ಬೆಳ್ತಂಗಡಿ: ವಿಭು ಮೊಬೈಲ್ಸ್ ಶುಭಾರಂಭ

0

ಬೆಳ್ತಂಗಡಿ: ಎಸ್.ಸಿ.ಡಿ.ಸಿ.ಸಿ ಬ್ಯಾಂಕ್ ಬಳಿ ಉತ್ಕೃಷ್ಠ ಕಟ್ಟಡದಲ್ಲಿ ನೂತನವಾಗಿ ಪ್ರಾರಂಭಿಸಿದ ವಿಭು ಮೊಬೈಲ್ಸ್ ನ ಶುಭಾರಂಭವು ನಡೆಯಿತು.

ನೂತನ ಮೊಬೈಲ್ಸ್ ಸಂಸ್ಥೆಯನ್ನು ಪಟ್ಟಣ ಪಂಚಾಯತ್ ಅಧ್ಯಕ್ಷೆ ರಜನಿ ಕುಡ್ವ ಉದ್ಘಾಟಿಸಿ ಸಂಸ್ಥೆಯು ಅಭಿವೃದ್ಧಿ ಪಥದಲ್ಲಿ ಸಾಗಲಿ ಎಂದು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಸಂಸ್ಥೆಯ ಮಾಲಕರ ಮಾತೃಶ್ರೀ ಸುಂದರಿ,ಬೆಳ್ತಂಗಡಿ ಮೊಬೈಲ್ ರಿಟೇಲರ್ಸ್ ಅಸೋಸಿಯೇಷನ್ ಅಧ್ಯಕ್ಷ ವೀರಚಂದ್ರ ಜೈನ್, ಪ್ರಗತಿಪರ ಕೃಷಿಕರಾದ ರಾಮಣ್ಣ ಗೌಡ, ಜಾರಪ್ಪ ಗೌಡ ಹಾಗೂ ಬಂಧು ಮಿತ್ರರು ಉಪಸ್ಥಿತರಿದ್ದರು.

ಸಂಸ್ಥೆಗೆ ಆಗಮಿಸಿದ ಬಂಧು ಮಿತ್ರರನ್ನು ಸಂಸ್ಥೆಯ ಮಾಲಕರಾದ  ವಿದ್ಯಾಶ್ರೀ ಮತ್ತು ಬಾಲಕೃಷ್ಣ ಅಂತರ ಸ್ವಾಗತಿಸಿ ಸತ್ಕರಿಸಿದರು.

LEAVE A REPLY

Please enter your comment!
Please enter your name here