ವೇಣೂರು: ಕೇಂದ್ರ ಒಕ್ಕೂಟದ ಪದಾಧಿಕಾರಿಗಳ ಪದಗ್ರಹಣ ಸಮಾರಂಭದ ಪೂರ್ವಭಾವಿ ಸಭೆ

0

ವೇಣೂರು:   ಅಕ್ಟೋಬರ್ 2 ರಂದು ನಡೆಯುವ ಗಾಂಧಿ ಜಯಂತಿ ಮತ್ತು ನವಜೀವನ ಸಮಿತಿ ಸದಸ್ಯರ ಸಮಾವೇಶ, ಕೇಂದ್ರ ಒಕ್ಕೂಟದ ಪದಾಧಿಕಾರಿಗಳ ಪದಗ್ರಹಣ ಸಮಾರಂಭದ ಪೂರ್ವಭಾವಿ ಸಭೆಯನ್ನು ವೇಣೂರು ವಲಯ ಕಚೇರಿಯಲ್ಲಿ ಜನಜಾಗೃತಿ ವೇದಿಕೆಯ ವಲಯಾಧ್ಯಕ್ಷರಾದ ಹರೀಶ ಪೊಕ್ಕಿ, ತಾಲೂಕು ಸಮಿತಿ ಸದಸ್ಯರಾದ ಸೋಮನಾಥ, ಗಿರೀಶ್,ಶ್ರೀಧರ ಪೂಜಾರಿ,ಗಣ್ಯರು ಶೀನ ದೇವಾಡಿಗ, ವರದ ರಾಜ್ ಇವರ ಉಪಸ್ಥಿತಿಯಲ್ಲಿ ನಡೆಯಿತು.

ಈ ಸಭೆಯಲ್ಲಿ ನವ ಜೀವನ ಸಮಿತಿ ಸದಸ್ಯರು, ಪದಾಧಿಕಾರಿಗಳು, ವಲಯದ ಎಲ್ಲಾ ಒಕ್ಕೂಟದ ಪದಾಧಿಕಾರಿಗಳು, ವಲಯದ ಎಲ್ಲಾ ಸೇವಾ ಪ್ರತಿನಿಧಿಗಳು, ವಿಪತ್ತು ನಿರ್ವಹಣೆ ಘಟಕದ ಸ್ವಯಂ ಸೇವಕರು ಉಪಸ್ಥಿತರಿದ್ದರು.

ಹರೀಶ್ ಕಾರ್ಯಕ್ರಮ ನಿರೂಪಣೆ ಮಾಡಿದರು. ಸುರೇಶ್  ಸ್ವಾಗತಿಸಿದರು. ವಲಯದ ಮೇಲ್ವಿಚಾರಕಿ ಶಾಲಿನಿ  ಪ್ರಾಸ್ತವಿಕವಾಗಿ ಮಾತನಾಡಿದರು.  ಜಯಂತಿ  ಧನ್ಯವಾದ ಗೈದರು.

LEAVE A REPLY

Please enter your comment!
Please enter your name here