ಶಾಕ್ ತಂದುಕೊಟ್ಟ ವಿದ್ಯುತ್ ಬಿಲ್ಲು

0

ಇಳಂತಿಲ:  ಗ್ರಾಮದ ಆರ್ ಆರ್ ನಂಬ್ರ ಬಿ ಎಲ್ 12195 ಕಯರ್ಪಾಡಿ ಟಿ ಸಿ ಗೆ ಸಂಭಂದಿಸಿದ ಕುಲುಸುಮ್ಮ ಕನ್ಯಾರಕೋಡಿ ಎಂಬವರಿಗೆ ಸೆ.16ರಂದು ಬಂದ ವಿದ್ಯುತ್ ಬಿಲ್ಲು ಶಾಕ್ ತಂದುಕೊಟ್ಟಿದೆ. ಸಾಮಾನ್ಯವಾಗಿ ಬರುತ್ತಿದ್ದ ವಿದ್ಯುತ್ ಬಿಲ್ಲು 150 ಅಥವಾ 200 ಬರುತ್ತಿದ್ದು ಹೈ ಹೆಚ್ ಸಂಪರ್ಕ ಪಡೆದುಕೊಂಡ ನಂತರ 750 ರವರಿಗೆ ಬರುತಿತ್ತು,  ಎಲ್ಲಾ ಬಿಲ್ಲು ಗಳನ್ನು ಪಾವತಿಸಿದ್ದು ಎರಡು ತಿಂಗಳ ಬಿಲ್ಲು ಮಾತ್ರ ಪಾವತಿಸಲು ಬಾಕಿಯಾಗಿತ್ತು.
ಇದೀಗ ಸೆ.16 ರಂದು ಬಂದ ವಿದ್ಯುತ್ ಬಿಲ್ಲು 24.270.00 (ಇಪ್ಪತ್ತನಾಲ್ಕು ಸಾವಿರದ ಇನ್ನೂರ ಎಪ್ಪತ್ತು ರೂಪೈ) ನೋಡಿ ಕುಲುಸುಮ್ಮ ರವರು ಶಾಕ್ ಆಗಿದ್ದಾರೆ. ಈ ಬಗ್ಗೆ ಬೆಳ್ತಂಗಡಿ ವಿದ್ಯುತ್ ಕಚೇರಿಯಲ್ಲಿ ವಿಚಾರಿಸಿದಾಗ ನೀವು ಬಿಲ್ಲು ಪಾವತಿಲೇ ಬೇಕೆಂದು ಅಧಿಕಾರಿಗಳು ಹೇಳಿದ್ದು ಕುಲುಸುಮ್ಮ ರವರು ಕಂಗಾಲಾಗಿದ್ದಾರೆ, ಈ ಮಹಿಳೆಗೆ ನ್ಯಾಯ ಕೊಡುವವರು ಯಾರು…..?

ದಯವಿಟ್ಟು ವಿದ್ಯುತ್ ಇಲಾಖೆ ಉತ್ತರಿಸಬೇಕು. ಇದು ಯಾರಿಂದಾದ ತಪ್ಪು ಇದಕ್ಕೆ ಹೊಣೆಗಾರರು ಯಾರು…..?

LEAVE A REPLY

Please enter your comment!
Please enter your name here