋತ್ಸವ ಸುವರ್ಣ ಮಹೋತ್ಸವ ಸಮಿತಿ ಅಧ್ಯಕ್ಷ ಸುರೇಶ್ ಕುಮಾರ್ ಆರ್.ಎನ್. ಉಪಸ್ಥಿತರಿದ್ದು ಮಾತನಾಡುತ್ತಾ, ಇನ್ನೂ ಮುಂದಿನ ದಿನಗಳಲ್ಲಿ ಮಕ್ಕಳ ಹುಟ್ಟು ಹಬ್ಬದ ಸಮಯದಲ್ಲಿ ಭಕ್ತಿ, ಧಾರ್ಮಿಕ, ಸಂಸ್ಕೃತಿಗೆ ಒತ್ತು ಕೊಡುವ ಮೂಲಕ ಧಾರ್ಮಿಕ ಆಚರಣೆಯನ್ನು ಮೈಗೂಡಿಸಿಕೊಂಡಾಗ ಮಕ್ಕಳಿಗೆ ಧಾರ್ಮಿಕ ಶಿಕ್ಷಣದ ಬಗ್ಗೆ ಹೆಚ್ಚಿನ ಗೌರವ ಬರುವುದಕ್ಕೆ ಸಾಧ್ಯವಿದೆ ಎಂದು ಹೇಳಿ ಶುಭ ಹಾರೈಸಿದರು.ನಾಗ ಶ್ರೀ ಭಜನಾ ಮಂಡಳಿ ಅಧ್ಯಕ್ಷರಾದ ಶ್ರೀಮತಿ ಕೆ‌.ಕುಲಾಲ್ ಮತ್ತು 20 ಜನ ಮಕ್ಕಳು ಬಾಗವಹಿಸಿದರು.

ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ವ್ಯವಸ್ಥಾಪನ ಸಮಿತಿ ಸದಸ್ಯರಾದ ದಿನೇಶ್ ಗೌಡ ಕೆ,ಕಳಿಯ ಗ್ರಾಮ ಪಂಚಾಯತು ಸದಸ್ಯ,ನಾಳ ಹಾಲು ಉತ್ಪಾದಕರ ಸಂಘದ ಅಧ್ಯಕ್ಷರಾದ ಸುಧಾಕರ ಮಜಲು,ಕಳಿಯ ಗ್ರಾಮದ ಪಂಚಾಯತು ಮಾಜಿ ಅಧ್ಯಕ್ಷ ರಾದ ಶರತ್ ಕುಮಾರ್ ಶೆಟ್ಟಿ ಮತ್ತು ಹಿತೈಷಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here