ಮನೆಯ ವಿದ್ಯುತ್ ಬಿಲ್ ಪಾವತಿಸದ ಹಿನ್ನಲೆಯಲ್ಲಿ ಫ್ಯೂಸ್ ತೆಗೆದ ವಿವಾದ: ಮೆಸ್ಕಾಂ ಲೈನ್ ಮ್ಯಾನ್ ಮೇಲೆ ಹಲ್ಲೆಗೆ ಯತ್ನ – ತಡೆಯಲು ಬಂದ ಇನ್ನೋವ೯ ಲೈನ್ ಮ್ಯಾನ್ ಮೇಲೆ ಹಲ್ಲೆ‌ ಗಂಭೀರ ಗಾಯ

0

ಕೊಕ್ಕಡ: ಬೆಳ್ತಂಗಡಿ ತಾಲೂಕಿನ ಹತ್ಯಡ್ಕ ಮುದ್ದಿಗೆ ಎಂಬಲ್ಲಿ ಮನೆಯ ವಿದ್ಯುತ್ ಬಿಲ್ ಪಾವತಿಸದ ಹಿನ್ನಲೆ ಫ್ಯೂಸ್ ತೆಗೆದಿದ್ದ ಕಾರಣಕ್ಕೆ ಮೆಸ್ಕಾಂ ಲೈನ್ ಮ್ಯಾನ್ ಮೇಲೆ ಧಮ೯ಸ್ಥಳ ಗ್ರಾಮದ ರಿಜೇಶ್ ಮತ್ತೀತರರು ಹಲ್ಲೆ ಮಾಡಿರುವ ಘಟನೆ ಸೆ.22 ರಂದು ರಾತ್ರಿ ವೇಳೆ ಕೊಕ್ಕಡದಲ್ಲಿ ನಡೆದಿದೆ.

ಹತ್ಯಡ್ಕ ನಿವಾಸಿ ಕಾಂತುಪೂಜಾರಿ ಎಂಬವರು ಮನೆಯ ವಿದ್ಯುತ್ ಬಿಲ್ ಪಾವತಿಸಿರಲಿಲ್ಲ. ಇಲಾಖೆ ಸೂಚನೆಯನ್ವಯ ಕೊಕ್ಕಡದ ಲೈನ್ ಮ್ಯಾನ್ ಉಮೇಶ್ ವಿದ್ಯುತ್ ಬಿಲ್ ಪಾವತಿಸದ ಹಿನ್ನಲೆ ಫ್ಯೂಸ್ ತೆಗೆದಿದ್ದಾರೆ. ನಂತರ ಸೆ.21ರಂದು  ಬಿಲ್ ಪಾವತಿಸಿದ್ದು, ವಿದ್ಯುತ್ ಸಂಪರ್ಕ ನೀಡಲಾಯಿತೆನ್ನಲಾಗಿದೆ. ವಿದ್ಯುತ್ ಸಂಪರ್ಕದ ಫ್ಯೂಸ್ ತೆಗೆಧ‌ ವಿಚಾರದಲ್ಲಿ ಕಾಂತು ಪೂಜಾರಿಯವರ ಸಂಬಂಧಿ ನಿನ್ನೆ ರಾತ್ರಿ ಕೊಕ್ಕಡದಲ್ಲಿ ಲೈನ್ ಮ್ಯಾನ್ ಉಮೇಶ್ ಅವರನ್ನು ಪ್ರಶ್ನಿಸಿ, ಹಲ್ಲೆಗೆ ಮುಂದಾದಾಗ ಪವರ್ ಮ್ಯಾನ್ ದುಂಡಪ್ಪ ಇದನ್ನು ತಡೆದರೆನ್ನಲಾಗಿದೆ.‌ಈ ಸಂದರ್ಭ  ಪವರ್ ಮ್ಯಾನ್ ದುಂಡಪ್ಪ ತಲೆಗೆ  ಆರೋಪಿ  ಹೊಡೆದಿದ್ದಾರೆ.

ತಲೆಗೆ ‌ ತೀವ್ರವಾದ ಗಾಯವಾದ ದುಂಡಪ್ಪ ಅವರನ್ನು ಕೂಡಲೇ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಧರ್ಮಸ್ಥಳ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.

 

 

 

 

 

LEAVE A REPLY

Please enter your comment!
Please enter your name here