ಸೆ.30: ಉಜಿರೆಯಲ್ಲಿ ‘ಓಷನ್ ಪರ್ಲ್’ ಹೋಟೆಲ್ ಉದ್ಘಾಟನೆ

0

ಉಜಿರೆ: ಗುಣಮಟ್ಟದ ಆಹಾರ ಮತ್ತು ಉತ್ಕೃಷ್ಟ ಸೇವೆಗಳಿಂದ ಗ್ರಾಹಕರ ಪ್ರೀತಿ ಮತ್ತು ವಿಶ್ವಾಸಕ್ಕೆ ಪಾತ್ರವಾಗಿರುವ ‘ಓಷನ್ ಪರ್ಲ್’ ಹೋಟೆಲ್ ಸೆ.30ರಂದು ಉಜಿರೆ ಎಸ್ ಡಿ ಎಂ ನ್ಯಾಚುರಪತಿ ಕಾಲೇಜು ಬಳಿ ಉದ್ಘಾಟನೆಗೊಳ್ಳಲಿದೆ.

 ಈ ಹೋಟೆಲ್‌ನಲ್ಲಿ ಸಸ್ಯಹಾರಿ ಮತ್ತು ಮಾಂಸಾಹಾರಿ ರೆಸ್ಟೋರೆಂಟ್‌ಗಳಿರಲಿವೆ. ಒಂದು ಪ್ರೆಸಿಡೆನ್ಸಿಯಲ್,  ಸೂಟ್‌ ರೂಂ, ಮೂರು ಸೂಟ್‌ ರೂಂ ಸಹಿತ  ಒಟ್ಟು 36 ಸುಸಜ್ಜಿತ ರೂಮ್‌ಗಳಿವೆ. ಸಭೆ ಸಮಾರಂಭಗಳಿಗಾಗಿ 1 ಬ್ಯಾಂಕ್ವೆಟ್ ಹಾಲ್  ವ್ಯವಸ್ಥೆಯೂ ಇದೆ.

ಹೆಸರಾಂತ ಉದ್ಯಮಿ, ಬರೋಡಾದ ಶಶಿ ಕ್ಯಾಟರಿಂಗ್ ಸರ್ವಿಸ್ ಸಂಸ್ಥೆಯ ಆಡಳಿತ ನಿರ್ದೇಶಕ ಶಶಿಧರ್ ಶೆಟ್ಟಿ ಹೊಟೇಲ್ ನ ಪ್ರವರ್ತಕರಾಗಿದ್ದಾರೆ. ಅವರು ತನ್ನ ತಾಯಿ ಕಾಶಿ ಶೆಟ್ಟಿಯವರ ಹೆಸರಿನಲ್ಲಿ ನಿರ್ಮಿಸಿರುವ ಕಾಶಿ ಪ್ಯಾಲೆಸ್ ಕಟ್ಟಡದಲ್ಲಿ ಹೊಟೇಲ್ ಆರಂಭಗೊಳ್ಳಲಿದೆ. ಓಷನ್‌ ಪರ್ಲ್ ಆಡಳಿತ ಮಂಡಳಿ ಹೊಟೇಲ್ ನಿರ್ವಹಣೆ ಮಾಡಲಿದೆ.

ಹೋಟೆಲ್ ಉದ್ಯಮವನ್ನು ನಾವು ವ್ಯವಹಾರದ ಬದಲಾಗಿ ಸೇವೆ ಎಂದು ಪರಿಗಣಿಸಿದ್ದೇವೆ. ಗ್ರಾಹಕರ ಪ್ರೀತಿ ಮತ್ತು ವಿಶ್ವಾಸ ನಮ್ಮ ಯಶಸ್ಸಿನ ಹಿಂದಿದೆ. ಗ್ರಾಹಕರ ಆದ್ಯತೆಗಳಿಗೆ ನಾವು ಸ್ಪಂದಿಸುತ್ತೇವೆ.

ಗುಣಮಟ್ಟದ ಮತ್ತು ಶುಚಿ ರುಚಿಯಾದ ಆಹಾರಕ್ಕೆ ಆದ್ಯತೆ ನೀಡುತ್ತಿದ್ದೇವೆ. ಈ ಪರಂಪರೆ ಉಜಿರೆ ಹೋಟೆಲ್‌ನಲ್ಲೂ ಮುಂದುವರಿಯಲಿದೆ ಎಂದು ಓಷನ್‌ ಪರ್ಲ್ ಸಂಸ್ಥೆಯ ಅಧ್ಯಕ್ಷ ಜಯರಾಮ್ ಬನಾನ್ ಮತ್ತು ಉಪಾಧ್ಯಕ್ಷ ಬಿ.ಎನ್‌. ಗಿರೀಶ್ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here