ನಾಳ: ತಾಳಮದ್ದಳೆ ಸಪ್ತಾಹ, ಕೀರ್ತಿ ಶೇಷ ಕೊರಗಪ್ಪ ಪೂಜಾರಿ ಅವರ ಸಂಸ್ಮರಣೆ

0

ನಾಳ : ನಾಳ  ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನಡೆಯುತ್ತಿರುವ ತಾಳಮದ್ದಳೆ ಸಪ್ತಾಹದ ನಾಲ್ಕನೇ ದಿನದಲ್ಲಿ ಕೀರ್ತಿಶೇಷ ಕಲಾವಿದರಾದ ಮೆದಿನ ಕೊರಗಪ್ಪ ಪೂಜಾರಿ ಅವರ ಸಂಸ್ಮರಣ ಕಾರ್ಯಕ್ರಮವನ್ನು ಮಾರುತಿಪುರ ರೈತ ಬಂದು ಮಾಲಕರಾದ ಶಿವಶಂಕರ್ ನಾಯಕ್ ದೀಪ ಬೆಳಗಿಸಿ ಉದ್ಘಾಟಿಸಿ ತಾಳಮದ್ದಲೆ ಸಪ್ತಾಹದೊಂದಿಗೆ ಊರಿನ ಕೀರ್ತಿಶೇಷ ಕಲಾವಿದರನ್ನು ಸ್ಮರಿಸುವುದು ಉತ್ತಮ ಕಾರ್ಯವೆಂದು ತಿಳಿಸಿದರು.

ನಾಳದೇವಳದ ವ್ಯವಸ್ಥಾಪನ ಸಮಿತಿ ಸದಸ್ಯರಾದ ಅಂಬಾ ಆಳ್ವ, ದಿನೇಶ ಗೌಡ ಕಲಾಯಿತೊಟ್ಟು , ನಿವೃತ್ತ ಮುಖ್ಯೋಪಾಧ್ಯಾಯರಾದ ಪ್ರಭಾಕರ ರಾವ್ ನಾಳ,  ಬನಶಂಕರಿ ಯಕ್ಷಗಾನ ಕಲಾತಂಡ ಪಣೆ ಜಾಲು ಅಧ್ಯಕ್ಷರಾದ ಶಿವಾನಂದ ಭಂಡಾರಿ , ಮೆದಿನ ಶ್ರೀಧರ ಪೂಜಾರಿ ಉಪಸ್ಥಿತರಿದ್ದರು. ಸಂಸ್ಮರಣೆ ಅಂಗವಾಗಿ ಮೆದಿನ ರಾಘವ ಪೂಜಾರಿ ಇವರನ್ನು ಗೌರವಿಸಲಾಯಿತು.

ಕರುಣಾಕರ ಶೆಟ್ಟಿ ಬೆಳ್ತಂಗಡಿ ಸ್ವಾಗತಿಸಿ,  ದಿವಾಕರ್ ಆಚಾರ್ಯ ಗೇರುಕಟ್ಟೆ ಪ್ರಸ್ತಾವನೆ ಗೈದರು. ರಾಜೇಶ್ ಪೆರ್ಮುಡ ವಂದಿಸಿದರು.


ಬಳಿಕ ಜರುಗಿದ ತಾಳಮದ್ದಲೆ ಹಿಮ್ಮೇಳದಲ್ಲಿ ಭವ್ಯಶ್ರೀ ಕುಲ್ಕುಂದ, ಚಂದ್ರಶೇಖರ ಆಚಾರ್ಯ ವೆಂಕಟೇಶ ಮೂರ್ಜೆ ಅರ್ಥದಾರಿಗಳಾಗಿ ಸುಬ್ರಾಯ ಹೊಳ್ಳ ಕಾಸರಗೋಡು, ರಾಘವೇಂದ್ರ ಆಸ್ರಣ್ಣ, ರವಿ ರಾಜ ಪನೆಯಾಳ, ದಿವಾಕರ್ ಆಚಾರ್ಯ ಗೇರುಕಟ್ಟೆ, ರಾಘವ. ಹೆಚ್ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here