ಚಾರ್ಮಾಡಿ: ಮೃತ್ಯುಂಜಯ ನದಿಯಲ್ಲಿ ಒಂಟಿ ಸಲಗ ಜಲವಿಹಾರ

0

ಚಾರ್ಮಾಡಿ: ಚಾರ್ಮಾಡಿ ಪ್ರದೇಶದ ಮೃತ್ಯುಂಜಯ ನದಿಯಲ್ಲಿ ಕಳೆದ ಮೂರು ದಿನಗಳ ಹಿಂದೆ  ಹೊಸಮಠ ಪ್ರದೇಶದಲ್ಲಿ ಒಂಟಿ ಸಲಗವೊಂದು ಜಲವಿಹಾರ ನಡೆಸುವ ದೃಶ್ಯ ಕಂಡು ಬಂದಿದೆ.

ಸುಮಾರು ಅರ್ಧ ತಾಸಿಗಿಂತ ಅಧಿಕ ಹೊತ್ತು ನೀರಿನಲ್ಲಿ ಆಟ ಆಡಿದ ಆನೆ ಬಳಿಕ ನದಿಯ ಕೆಳಭಾಗದತ್ತ ತೆರಳಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಈ ದೃಶ್ಯವನ್ನು ಸ್ಥಳೀಯರು ತಮ್ಮ ಮೊಬೈಲ್ ನಲ್ಲಿ ವಿಡಿಯೋ ಮಾಡಿದ್ದು ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಕಾಡಾನೆ ಚಾರ್ಮಾಡಿಯಲ್ಲಿ ಕಂಡು ಬಂದ ದಿನ ತಡ ರಾತ್ರಿ ಮುಂಡಾಜೆಯ ದುಂಬೆಟ್ಟು ಪರಿಸರದಲ್ಲಿ ಸಂಚಾರ ನಡೆಸಿತ್ತು. ಇದು ಸ್ಥಳೀಯರ ಗಮನಕ್ಕೆ ಬಂದಿದ್ದು ತಕ್ಷಣ ಕಾಡಾನೆಯನ್ನು ಕಾಡಿನತ್ತ ಅಟ್ಟಲಾಗಿತ್ತು.

ಆನೆ ಜಲವಿಹಾರ ನಡೆಸಿರುವ ನದಿಯ ಒಂದು ಭಾಗದಲ್ಲಿ ಪವರ್ ಪ್ರಾಜೆಕ್ಟ್ ಕೋಕ್ಕೋ ಪ್ಲಾಂಟೇಶನ್ ಹಾಗೂ ಇನ್ನೊಂದು ಭಾಗದಲ್ಲಿ ಹೊಸಮಠ,ದೀವಾಜೆ,ಕೊರಂಗಾಯಿ ಮೊದಲಾದ ಜನವಸತಿ ಪ್ರದೇಶಗಳಿವೆ.

LEAVE A REPLY

Please enter your comment!
Please enter your name here