ತಾಲೂಕಿನ ವಸತಿ ಯೋಜನೆಯ ಫಲಾನುಭವಿಗಳ ಆಧಾರ್- ಬ್ಯಾಂಕ್ ಖಾತೆಗೆ ಲಿಂಕ್ ನ ಸಮಸ್ಯೆಯ ಕುರಿತು ಪರಿಹಾರ ನೀಡುವ ಅಭಿಯಾನ

0

ಬೆಳ್ತಂಗಡಿ:  ತಾಲೂಕಿನ ವಸತಿ ಯೋಜನೆಯ ಫಲಾನುಭವಿಗಳ ಆಧಾರ್- ಬ್ಯಾಂಕ್ ಖಾತೆಗೆ ಲಿಂಕ್ ನ ಸಮಸ್ಯೆಯ ಕುರಿತು ಪರಿಹಾರ ನೀಡುವ ನಿಟ್ಟಿನಲ್ಲಿ ಅಭಿಯಾನವನ್ನು ಭಾರತೀಯ ಮಜ್ದೂರ್ ಸಂಘದ ತಾಲೂಕು ಸಮಿತಿ ಕಚೇರಿಯಲ್ಲಿ ಸೆ.24ರಂದು ನಡೆಸಲಾಯಿತು.

ಈ ಸಂದರ್ಭದಲ್ಲಿ ವಸತಿ ಯೋಜನೆ ಫಲಾನುಭವಿಗಳು ಮನೆಗಾಗಿ ಅರ್ಜಿ ಸಲ್ಲಿಸಿ, ಆಧಾರ್ ಕಾರ್ಡ್- ಬ್ಯಾಂಕ್ ಲಿಂಕ್ ಸಮಸ್ಯೆಯಿಂದ ವಸತಿ ನಿಗಮದಿಂದ ಫಲಾನುಭವಿಗಳ ಖಾತೆಗೆ ಹಣ ಹಾಕಿದರೂ ಪಲಾನುಭವಿಗಳ ಖಾತೆಗೆ ಜಮಾ ಆಗದೆ ತಿರಸ್ಕೃತ ವಾಗುತ್ತಿದ್ದು ಈ ಕುರಿತು ಸಮಸ್ಯೆಯನ್ನು ಬಳಲುತ್ತಿದ್ದ ಫಲಾನುಭವಿಗಳಿಗೆ ಭಾರತೀಯ ಮಜ್ದೂರ್ ಸಂಘದ ತಾಲೂಕು ಸಮಿತಿ ಬೆಳ್ತಂಗಡಿ ಇದರ ವತಿಯಿಂದ ಸೆ.24 ರಂದು ಅಭಿಯಾನ ಕೈಗೊಂಡು ಡಿ. ಬಿ. ಟಿ. ಅ್ಯಪ್ ನ ಮುಖಾಂತರ ಬ್ಯಾಂಕ್ ಖಾತೆಯಲ್ಲಿ ಚೆಕ್ ಮಾಡಿಸಿ ಲಿಂಕ್ ಇಲ್ಲದ ಫಲಾನುಭವಿಗಳ ಬ್ಯಾಂಕ್ ಖಾತೆಯನ್ನು ಆಧಾರ್ ಗೆ ಲಿಂಕ್ ಮಾಡುವ ದೃಷ್ಟಿಯಲ್ಲಿ ಲೀಡ್ ಬ್ಯಾಂಕ್ ಅನ್ನು ಹಿರಿಯ ಅಧಿಕಾರಿಗಳ ಸಹಾಯ ತೆಗೆದುಕೊಂಡು ಆಯಾಯ ಬ್ಯಾಂಕ್ ಅಧಿಕಾರಿಗಳಿಗೆ ಈ ಖಾತಾದಾರರನ್ನು ಲಿಂಕ್ ಮಾಡುವ ಕುರಿತು ನಿರ್ದೇಶಿಸಲಾಯಿತು.

ಈ ಸಂದರ್ಭ ಭಾರತೀಯ ಮಜ್ದೂರ್ ಸಂಘದ ರಾಜ್ಯ ಕಾರ್ಯದರ್ಶಿ ಜಯರಾಜ್ ಸಾಲಿಯಾನ್ ಬಿಎಂಎಸ್ ನ ತಾಲೂಕು ಸಂಯೋಜಕ ಸಾಂತಪ್ಪ ಕಲ್ಮಂಜ ಕಚೇರಿ ವ್ಯವಸ್ಥಾಪಕರಾದ ಶ್ರೀಮತಿ ರೂಪಲತಾ ಕು.ಶುಭ ಕು.ಅಶ್ವಿನಿ ಕು.ರಮ್ಯಾ ಸಹಕರಿಸಿದರು.

LEAVE A REPLY

Please enter your comment!
Please enter your name here