ಅನುಗ್ರಹ ವಿವಿಧೋದ್ದೇಶ ಸಹಕಾರ ಸಂಘದ ಮಹಾಸಭೆ: ಸದಸ್ಯರಿಗೆ ಶೇ 17% ಡಿವಿಡೆಂಡ್ ಘೋಷಣೆ

0

ಉಜಿರೆ : ಉಜಿರೆ ಅನುಗ್ರಹ ವಿವಿಧೋದ್ದೇಶ ಸಹಕಾರ ಸಂಘದ ಮಹಾಸಭೆಯು ಅಧ್ಯಕ್ಷ ವಲೇರಿಯನ್ ರೊಡ್ರಿಗಸ್ ರವರ ಅಧ್ಯಕ್ಷೆಯಲ್ಲಿ ಸೆ.24ರಂದು ಉಜಿರೆ ಎಸ್ ಕೆ. ಮೆಮೋರಿಯಲ್ ಸಭಾಂಗಣದಲ್ಲಿ ಜರಗಿತು.

ಅನುಗ್ರಹ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ವ.ಫಾ.ವಿಜಯ್ ಲೋಬೊ ಪ್ರಾರ್ಥನೆ ನೆರವೇರಿಸಿ ಆಶೀರ್ವದಿಸಿದರು.

ಸಂಘದಲ್ಲಿ 2021-22ಸಾಲಿನಲ್ಲಿ ವರ್ಷಾಂತ್ಯಕ್ಕೆ ಒಟ್ಟು 2292ಸದಸ್ಯರು ರೂ.29.14ಲಕ್ಷ ಪಾಲು ಬಂಡವಾಳ ಹೊಂದ್ದಿದ್ದು, ರೂ.2706.62ಲಕ್ಷ ಡೆಪೋಸಿಟ್ ಸಂಗ್ರಹಿಸಲಾಗಿದೆ. ರೂ.11367.99ಲಕ್ಷ ವ್ಯವಹಾರ ನಡೆಸಿ ರೂ.27.23ಲಕ್ಷ ಲಾಭಗಳಿಸಿದೆ ಎಂದರು. ಸದಸ್ಯರಿಗೆ ಶೇ 17% ಡಿವಿಡೆಂಡ್ ಘೋಷಿಸಿದರು.

ಮುಖ್ಯಕಾರ್ಯನಿರ್ವಾಹಣಾ ಧಿಕಾರಿ ವಿಲ್ಸನ್ ನೆಲ್ಸನ್ ಮೋನಿಸ್ ವರದಿ ಹಾಗೂ ಲೆಕ್ಕ ಪತ್ರ ಮಂಡಿಸಿದರು. ಸಭೆಯಲ್ಲಿ ಲೆಕ್ಕ ಪರಿಶೋಧಕರನ್ನು ನೇಮಿಸಲಾಯಿತು. ಉಪನಿಬಂಧನೆಗಳ ತಿದ್ದುಪಡಿ, ಲಾಭ ವಿಂಗಡನೆ ನಡೆಯಿತು.

ಸಭೆಯಲ್ಲಿ ಉಪಾಧ್ಯಕ್ಷರಾದ ಅನಿಲ್ ಡಿಸೋಜ, ನಿರ್ದೇಶಕರಾದ ಸಿಲ್ವೆಸ್ಟರ್ ಮೋನಿಸ್ ಹೆರಾಲ್ಡ್ ಡೆಸಾ, ಸುನಿಲ್ ಮೊರಾಸ್, ಅರುಣ್ ಡಿಸೋಜ,  ಗೀತಾ ಪೇಲಿಸಿಯ ಡಿಸೋಜ, ಫೆಲಿಕ್ಸ್ ಡಿಸೋಜ,  ಬೆನೆಡಿಕ್ಟ ಸಲ್ದಾನ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ನಿರ್ದೆಶಕ ಅನಿಲ್ ಡಿಸೋಜ ಸ್ವಾಗತಿಸಿದರು. ನಿರ್ದೆಶಕಿ ಆಶಾ ಬೆನೆಡಿಕ್ಟ್ ಸಲ್ದಾನ ಧನ್ಯವಾದ ಅರ್ಪಿಸಿದರು. ನಿರ್ದೇಶಕ ಸುನಿಲ್ ಮೋರಸ್ ನಿರೂಪಿಸಿದರು. ಸನ್ಮಾನಿತರ ಪರಿಚಯ ನಿರ್ದೇಶಕಿ ಗೀತಾ ಪೆಲಿಸಿಯ ಡಿಸೋಜ ಮಾಡಿದರು.

ಈ ಸಂದರ್ಭದಲ್ಲಿ ಲೈಲಾ ಗ್ರಾಮ ಪಂಚಾಯತ್ ಅಧ್ಯಕ್ಷೆ  ಬೆನೆಡಿಕ್ಟ್ ಸಲ್ದಾನ, ಉಜಿರೆ ಎಸ್.ಎ ಮೆಡಿಕಲ್ಸ್ ಮಾಲಕ ಪ್ರಕಾಶ್ ಫೆರ್ನಾಂಡಿಸ್, ವೈದ್ಯಾಧಿಕಾರಿ ಸವೆರ ಪಿಂಟೊ, ಸ್ನೇಕ್ ಜಾಯ್, ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.

ಇದೆ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು. ವೈದ್ಯಕೀಯ ನೆರವು, ಪಿಗ್ಮಿ ಸಂಗ್ರಾಹಕರಿಗೆ ಗೌರವಧನ ವಿತರಿಸಲಾಯಿತು.

LEAVE A REPLY

Please enter your comment!
Please enter your name here