ಟೀಂ ಅಭಯಹಸ್ತ ಸಾಂತ್ವನ ಸೇವಾ ಪಂದ್ಯಾವಳಿ ಆಯೋಜನಾ ಸಮಿತಿ ಅಳದಂಗಡಿ ಹಾಗೂ ಟೀಂ ಅಭಯಹಸ್ತ ಬೆಳ್ತಂಗಡಿ ಇದರ ವತಿಯಿಂದ ಸ.ಉ.ಹಿ.ಪ್ರಾ ಶಾಲೆ ಬಡಗಕಾರಂದೂರು ಮಕ್ಕಳಿಗೆ ಪಠ್ಯಪುಸ್ತಕದ ವೆಚ್ಚವಾಗಿ ಆರ್ಥಿಕ ನೆರವಿನ ಮೊತ್ತ ಹಸ್ತಾಂತರ

0

ಬಡಗಕಾರಂದೂರು: ಟೀಂ ಅಭಯಹಸ್ತ ಸಾಂತ್ವನ ಸೇವಾ ಪಂದ್ಯಾವಳಿ ಆಯೋಜನಾ ಸಮಿತಿ ಅಳದಂಗಡಿ ಹಾಗೂ ಟೀಂ ಅಭಯಹಸ್ತ ಬೆಳ್ತಂಗಡಿ ಇದರ ವತಿಯಿಂದ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಬಡಗಕಾರಂದೂರು ಇಲ್ಲಿನ ಯು ಕೆ ಜಿ ವಿಭಾಗದ ವಿಧ್ಯಾರ್ಥಿಗಳ ಪಠ್ಯಪುಸ್ತಕದ ವೆಚ್ಚವಾಗಿ ಆರ್ಥಿಕ ನೆರವಿನ ಮೊತ್ತವನ್ನು ಸಂಘಟನೆಯ ಪ್ರಧಾನ ಸಂಚಾಲಕ ಸಂದೀಪ್ ಎಸ್ ನೀರಲ್ಕೆ ಅವರು ಶಾಲಾಭಿವೃದ್ಧಿ ಸಮಿತಿಗೆ ಹಸ್ತಾಂತರಿಸಿದರು.

ಸೇವೆ ಸಂಘಟನೆ ಸಾಮರಸ್ಯದ ಸಂದೇಶದ ಜೊತೆಗೆ ಸೇವೆಗಾಗಿ ಕ್ರೀಡೆ ಎಂಬ ಪರಿಕಲ್ಪನೆಯಡಿ ಕಳೆದ ಐದು ವರ್ಷಗಳಿಂದ ಸಂಘಟನೆಯು ಕಾರ್ಯಾಚರಿಸುತ್ತಿದೆ.

 

LEAVE A REPLY

Please enter your comment!
Please enter your name here