ಹೊಸಪಟ್ನ: ಉಚಿತ ರಕ್ತ ತಪಾಸಣೆ-ಮಾಹಿತಿ ಶಿಬಿರದ ಉದ್ಘಾಟನೆ

0

ವೇಣೂರು: ರಕ್ತವನ್ನು ಕೃತಕವಾಗಿ ಉತ್ಪಾದನೆ ಮಾಡಲು ಸಾಧ್ಯವಿಲ್ಲ. ಎಲ್ಲರ ರಕ್ತದ ಬಣ್ಣ ಒಂದೇ ಆಗಿದ್ದರೂ ಅದರಲ್ಲಿ ಬೇರೆಬೇರೆ ಗುಂಪುಗಳಿರುತ್ತದೆ. ಅದರ ವಿಧವನ್ನು ತಿಳಿದುಕೊಳ್ಳುವುದು ತುರ್ತು ಸಂದರ್ಭಗಳಲ್ಲಿ ಸಹಕಾರಿ ಆಗುತ್ತದೆ ಎಂದು ವೇಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸುಂದರ ಹೆಗ್ಡೆ ಬಿ.ಇ ಹೇಳಿದರು.

ಸತ್ಯನಾರಾಯಣ ಪೂಜಾ ಸೇವಾ ಸಮಿತಿ ಹೊಸಪಟ್ಣ, ಸತ್ಯನಾರಾಯಣ ಫ್ರೆಂಡ್ಸ್ ಕ್ಲಬ್, ಸತ್ಯನಾರಾಯಣ ಭಜನ ಮಂಡಳಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾ.ಯೋ. ಹೊಸಪಟ್ಣ ಒಕ್ಕೂಟ ಹಾಗೂ ಸ್ಪಂದನ ದ.ಕ. ಜಿಲ್ಲಾ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘದ ಜಂಟಿ ಆಶ್ರಯದಲ್ಲಿ ಸೆ.25ಂದು ಹೊಸಪಟ್ಣ ಶ್ರೀ ಸತ್ಯನಾರಾಯಣ ರಂಗಮಂದಿರದಲ್ಲಿ ಜರಗಿದ ಉಚಿತ ರಕ್ತ ತಪಾಸಣೆ ಹಾಗೂ ಮಾಹಿತಿ ಶಿಬಿರದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ವೇಣೂರು ಗ್ರಾ.ಪಂ. ಅಧ್ಯಕ್ಷ ನೇಮಯ್ಯ ಕುಲಾಲ್ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ಮನಪಾದ ನಿವೃತ್ತ ಆಯುಕ್ತ ಲೋಕಯ್ಯ ಗೌಡ ಮಣೇಲುಬೈಲು, ಜಿಲ್ಲಾ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘದ ಸಂಯೋಜಕ ವಸಂತ ನಡ, ವೇಣೂರು ಗ್ರಾ.ಪಂ. ಸದಸ್ಯರಾದ ಅರುಣ್ ಕ್ರಾಸ್ತ, ಸತೀಶ್ ಹೆಗ್ಡೆ, ಸುನಿಲ್ ಕುಮಾರ್, ಜನಜಾಗೃತಿ ವಲಯಧ್ಯಕ್ಷ ಹರೀಶ್ ಕುಮಾರ್, ಸತ್ಯನಾರಾಯಣ ಸೇವಾ ಸಮಿತಿ ಸಂಚಾಲಕ ಗಣೇಶ್ ಪೂಜಾರಿ, ಗೌರವ ಸಲಹೆಗಾರ ಪದ್ಮನಾಭ ರೈ ಬ್ರಾಣಿಗೇರಿ, ಸತ್ಯನಾರಾಯಣ ಭಜನಾ ಮಂಡಳಿ ಅಧ್ಯಕ್ಷ ಗೋಪಾಲ್ ಪೂಜಾರಿ, ಪ್ರಗತಿಬಂಧು ಒಕ್ಕೂಟದ ಅಧ್ಯಕ್ಷ ವಿಜಯ ಹೊಟಪಟ್ಣ, ಯೋಜನೆಯ ಮೇಲ್ವಿಚಾರಕಿ ಶಾಲಿನಿ, ಸತ್ಯನಾರಾಯಣ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಕಿಶೋರ್ ಪೂಜಾರಿ ನಾಯರ್‍ಮೇರು, ಡಾ| ಚಂದ್ರಿಕಾ,  ಸೇವಾ ಪ್ರತಿನಿಧಿ ಹರೀಶ್ ಕುಮಾರ್  ಬಾಡಾರು ಹಾಗೂ ಮತ್ತಿತರು ಉಪಸ್ಥಿತರಿದ್ದರು.

ಸತ್ಯನಾರಾಯಣ ಪೂಜಾ ಸಮಿತಿ ಅಧ್ಯಕ್ಷ ಪ್ರವೀಣ್ ಪೂಜಾರಿ ಜಾರಿಗೆದಡಿ ಸ್ವಾಗತಿಸಿ, ಸತ್ಯನಾರಾಯಣ ಸೇವಾ ಸಮಿತಿ ಕಾರ್ಯದರ್ಶಿ ಭಾಸ್ಕರ ಪೂಜಾರಿ ನಾಯರ್‍ಮೇರು ನಿರೂಪಿಸಿದರು. ಸೇವಾಪ್ರತಿನಿಧಿ ನಳಿನಿ ವಂದಿಸಿದರು.

LEAVE A REPLY

Please enter your comment!
Please enter your name here