ಹೊಸಂಗಡಿ ಗ್ರಾ.ಪಂ ಪ್ರಥಮ ಸುತ್ತಿನ ಗ್ರಾಮ ಸಭೆ: ಗ್ರಾಮದ ಸರ್ವಾಂಗೀಣ ಅಭಿವೃದ್ಧಿಗೆ ಪಂಚಾಯತ್ ಬದ್ದ – ಕರುಣಾಕರ ಪೂಜಾರಿ

0

ವೇಣೂರು: ಹೊಸಂಗಡಿ ಗ್ರಾ.ಪಂ.ನ 2022-23ನೇ ಸಾಲಿನ ಪ್ರಥಮ ಸುತ್ತಿನ ಗ್ರಾಮಸಭೆಯು ಹೊಸಂಗಡಿ ಗ್ರಾ.ಪಂ. ಸಭಾಂಗಣದಲ್ಲಿ ಸೆ.27ರಂದು ಜರುಗಿತು.

ಗ್ರಾ.ಪಂ. ಅಧ್ಯಕ್ಷ ಕರುಣಾಕರ ಪೂಜಾರಿ ಅವರು ಗ್ರಾಮಸಭೆಯ ಅಧ್ಯಕ್ಷತೆ ವಹಿಸಿ, ಹೊಸಂಗಡಿ ಮತ್ತು ಬಡಕೋಡಿ ಗ್ರಾಮದ ಸರ್ವಾಂಗೀಣ ಅಭಿವೃದ್ಧಿಗೆ ಪಂಚಾಯತ್ ಬದ್ಧವಾಗಿದೆ. ಗ್ರಾಮದಲ್ಲಿನ ಸಮಸ್ಯೆಗಳನ್ನು ಆಯಾ ಇಲಾಖೆಗಳ ಮೂಲಕ ಸರಿಪಡಿಸುವ ಕಾರ್ಯ ಮಾಡುತ್ತೇವೆ ಸಚಿವ ಕೋಟಶ್ರೀನಿವಾಸ ಪೂಜಾರಿಯವರ ಅನುದಾನದಲ್ಲಿ ಬಾಪೂಜಿ ಸೇವಾ ಕೇಂದ್ರದ ನಿರ್ಮಾಣ ಹಾಗೂ ಪೀಠೋಪಕರಣಕ್ಕೆ ರೂ. 5 ಲಕ್ಷ, ಕೇಂದ್ರ ಸರಕಾರದ ಜೆಜೆಎಂ ಯೋಜನೆಯ 1.72 ಕೋಟಿ ಅನುದಾನದಲ್ಲಿ 5 ಓವರ್ ಹೆಡ್ ಟ್ಯಾಕ್, 8.5 ಕಿ.ಮೀ. ಕುಡಿಯುವ ನೀರಿನ ಪೈಪ್‌ಲೈನ್ ವಿಸ್ತರಣೆ ಆಗಲಿದ್ದು, ಎಂಎಲ್‌ಸಿ ಹಾಗೂ ಶಾಸಕ ಹರೀಶ್ ಪೂಂಜರಿಗೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.

ಸಭೆಯ ಮಾರ್ಗದರ್ಶಿ ಅಧಿಕಾರಿಯಾಗಿ ಬೆಳ್ತಂಗಡಿ ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಚಂದ್ರಶೇಖರ ಕೆ.ಎಸ್,  ಆರೋಗ್ಯ ಇಲಾಖೆಯ ಸಿಬ್ಬಂದಿ , ವಿವಿಧ ಇಲಾಖಾಧಿಕಾರಿಗಳು ,  ಉಪಾಧ್ಯಕ್ಷೆ ನಾಗರತ್ನ, ಪಂ. ಸದಸ್ಯರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

ಗ್ರಾಮದ ಅ೦ಗಡಿಗಳಲ್ಲಿ ಕಳಪೆ ಗುಣಮಟ್ಟದ ಮದ್ಯ ಮಾರಾಟವನ್ನು ತಡೆಯಲು ಅಬಕಾರಿ ಇಲಾಖೆಗೆ ಆಗದಿದ್ದರೆ ಗ್ರಾಮದಲಿ ಅಧಿಕೃತ ಮದ್ಯ೦ಗಡಿ ಸ್ಥಾಪಿಸಲು ಅನುಮತಿ ನೀಡಿ ಎ೦ದು ಗ್ರಾಮಸ್ಥರು ಅಕ್ರಮ ಮದ್ಯ ಮಾರಾಟದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಆಗ್ರಹಿಸಿದ ವಿದ್ಯಾಮಾನ ಇ೦ದು ಹೊಸ೦ಗಡಿ ಗ್ರಾಮ ಪ೦ಚಾಯತ್ ನ ಗ್ರಾಮಸಭೆಯಲ್ಲಿ ಕೇಳಿ ಬ೦ತು

ಪಂ. ಅಭಿವೃದ್ಧಿ ಅಧಿಕಾರಿ ಗಣೇಶ್ ಶೆಟ್ಟಿ ವರದಿ ಮತ್ತು ಜಮಾ ಖರ್ಚಿನ ವಿವರ ಮಂಡಿಸಿ ಸಭೆಯನ್ನು ನಿರ್ವಹಿಸಿದರು. ಪಂ. ಸಿಬ್ಬಂದಿ ಕೃಷ್ಣಪ್ಪ ವಾರ್ಡ್‌ಸಭೆಗಳಲ್ಲಿ ಬಂದ ಬೇಡಿಕೆಗಳ ವರದಿ ವಾಚಿಸಿದರು.

 

LEAVE A REPLY

Please enter your comment!
Please enter your name here