ಬಾರ್ಯ: ಪ್ರಾ. ಕೃ. ಪ ಸಂಘ ಮುರುಗೋಳಿ ಇದರ ಮಹಾಸಭೆ

0

ಬಾರ್ಯ:   ಪ್ರಾ. ಕೃ. ಪ ಸಂಘ ಮುರುಗೋಳಿ ಇದರ ಮಹಾಸಭೆಯು ಸೆ 21ರಂದು ಸಂಘದ ವಠಾರ ಬಾರ್ಯ ಗ್ರಾಮ ಪಂಚಾಯತ್ ಸಭಾಭವನದಲ್ಲಿ ಸಂಘದ ಅಧ್ಯಕ್ಷರಾದ ಪ್ರಸನ್ನ ಗೌಡ ಎನ್ ರವರ ಅಧ್ಯಕ್ಷತೆಯಲ್ಲಿ ಜರುಗಿತು. ನಂತರ ಮಾತನಾಡಿದ ಅವರು ಸಂಘವು 2 ಗ್ರಾಮಗಳ ಕಾರ್ಯ ವ್ಯಾಪ್ತಿಯನ್ನು ಹೊಂದಿದ್ದು 2021 22ನೇ ಸಾಲಿನಲ್ಲಿ ಸದಸ್ಯರಿಗೆ 37.7 0 ಕೋಟಿ ಸಾಲ ವಿತರಿಸಲಾಗಿದ್ದು ವರ್ಷಾಂತ್ಯಕ್ಕೆ 43.66 ಕೋಟಿ ಹೊರಬಾಕಿ ಸಾಲ ಹೊಂದಿದ್ದು ಹಾಗೂ ಸದಸ್ಯರ ಸಹಕಾರದಿಂದ 16.21 ಕೋಟಿ ಠೇವಣಿ ಹೊಂದಿದೆ ಸಂಘವು ಸತತ 20 ವರ್ಷಗಳಿಂದ ಲೆಕ್ಕಪರಿಶೋಧನೆಯಲ್ಲಿ ಎ ಶ್ರೇಣಿ ಹೊಂದಿದೆ ವರ್ಷಾಂತಕ್ಕೆ 3.87 ಕೋಟಿ ಪಾಲು ಬಂಡವಾಳ ಹಾಗೂ 192 .47 ಕೋಟಿ ವ್ಯವಹಾರವನ್ನು ಮಾಡಿ 78.81 ಲಕ್ಷ ಲಾಭಗಳಿಸಿದೆ ಶೇಕಡ 10.5ರಂತೆ ಡಿವಿಡೆಂಟ್ ನೀಡಲಾಗುವುದು ಸಂಘದ ಶಾಖೆಯಾದ ಪಿಲಿ ಗೂಡಿನಲ್ಲಿ ಲಾಕರ್ ಸೌಲಭ್ಯದೊಂದಿಗೆ ಸಂಪೂರ್ಣ ಸೇವೆಯನ್ನು ಸೆಪ್ಟೆಂಬರ್ 26 ರಿಂದ ಆರಂಭಿಸುವುದಾಗಿ ಘೋಷಿಸಿದರು.ಸಂಘವು ಸದಸ್ಯರ ಸಂಪೂರ್ಣ ಸಹಕಾರದಿಂದ ಉತ್ತಮ ರೀತಿಯಿಂದ ಸೇವೆಯನ್ನು ನೀಡುತ್ತಿದೆ ಎಂದು ಹೇಳಿದರು .

ಸಮಾಜದಲ್ಲಿ ಸೇವೆ ಸಲ್ಲಿಸುತ್ತಿರುವ ಡಾ|ಯಾಕುಬ್,  ಡಾ| ಗಣಪತಿ ಭಟ್ ಮತ್ತು ಪ್ರಸನ್ನ ಜೂನಿಯರ್ ಇಂಜಿನಿಯರ್ ಮೆಸ್ಕಾಂ ಕಲ್ಲೇರಿ ಇವರಿಗೆ ಸನ್ಮಾನಿಸಲಾಯಿತು.

ಸಭೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ನಿರ್ದೇಶಕರಾದ ನಿರಂಜನ್  ಭಾವಂತ ಬೆಟ್ಟು ಭಾಗವಹಿಸಿ ಸಂಘದ ಕಾರ್ಯವೈಕರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಸಂಘದಲ್ಲಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿರುವ ಮತ್ತು ಸಮಾಜ ಸೇವೆಗಾಗಿ ಸಂಘದ ಅಧ್ಯಕ್ಷರಾದ ಪ್ರಸನ್ನ ಗೌಡ ಎಂ ಇವರಿಗೆ ಸಂಘದ ಸದಸ್ಯರು ಸನ್ಮಾನ ನೆರವೇರಿಸಿದರು. ಎಸ್ ಎಸ್ ಎಲ್ ಸಿ ಪಿಯುಸಿ ಪದವಿ ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಪ್ ನೀಡಲಾಯಿತು.

ಸಂಘದ ಸದಸ್ಯರಾದ ಜೆರಾಮ್ ಬ್ರಾಗ್ಸ್ ,  ಮೋನಪ್ಪ ಗೌಡ ಮನಿಲ,  ಕೃಷ್ಣಪ್ಪ ಪೂಜಾರಿ ಪಂರ್ದ,  ಗಣೇಶ್ ಬೆದ್ರಾಡಿ,  ಮನೋಹರ್ ಶೆಟ್ಟಿ , ಉಸ್ಮಾನ್ ಕಲ್ಲಕಟ್ಟ , ಬ್ಯಾಂಕಿನ ಅಭಿವೃದ್ಧಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಕು| ಕನ್ನಿಕಾ ಸಾಂತ್ಯಳ್ಳಿ ಪ್ರಾರ್ಥನೆ ಹಾಡಿದರು.  ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸತೀಶ್ ಗೌಡ ಟಿ ಲೆಕ್ಕಪತ್ರ ಮಂಡಿಸಿದರು.  ಸಂಘದ ಉಪಾಧ್ಯಕ್ಷರಾದ ಪ್ರವೀಣ್ ಸ್ವಾಗತಿಸಿದರು . ನಿರ್ದೇಶಕರಾದ ರಾಜೇಶ್ ರೈ ಧನ್ಯವಾದವಿತ್ತರು. ಸಂಘದ ನಿರ್ದೇಶಕರಾದ ಪ್ರತಾಪ್, ಶೇಷಪ್ಪ ಸಾಲಿಯಾನ್, ಅಶ್ರಫ್, ಅಣ್ಣು ಪಿ, ಶಿವರಾಮ, ಪಾರ್ಶನಾಥ್  ಜೈನ್,  ಲಿಡಿಯಾ ಬ್ರಾಗ್ಸ್,  ಸವಿತಾ ವೃತ್ತಿಪರ ನಿರ್ದೇಶಕರಾದ ಕಿರಣ್ ಡಿ ಶೆಟ್ಟಿ ಉಪಸ್ಥಿತರಿದ್ದರು.

ಸಂಘದ ಸಿಬ್ಬಂದಿಗಳಾದ ಶಾಖಾ ಮ್ಯಾನೇಜರ್ ಶಶಿಧರ ಅಡಪ , ಲೆಕ್ಕಿಗ ರೋಹಿಣಿ ಜಿ,  ನವೀನ್ ಕುಮಾರ್ ಎಂ,  ರತ್ನಾವತಿ,  ವೆಂಕಪ್ಪ , ನವೀನ್ ಬಿ,  ಧನುಶ್ , ರಕ್ಷಿತ್ ಕುಮಾರ್,  ಅನುಷಾ,  ಅಬೂಬಕರ್,  ಶ್ರೀಧರ್,  ಸದಸ್ಯರಾದ ಹರಿಶ್ಚಂದ್ರ,  ಸ್ವಚ್ಛತೆಗಾರರಾದ ವಸಂತಿ , ಶೇಖರ , ನವೋದಯ ಪ್ರೇರಕರಾದ ಲೋಕೇಶ್ , ಸರಾಫ ಹರೀಶ್ , ಪಿಗ್ಮಿ ಸಂಗ್ರಹಕಾರರಾದ ಹೈದರ್  ಮತ್ತು ಯೋಗೀಶ್ ಸಹಕರಿಸಿದರು.

LEAVE A REPLY

Please enter your comment!
Please enter your name here