ಗೇರುಕಟ್ಟೆ: ಮಾತೃದಯಾ ಆರ್ಕೆಡ್ ಶುಭಾರಂಭ

0

ಗೇರುಕಟ್ಟೆ : ಇಲ್ಲಿಯ ಕಳಿಯ ಗ್ರಾಮದ ಗೇರುಕಟ್ಟೆ ಎಂಬಲ್ಲಿ ನೂತನವಾಗಿ ನಿರ್ಮಿಸಿದ ಮಾತೃ ದಯಾ ಆರ್ಕೇಡ್ ಸೆ.28 ರಂದು ಶುಭಾರಂಭ ಗೊಂಡಿದೆ.

ಬೆಳಾಲು ಆರಿಕೋಡಿ ಶ್ರೀ ಚಾಮುಂಡೇಶ್ವರಿ ಕ್ಷೇತ್ರದ ಧರ್ಮದರ್ಶಿಗಳಾದ ಹರೀಶ್ ಆರಿಕೋಡಿ ದೀಪ ಪ್ರಜ್ವಲಿಸುವ ಮೂಲಕ ಮಾತೃದಯಾ ಆರ್ಕೇಡ್ ನ್ನು ಉದ್ಘಾಟನೆ ನೆರವೇರಿಸಿದರು.

ಈ ಸಂದರ್ಭದಲ್ಲಿ ಬೆಳ್ತಂಗಡಿ ತಾಲೂಕು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ಮಾಜಿ ಅಧ್ಯಕ್ಷರಾದ ಸೋಮೇ ಗೌಡ ಜಿ, ಕಳಿಯ ಸಿ.ಎ.ಬ್ಯಾಂಕ್ ಅಧ್ಯಕ್ಷ ವಸಂತ ಮಜಲು,ಕಳಿಯ ಗ್ರಾಮ ಪಂಚಾಯತು ಅಧ್ಯಕ್ಷೆ ಸುಭಾಷಿಣಿ ಜನಾರ್ದನ ಗೌಡ ಕೆ. ಹಾಗೂ ಕಳಿಯಬೀಡು ಸುರೇಂದ್ರ ಕುಮಾರ್ ಜೈನ್ ವೇದಿಕೆಯಲ್ಲಿ ಉಪಸ್ಥಿತರಿದ್ದು,ಶುಭ ಹಾರೈಸಿದರು.

ಕಾರ್ಯಕ್ರಮಕ್ಕೆ ಆಗಮಿಸಿದ ಹಿತೈಷಿಗಳು ಮತ್ತು ಬಂಧು ಬಳಗ ಸಂಸ್ಥೆಯ ಮಾಲೀಕರಾದ ಮೋಹನ ಗೌಡ ಟಿ.ಸ್ವಾಗತಿಸಿ, ಸತ್ಕರಿಸಿದರು. ಹಾಗೂ  ದಮಯಂತಿ ಎಂ.,ಮೋಹನ ಗೌಡ, ಮಕ್ಕಳಾದ ಯತೀನ್ ಎಂ,ಸಚಿನ್ ಎಂ.ಉಪಸ್ಥಿತರಿದ್ದು ಸಹಕರಿಸಿದರು.

LEAVE A REPLY

Please enter your comment!
Please enter your name here