ಉಜಿರೆ ವರ್ತಕರ ಸಂಘದಿಂದ ಮನ ಮೆಚ್ಚುವ ಕಾರ್ಯ: ಅಗ್ನಿ ಅನಾಹುತಕ್ಕೆ ತುತ್ತಾದ ಅಂಗಡಿಗಳಿಗೆ ಮಾಲೀಕರಿಂದ ನೆರವು

0

ಉಜಿರೆ: ಇತ್ತೀಚೆಗೆ ಉಜಿರೆಯಲ್ಲಿ ಬೆಂಕಿ ಅನಾಹುತದಿಂದ ನಷ್ಟ ಉಂಟಾದ ಉದ್ಯಮಿಗಳಿಗೆ ಉಜಿರೆ ವರ್ತಕರ ಸಂಘದ ವತಿಯಿಂದ ಸೆ.27 ರಂದು ಉಜಿರೆಯ ಶ್ರೀ ರಾಮಕೃಷ್ಣ ಸಭಾಭವನದಲ್ಲಿ ಪರಿಹಾರ ನಿಧಿ ಸಮರ್ಪಣೆ ಕಾರ್ಯಕ್ರಮವು ಜರುಗಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಜಿರೆ ವರ್ತಕರ ಸಂಘದ ಅಧ್ಯಕ್ಷ ಅರವಿಂದ ಕಾರಂತ  ವಹಿಸಿದ್ದರು.

ಈ ಸಂದರ್ಭದಲ್ಲಿ ಉಜಿರೆ ವರ್ತಕರ ಸಂಘದ ಕಾನೂನು ಸಲಹೆಗಾರ ಬಿ.ಕೆ.ಧನಂಜಯರಾವ್ , ಸಂಘದ ಗೌರವಾಧ್ಯಕ್ಷ ಶರತ್ ಕೃಷ್ಣ ಪಡುವೆಟ್ನಾಯ , ಉಜಿರೆ ಗ್ರಾಪಂ ಉಪಾಧ್ಯಕ್ಷ ರವಿಕುಮಾರ್ ಬರೆಮೇಲು, ಹಿರಿಯ ವರ್ತಕರಾದ ರಿಚರ್ಡ್ ಸಾಲ್ಡಾನ,ಪದ್ಮನಾಭ ಶೆಟ್ಟಿಗಾರ್, ಭರತ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

ಬೆಂಕಿ ಅನಾಹುತದಿಂದ ನಷ್ಟ ಅನುಭವಿಸಿದ ನಾಗೇಶ್ ಭಟ್, ರಾಜೀವ,ಯೋಗೀಶ್ ಕುಮಾರ್, ರಾಮಣ್ಣ ಹಾಗು ವಸಂತ ಅವರಿಗೆ ವರ್ತಕರ ಸಂಘದ ಮೂಲಕ ಸಂಗ್ರಹಿಸಿದ ರೂ. 3,10,012 ಮೊತ್ತವನ್ನು ಚೆಕ್ ಮೂಲಕ ಹಸ್ತಾಂತರಿಸಲಾಯಿತು.

ಕಾರ್ಯಕ್ರಮವನ್ನು ಜೊತೆ ಕಾರ್ಯದರ್ಶಿ ಪ್ರಸಾದ್  ನಿರೂಪಿಸಿದರು.

ಆ. 31ರಂದು ಅನುಗ್ರಹ ಶಾಲೆಯ ಬಳಿ ಉಂಟಾದ ಅಗ್ನಿ ಅನಾಹುತದಿಂದ ರಕ್ಷಾ ಟ್ರೇಡರ್ಸ್ ಹಾಗೂ ಅನಾರ್ ಟಯರಾ ಅಂಗಡಿಗಳು ಸಂಪೂರ್ಣ ಸುಟ್ಟು ಹೋಗಿವೆ.ಈ ಅಂಗಡಿಗಳ ಎಲ್ಲಾ ಸುತ್ತುಗಳ ಸಹಿತ ಕಟ್ಟಡ ಕೂಡ ಬೆಂಕಿಯಿಂದ ನಾಶವಾಗಿದ್ದು ಕೋಟ್ಯಂತರ ರೂ. ನಷ್ಟ ಉಂಟಾಗಿದೆ. ಇದೀಗ ಈ ಅಂಗಡಿಗಳನ್ನು ಕಟ್ಟಡ ಸಹಿತ ಮರು ನಿರ್ಮಿಸುವ ಕೆಲಸ ಆರಂಭವಾಗಿದೆ. ಸೆ. 20 ರಂದು ಉಜಿರೆಯ ಚಾರ್ಮಾಡಿ ರಸ್ತೆಯ ಸಮೀಪದ ಉಂಟಾದ ಬೆಂಕಿ ದುರಂತದಲ್ಲಿ ಹಾನಿಗೀಡಾದ ಅಂಗಡಿಗಳು ಮರುವ್ಯವಹಾರ ನಡೆಸಲು ತಯಾರಿ ನಡೆಸುತ್ತಿವೆ.

LEAVE A REPLY

Please enter your comment!
Please enter your name here