ಗಂಡೀಬಾಗಿಲು ಚರ್ಚ್ ನಲ್ಲಿ ಕೆ ಎಸ್ ಎಂ ಸಿ ಎ ವತಿಯಿಂದ ವಿನ್ಸ೦ಟ್ ಡಿ ಪೌಲ್ ದಿನಾಚರಣೆ

0

ನೆರಿಯ :ಗಂಡಿಬಾಗಿಲಿನ ಸಂತ ತೋಮಸರ ದೇವಾಲಯದಲ್ಲಿ ದುರ್ಬಲ ವಿಭಾಗಗಳ ದೀನರ, ರೋಗಿಗಳ ವ್ರದ್ದರ ಸೇವೆಯಲ್ಲಿ ನಿರತವಾಗಿರುವ ಇಲ್ಲಿನ ವಿನ್ಸೆಂಟ್ ಡಿ ಪೌಲ್ ಸೊಸೈಟಿ ಯ ಸದಸ್ಯರನ್ನು ಅಭಿನಂದಿಸಿದರು.

ವಿನ್ಸೆಂಟ್ ಡಿ ಸೊಸೈಟಿ ಇಲ್ಲಿನ ವಿವಿಧ ಧರ್ಮಗಳ ದುರ್ಬಲ ವಿಭಾಗದ ವ್ರದ್ದರಿಗೆ, ರೋಗಿಗಳಿಗೆ ವಿವಿಧ ರೀತಿಯ ಸಹಾಯ ಹಸ್ತ, ಬಡ ಶಾಲಾ ವಿದ್ಯಾರ್ಥಿಗಳಿಗೆ ಕಲಿಕಾ ಸಹಾಯಧನ , ವೃದ್ದ ರೋಗಿಗಳಿಗೆ ಧಾರ್ಮಿಕ ಮತ್ತು ಪೂಜಾ ವಿಧಿಗಳು ತಲುಪಿಸಿ ಕೊಡುವ ವ್ಯವಸ್ಥೆ, ಮರಣಾನಂತರದ ಕ್ರಿಯೆಗಳಲ್ಲಿ ಸಹಾಯ ಹೀಗೆ ಹತ್ತು ಹಲವು ಜನಪರ ಸಹಾಯಗಳನ್ನು ಮಾಡುವ ಈ ಸಂಸ್ಥೆ ಯ ಕಾರ್ಯ  ಶ್ಲಾಘನಿಯ ಎಂದು ಸಂತ ತೋಮಸರ ಚರ್ಚಿನ ವಂ. ಶಾಜಿ ಮಾತ್ಯು ಅಭಿನಂದಿಸಿದರು. ಟ್ರಸ್ಟಿಗಳಾದ  ಸೇಬಾಸ್ಟಿನ್ ಎಂ ಜೆ ಸೊಸೈಟಿ ಯ ಚಟುವಟಿಕೆಗಳು ದೇವರು ಮತ್ತು ಜನರು ಮೆಚ್ಚುವಂತಹದು ಎಂದು ಹಾರೈಸಿದರು.

ಚಾಂಡಿ, ಜೋನಿ, ತೋಮಸ್, ಶಾಜಿ, ಜೋಸ್, ಶಿಜೋ, ಬೇಬಿ ವರ್ಗಿಸ್, ಆಗಸ್ಟಿನ್, ಸಂತೋಷ್, ಶ್ರೀಮತಿ ಆಲೀಸ್, ಬೀನಾ ಇವರನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಚರ್ಚಿನ ಪಾಲನಾ ಸಮಿತಿಯ ಪರವಾಗಿ ಟ್ರಸ್ಟಿಗಳಾದ  ಸೇಬಾಸ್ಟಿನ್ ಎಂ ಜೆ , ಕುಂಜುಮೋನ್,  ಆಗಸ್ಟಿನ್ ಬೇಬಿ ಹಾಗೂ ಕೆ ಎಸ್ ಎಂ ಸಿ ಎ ಪದಾಧಿಕಾರಿಗಳಾದ ಬೇಬಿ ವಿ ಟಿ ಶ್ರೀ ಮನೋಜ್ ಎಂ ,ಶ್ರೀಮತಿ ಬೀನಾ ಅಲೆಕ್ಸ್ ಶ್ರೀಮತಿ ಸುಜಿ ಡೊಲ್ಫಿ ಉಪಸ್ಥಿತರಿದ್ದರು. ಧರ್ಮೋಪದೇಶ ಕೇಂದ್ರದ ಷಿಜು ಸಿ ವಿ ಕಾರ್ಯಕ್ರಮ ನಿರೂಪಿಸಿದರು

LEAVE A REPLY

Please enter your comment!
Please enter your name here