ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ ಓಡಿಲ್ನಾಳ ಮತ್ತು ಕುವೆಟ್ಟು ಗ್ರಾಮ ಸಮಿತಿ

0

ಕುವೆಟ್ಟು:  ಗ್ರಾಮ ಸಮಿತಿಯ ಸದಸ್ಯರ ಸಭೆಯು ದಿನಾಂಕ ಸೆ.25 ರಂದು ಶ್ರೀ ಗೋಪಾಲ ಗೌಡ ಕೋಡಿಬೈಲ್ ಇವರ ಅಧ್ಯಕ್ಷತೆಯಲ್ಲಿ ಶ್ರೀ ನೇಮಣ್ಣ ಗೌಡ ಕರ್ನoತ್ತೋಡಿ ಇವರ ಮನೆಯಲ್ಲಿ ನಡೆಯಿತು.

ಈ ಸಭೆಯಲ್ಲಿ ಉಪಾಧ್ಯಕ್ಷರಾದ ಜನಾರ್ದನ ಗೌಡ ಮಡoತ್ತಿಲ, ಗೌರವಾಧ್ಯಕ್ಷರಾದ ಚೆನ್ನಪ್ಪ ಗೌಡ ಕರ್ನoತ್ತೋಡಿ, ಗೌರವ ಸಲಹೆಗಾರರಾದ ಚಿದಾನಂದ ಗೌಡ ವರಕಬೆ, ಶಿವಪ್ಪ ಗೌಡ  ಉಳತ್ತೋಡಿ ಹಾಗೂ ಎಲ್ಲಾ ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳು, ಕುವೆಟ್ಟು ಗ್ರಾಮ ವಿಕಾಸ ಸಮಿತಿಯ ಅಧ್ಯಕ್ಷರಾದ ವಸಂತ ಗೌಡ ವರಕಬೆ ಹಾಗೂ ಸರ್ವ ಸದಸ್ಯರರು ಉಪಸ್ಥಿತರಿದ್ದರು.

ಈ ಸಭೆಯಲ್ಲಿ ಎಸ್ ಎಸ್ ಎಲ್ ಸಿ ಯಲ್ಲಿ ಶೇ.85 ಮತ್ತು ದ್ವಿತೀಯ ಪಿಯುಸಿ ಯಲ್ಲಿ ಶೇ. 80ಕ್ಕೂ ಅಧಿಕ ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ತಿರುಮಲೇಶ್ ಗೌಡ ಸ್ವಾಗತಿಸಿ, ಕಾರ್ಯದರ್ಶಿ ರೋಹಿತ್ ಗೌಡ ಕೇದಗೆ ಕಾರ್ಯಕ್ರಮ ನಿರೂಪಿಸಿದರು, ಸಂಘಟನಾ ಕಾರ್ಯದರ್ಶಿ ಕೆ ಎಸ್ ರಾಘವೇಂದ್ರ ಗೌಡ ವಂದಿಸಿದರು.

LEAVE A REPLY

Please enter your comment!
Please enter your name here