ಉಜಿರೆ:ಜಾಗತಿಕ ಔಷಧ ತಜ್ಞರ ದಿನಾಚರಣೆ.

0

ಉಜಿರೆ :ಸ್ನೇಹಭರಿತ ಸ್ಪಂದನೆಯೊಂದಿಗೆ ತಜ್ಞ ವೈದ್ಯರ ಸಲಹೆಯಂತೆ ನೀಡುವ ಔಷಧಿಗಳ ಕುರಿತು ಮಾಹಿತಿಯನ್ನು ಔಷದ ವ್ಯಾಪಾರಸ್ಥರು ಗ್ರಾಹಕರಿಗೆ ನೀಡಬೇಕು. ವ್ಯಾಪಾರವನ್ನೇ ಧ್ಯೇಯವಾಗಿಸದೇ ಉತ್ತಮ ಸೇವೆಯ ಮೂಲಕ ವ್ಯವಹರಿಸಿದರೆ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮುಂದುವರೆಯಲು ಸಮಸ್ಯೆಯಾಗದು
ಎಂದು ಮಂಗಳೂರು ವೃತ್ತ-1ರ ಸಹಾಯಕ ಔಷಧ ನಿಯಂತ್ರಕ ಉದಯ ಕಿಶೋರ್ ಹೇಳಿದರು.
ಅವರು ಸೆ.25 ರಂದು ಉಜಿರೆಯ ಶಾರದಾ ಮಂಟಪದಲ್ಲಿ ಬೆಳ್ತಂಗಡಿ ತಾಲೂಕು, ಔಷಧ ವ್ಯಾಪಾರಸ್ಥರ ಸಂಘದ ವತಿಯಿಂದ ನಡೆದ ಜಾಗತಿಕ ಔಷಧ ತಜ್ಞರ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.

ಜಿಲ್ಲಾ ಔಷಧ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಸುಜಿತ್ ಎಂ. ಭಿಡೆ ಮಾತನಾಡಿ ಇಂದು ಎಲ್ಲಾ ರಂಗಗಳಂತೆ ಔಷಧ ವ್ಯಾಪಾರದಲ್ಲೂ ಹೆಚ್ಚಿನ ಸ್ಪರ್ಧೆಗಳಿವೆ. ಇದನ್ನು ಆತ್ಮವಿಶ್ವಾಸದಿಂದ ಎದುರಿಸಬೇಕು ಎಂದರು.
ಬೆಳ್ತಂಗಡಿ ತಾಲೂಕು ಔಷಧ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಚಂದ್ರಶೇಖರ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ರಘುನಾಥ ದಾಮ್ಲೆ, ಕೋಶಾಧಿಕಾರಿ ಗಣಪತಿ ಭಟ್, ಜಿಲ್ಲಾ
ಕಾರ್ಯದರ್ಶಿ ಗುರುಚರಣ್ ರಾವ್, ಗ್ರೂಪ್ ಫಾರ್ಮಸ್ ಕ್ಯೂಟಿಕಲ್ ನ ವ್ಯಾಪಾರ ಅಭಿವೃದ್ಧಿ ವಿಭಾಗದ ಉಪಾಧ್ಯಕ್ಷ ಸುನಿಲ್ ಚಿಪ್ಲೂಣ್ಕರ್ ಉಪಸ್ಥಿತರಿದ್ದರು.
ಸಗಟು ಔಷದ ವ್ಯಾಪಾರಸ್ಥ ಭಾಸ್ಕರ್ ಹಾಗೂ ಫಾರ್ಮಸಿಸ್ಟ್ ಸುಜಿತ್ ಅವರನ್ನು ಸನ್ಮಾನಿಸಲಾಯಿತು.

ಉಪಾಧ್ಯಕ್ಷ ಶ್ರೀಧರ ಕೆ. ವಿ.ಸ್ವಾಗತಿಸಿದರು. ಮಾಧವ ಗೌಡ ವಂದಿಸಿದರು. ಪ್ರಕಾಶ್ ಕಾರ್ಯಕ್ರಮ ನಿರೂಪಿಸಿದರು.
ಅನಾರೋಗ್ಯದಿಂದ ಬಳಲುತ್ತಿರುವ ತಾಲೂಕಿನ ನಾನಾ ಗ್ರಾಮಗಳ ರಮೇಶ, ಸರಸ್ವತಿ, ಗಿರೀಶ್, ರಾಮಚಂದ್ರ, ರಫೀಕ್, ಭವಾನಿ ಹಾಗೂ ಸುಂದರ ನಾಯ್ಕ ಅವರಿಗೆ ಸಂಘದ ವತಿಯಿಂದ ಧನ ಸಹಾಯ ನೀಡಲಾಯಿತು.
ತಾಲೂಕಿನ ಆಯ್ದ ಹೈನುಗಾರರೀಗೆ ಕ್ಯಾಲ್ಸಿಯಂ ಒರಲ್ ಸಿರಪ್ ಹಾಗೂ ಜೀವ ರಕ್ಷಕ ಉಪಕರಣ ನೀಡಲಾಯಿತು.

LEAVE A REPLY

Please enter your comment!
Please enter your name here