HomePage_Banner
HomePage_Banner

ಕಾಣಿಯೂರು ಶ್ರೀ ಮಠದಲ್ಲಿ ಶ್ರೀ ನರಸಿಂಹ ಜಯಂತ್ಯುತ್ಸವ

Puttur_Advt_NewsUnder_1
Puttur_Advt_NewsUnder_1
  • ದುರಿತಗಳನ್ನು ಪರಿಹರಿಸುವ ಶಕ್ತಿ ನರಸಿಂಹ ದೇವರಿಗಿದೆ- ಕಾಣಿಯೂರು ಶ್ರೀ

ಕಾಣಿಯೂರು: ಮನುಷ್ಯ ಒಂದಲ್ಲ ಒಂದು ಸಮಸ್ಯೆಯಿಂದ ಬಳಲುತ್ತಿದ್ದಾನೆ. ನಮ್ಮ ದುರಿತಗಳನ್ನು ಪರಿಹರಿಸುವ ಶಕ್ತಿ ಶ್ರೀ ನರಸಿಂಹ ದೇವರಿಗೆ ಇದೆ. ಆದ್ದರಿಂದ ನಾವೆಲ್ಲರೂ ನರಸಿಂಹ ದೇವರ ಭಜನೆ, ಸ್ತುತಿ ಮಾಡಬೇಕು ಎಂದು ಕಾಣಿಯೂರು ಮಠಾಧೀಶರಾದ ಶ್ರೀ ವಿದ್ಯಾವಲ್ಲಭತೀರ್ಥ ಸ್ವಾಮೀಜಿ ಹೇಳಿದರು. ಅವರು ಮೆ 18ರಂದು ಕಾಣಿಯೂರು ಶ್ರೀ ಮಠದಲ್ಲಿ ಶ್ರೀ ನರಸಿಂಹ ಜಯಂತಿ ಪ್ರಯುಕ್ತ ನಡೆದ ಶ್ರೀನೃಸಿಂಹ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು. ಭಗವಂತನ ನಾಮಸ್ಮರಣೆಯೊಂದಿಗೆ ಸಾಂಸ್ಕೃತಿಕವಾಗಿ, ಸಂಸ್ಕಾರ ಭರಿತ ಜೀವನ ಮಾಡಿದಾಗ ನಮಗೆ ನೆಮ್ಮದಿ ಸಿಗುವುದರೊಂದಿಗೆ ಇತರರಿಗೂ ನೆಮ್ಮದಿ ಸಿಗುತ್ತದೆ. ನಿತ್ಯ ದೇವರ ಸ್ಮರಣೆ, ಒಳ್ಳೆಯ ವಿಚಾರಗಳ ಚಿಂತನೆ, ಸಾಮಾಜಿಕ ಕಾರ್ಯಗಳತ್ತ ಒಲವು ಮನುಷ್ಯ ನನ್ನು ಸತ್ಪಥದಲ್ಲಿ ಸಾಗುವಂತೆ ಮಾಡುತ್ತದೆ ಎಂದರು.

ಕಾರ್ಯಕ್ರಮಗಳು- ಕಾಣಿಯೂರು ಶ್ರೀ ಮಠದಲ್ಲಿ ಶ್ರೀ ನೃಸಿಂಹ ಜಯಂತ್ಯುತ್ಸವದ ಪ್ರಯುಕ್ತ ಬೆಳಿಗ್ಗೆ ವಿಶೇಶ ಪೂಜೆ, ಕಾಣಿಯೂರು ಶ್ರೀ ವಿಷ್ಣುಪ್ರಿಯಾ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ, ಶ್ರೀ ಕಾಣಿಯೂರು ಮಠ ಸಂಸ್ಥಾನ ದೇವರ ಪೂಜೆ, ಮಹಾಪೂಜೆ, ಧೀ ಶಕ್ತಿ ಮಹಿಳಾ ಯಕ್ಷ ಬಳಗ ಪುತ್ತೂರು ಇವರಿಂದ ಯಕ್ಷಗಾನ ತಾಳಮದ್ದಳೆ ಭಕ್ತ ಪ್ರಹ್ಲಾದ ನಡೆಯಿತು. ಬಳಿಕ ಸ್ವಾಮೀಜಿಯವರಿಂದ ಮಂತ್ರಾಕ್ಷತೆ, ಭಕ್ತಾಧಿಗಳಿಗೆ ಅನ್ನಸಂತರ್ಪಣೆ ನಡೆಯಿತು. ಕಾಣಿಯೂರು ಶ್ರೀ ಮಠದ ವ್ಯವಸ್ಥಾಪಕರಾದ ನಿರಂಜನ್ ಆಚಾರ್ ಸ್ವಾಗತಿಸಿ, ಕಣ್ವರ್ಷಿ ಸಾಂಸ್ಕೃತಿಕ ಕಲಾ ಕೇಂದ್ರದ ಸಂಚಾಲಕ ಸದಾನಂದ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.

ಮನವಿ ಬಿಡುಗಡೆ- ಕಾಣಿಯೂರು ಶ್ರೀ ಅಮ್ಮನವರ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯವು ಶೀಘ್ರದಲ್ಲಿ ನಡೆಯಲಿದ್ದು, ಇದರ ಮನವಿ ಪತ್ರವನ್ನು ಶ್ರೀ ವಿದ್ಯಾವಲ್ಲಭತೀರ್ಥ ಸ್ವಾಮೀಜಿಯವರು ಬಿಡುಗಡೆಗೊಳಿಸಿದರು. ಕಾಣಿಯೂರು ಶ್ರೀ ಅಮ್ಮನವರ ದೇವಸ್ಥಾನವನ್ನು ನಿರ್ಮಾಣ ಮಾಡಬೇಕೆಂದು ಸಂಕಲ್ಪ ಮಾಡಿದ್ದು, ಕಾಣಿಯೂರು ಮಠದ ನೇತೃತ್ವದಲ್ಲಿ ಭಕ್ತರ ಸಹಕಾರದೊಂದಿಗೆ ಕಾಣಿಯೂರು ಶ್ರೀ ಅಮ್ಮನವರ ದೇವಸ್ಥಾನದ ಜೀರ್ಣೋದ್ದಾರ ಕಾರ್ಯಗಳನ್ನು ಕೈಗೊಳ್ಳಲಾಗುವುದು. ಎಲ್ಲಾ ಅಭಿವೃದ್ದಿ ಕಾರ್ಯಗಳಿಗೆ ಸರ್ವರೂ ಸಹಕಾರ ನೀಡಬೇಕೆಂದು ಸ್ವಾಮೀಜಿ ಹೇಳಿದರು.

Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.