ಮೂಡುಕೋಡಿ ಕೊಪ್ಪದ ಬಾಕಿಮಾರು ಅಂಗನವಾಡಿ ಕೇಂದ್ರದಲ್ಲಿ ಪೌಷ್ಠಿಕ ಆಹಾರ ಸಪ್ತಾಹ

0

ವೇಣೂರು: ಮೂಡುಕೋಡಿ ಗ್ರಾಮದ ಕೊಪ್ಪದ ಬಾಕಿಮಾರು ಅಂಗನವಾಡಿ ಕೇಂದ್ರದಲ್ಲಿ ಪೌಷ್ಠಿಕ ಆಹಾರ ಸಪ್ತಾಹ ಕಾರ್ಯಕ್ರಮವು ಸೆ.೨೩ರಂದು ಜರುಗಿತು.
ಈ ಸಂದರ್ಭ ವೇಣೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಮುಖ್ಯ ವೈದ್ಯಾಧಿಕಾರಿ ಡಾ. ವಿಧತ್ ಜೈನ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಆರೋಗ್ಯ ಇಲಾಖೆಯ ಶ್ರೀಮತಿ ಕುಸುಮಾವತಿ ಅವರು ನಿತ್ಯ ಜೀವನದಲ್ಲಿ ಪೌಷ್ಟಿಕಾಂಶದ ಮಹತ್ವ ಮತ್ತು ಆರೋಗ್ಯಕರ ಆಹಾರ ಸೇವನೆಯ ಮಹತ್ವ ತಿಳಿಸಿದರು. ಅಂಗನವಾಡಿ ಕಾರ್ಯಕರ್ತೆ ಪ್ರಿಯಲತಾ ಹಾಗೂ ಆಶಾ ಕಾರ್ಯಕರ್ತೆ ರೇಖಾ, ಹಾಗೂ ವೇಣೂರು ಗ್ರಾಮವನ್ ಸೆಂಟರ್‌ನ ಶ್ರೀಮತಿ ವಾಣಿ ಜೆ,  ಕು. ಆಶಾ ಉಪಸ್ಥಿತರಿದ್ದರು, ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಪ್ರಿಯಲತಾ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಈ ಸಂದರ್ಭ ಬಾಲವಿಕಾಸ ಸಮಿತಿ ಸದಸ್ಯರು, ಪುಟಾಣಿಗಳು, ಪೋಷಕರು ಉಪಸ್ಥಿತರಿದ್ದರು. ಈ ಸಂದರ್ಭ ಆಯುಷ್ಮಾನ್ ಆರೋಗ್ಯ ಕಾರ್ಡ್ ನೋಂದಣಿ ಹಾಗೂ ಮಾಹಿತಿಯು ಜರುಗಿತು.

LEAVE A REPLY

Please enter your comment!
Please enter your name here