ನೆರಿಯ ಅಪ್ಪೆಲ ಶ್ರೀ ಉಮಾ ಪಂಚಲಿಂಗೇಶ್ವರ ದೇವಸ್ಥಾನಕ್ಕೆ ನುಗ್ಗಿದ ಕಳ್ಳರು: ಗರ್ಭಗುಡಿಯ ಬೀಗ ಒಡೆದು ಕಳ್ಳತನಕ್ಕೆ ಯತ್ನ: ಅಂಗಡಿಗೂ ನುಗ್ಗಿದ ದರೋಡೆಕೋರರು

0

ನೆರಿಯ:  ನೆರಿಯ  ಅಪ್ಪೆಲ ಶ್ರೀ ಉಮಾ ಪಂಚಲಿಂಗೇಶ್ವರ ದೇವಸ್ಥಾನಕ್ಕೆ ಕಳ್ಳರು ನುಗ್ಗಿದ್ದು,  ಕಾಣಿಕೆ ಹುಂಡಿಯಿಂದ ಹಣವನ್ನು ಕಳ್ಳತನ ಮಾಡಿ ಪರಾರಿಯಾಗಿರುವ ಘಟನೆ ಸೆ.27 ರಂದು ರಾತ್ರಿ ನಡೆದಿದ್ದು ಸೆ.28ರಂದು ಬೆಳಿಗ್ಗೆ ಬೆಳಕಿಗೆ ಬಂದಿದೆ.

ಯಾರೂ ಇಲ್ಲದ ವೇಳೆ ದೇವಸ್ಥಾನಕ್ಕೆ ಏಣಿಯ ಮುಖಾಂತರ ನುಗ್ಗಿದ ದರೋಡೆಕೋರರು ಕಾಣಿಕೆ ಹುಂಡಿಯಿಂದ ಹಣವನ್ನು ಎಗರಿಸಿದ್ದಾರೆ ಅಲ್ಲದೆ ಗರ್ಭಗುಡಿಯ ಬೀಗವನ್ನು ಹೊಡೆದು ಹಾಕಿದ್ದಾರೆ.  ಅಲ್ಲೇ ಹತ್ತಿರದಲ್ಲಿದ್ದ ಬಯಲು ಶಾಲೆಯ ಬಳಿಯ ಫ್ಯಾನ್ಸಿ ಅಂಗಡಿಯಲ್ಲೂ ಕಳ್ಳತನಕ್ಕೆ ಯತ್ನಿಸಿದ್ದಾರೆ. ಧರ್ಮಸ್ಥಳ ಠಾಣೆಯ  ಪೊಲೀಸ್ ಸ್ಥಳಕ್ಕೆ ಧಾವಿಸಿ ತನಿಖೆ ನಡೆಸುತ್ತಿದ್ದಾರೆ. ಹೆಚ್ಚಿನ ಮಾಹಿತಿ ಇನ್ನಷ್ಟೆ ಲಭ್ಯವಾಗಬೇಕಾಗಿದೆ.

LEAVE A REPLY

Please enter your comment!
Please enter your name here