ನಿಡಿಗಲ್: ಪೋಷಕರಿಲ್ಲದ ಮಕ್ಕಳಿಗೆ ನೂತನ ಮನೆ ಮತ್ತು ವಿದ್ಯಾಭ್ಯಾಸದ ಪೂರ್ಣ ಜವಾಬ್ದಾರಿ ಹೊತ್ತ ಬದುಕುಕಟ್ಟೋಣ ಬನ್ನಿ ತಂಡ

0

ನಿಡಿಗಲ್ : ಇಲ್ಲಿಯ ಕಲ್ಮಂಜ ಗ್ರಾಮದ ಅಕ್ಷಯನಗರದ ಸದಾಶಿವ ಮತ್ತು ರೇಖಾ ದಂಪತಿ ಗಳ ಮಕ್ಕಳಾದ ಸ್ನೇಹ 8ನೆ ತರಗತಿ, ದೀಪಶ್ರೀ 6ನೆ ತರಗತಿ ಇವರು ಕಲ್ಮಂಜ ಸರಕಾರಿ ಶಾಲೆಯಲ್ಲಿ  ವಿದ್ಯಾಭ್ಯಾಸ  ಮಾಡುತ್ತಿದ್ದು ಈ ಮಕ್ಕಳ ಪೋಷಣೆ ಯನ್ನು ಮಾವ ಪ್ರವೀಣ್ ನೋಡಿ ಕೊಳ್ಳುತ್ತಿದ್ದು ವಾಸ್ತವ್ಯಕ್ಕೆ ಯೋಗ್ಯ ವಿಲ್ಲದ ಮನೆ ಯಾಗಿದ್ದು, ಇದನ್ನು ಮನಗಂಡ ಉಜಿರೆ ಬದುಕು ಕಟ್ಟೋಣ ಬನ್ನಿ ತಂಡ ಆಗಮಿಸಿ ಪರಿಶೀಲನೆ ನಡೆಸಿ ಈ ಮಕ್ಕಳ ವಿದ್ಯಾಭ್ಯಾಸ ದ  ಪೂರ್ಣ ಜವಬ್ದಾರಿ ಹೊತ್ತುಕೊಳ್ಳುವ  ದತ್ತು ಸ್ವೀಕಾರ ಕಾರ್ಯಕ್ರಮ ಸೇ.27ರಂದು ಅಕ್ಷಯನಗರ ದಲ್ಲಿ ನಡೆಯಿತು.

ವಾಸ್ತವ್ಯಕ್ಕೆ ಯೋಗ್ಯವಲ್ಲದ ಮನೆ ಇವರದ್ದಾಗಿದ್ದು,  ನೂತನ ಮನೆ ಮತ್ತು ವಿದ್ಯಾಭ್ಯಾಸದ ಪೂರ್ಣ ಜವಾಬ್ದಾರಿಯನ್ನು ಹೊತ್ತುಕೊಳ್ಳುವ ನಿರ್ಧಾ ರವನ್ನು ಬದುಕು ಕಟ್ಟೋಣ ಬನ್ನಿ ತಂಡ ಮಾಡಿದೆ.

ಗೆಳೆಯರ ಬಳಗ,ಸತ್ಯನಾರಾಯಣ ಭಜನಾ ಮಂಡಳಿ ಹಾಗೂ  ಊರವರ ಸಹಯೋಗ ದೊಂದಿಗೆ ಬದುಕು ಕಟ್ಟೋಣ ಬನ್ನಿ ತಂಡ ದತ್ತು ಸ್ವೀಕಾರ ಮಾಡಿಕೊಂಡಿದೆ.

ಇದೇ ಸಂದರ್ಭದಲ್ಲಿ ಉಜಿರೆ ಸಂಧ್ಯಾ ಟ್ರೆಡರ್ಸ್ ಮಾಲಕ ರಾಜೇಶ್ ಪೈ ಯವರ ಹುಟ್ಟುಹಬ್ಬ ವನ್ನು ಇಲ್ಲಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಬದುಕು ಕಟ್ಟೋಣ ಬನ್ನಿ ತಂಡದ ರೂವಾರಿ ಲಕ್ಷ್ಮೀ ಇಂಡಸ್ಟ್ರೀಸ್ ನ ಮೋಹನ್ ಕುಮಾರ್, ಹಾಗೂ ರಾಜೇಶ್ ಪೈ, ಕಲ್ಮಂಜ ಗ್ರಾಮ ಪಂಚಾಯತ್ ಅಧ್ಯಕ್ಷ ಶ್ರೀಧರ, ಮಾಜಿ ತಾಲೂಕ್ ಪಂಚಾಯತ್ ಸದಸ್ಯ ಶಶಿಧರ್, ಗೆಳೆಯರ ಬಳಗದ ಅಧ್ಯಕ್ಷ ವಿಲ್ಸನ್ ಮೋನಿಸ್, ಪ್ರವೀಣ್, ರವಿ, ವೈಲಂಕಣಿ ಕೇಟರ್ ಮಾಲಕ ಲ್ಯಾನ್ಸಿ ಮೋನಿಸ್,  ರಾಘವ,    ಗೆಳೆಯರ ಬಳಗದ ಮಾಜಿ ಅಧ್ಯಕ್ಷ ನಿರಂಜನ್ ಪೂಜಾರಿ, ಮೋನಪ್ಪ ಟಿ. ಧರ್ಮಪ್ಪ ,ಬದುಕು ಕಟ್ಟೋಣ ಬನ್ನಿ ತಂಡದ ಸದಸ್ಯರು, ಗೆಳೆಯರ ಬಳಗದ ಸದಸ್ಯರು,ಸತ್ಯನಾರಾಯಣ ಭಜನಾ ಮಂಡಳಿ ಸದಸ್ಯರು, ಊರ ಗಣ್ಯರು ಸಮಾರಂಭದಲ್ಲಿ ಭಾಗವಹಿಸಿದ್ದರು. ನೆಲ್ಸನ್ ಮೋನಿಸ್ ಧನ್ಯವಾದ ಸಮರ್ಪಿಸಿದರು.

LEAVE A REPLY

Please enter your comment!
Please enter your name here