ಬಳಂಜ: ಬ್ರಹ್ಮಶ್ರೀ ಕುಣಿತಾ ಭಜನಾ ಮಂಡಳಿಯ ವಾರ್ಷಿಕೋತ್ಸವ, ಸತ್ಯನಾರಾಯಣ ಪೂಜೆ, ಧಾರ್ಮಿಕ ಸಭೆ: ಸೇವಾ ಕಾರ್ಯ ಮತ್ತು ದೇವ ಕಾರ್ಯದ ಮೂಲಕ ಭಜನಾ ತಂಡ ಬೆಳೆದಿದೆ: ಪ್ರವೀಣ್ ಕುಮಾರ್

0

ಬಳಂಜ: ದೇವ ಕಾರ್ಯ ಮತ್ತು ಸೇವಾ ಕಾರ್ಯದ ಮುಖೇನಾ ಬೆಳೆದು ಬಂದ ಬಳಂಜ ಬ್ರಹ್ಮಶ್ರೀ ಕುಣಿತಾ ಭಜನಾ ಮಂಡಳಿಯ ಕಾರ್ಯವೈಖರಿ ಮಾದರಿ. ಸನಾತನ ಹಿಂದೂ ಧರ್ಮದ ಆಚಾರ ವಿಚಾರ ಸಂಸ್ಕೃತಿ ಅತ್ಯಂತ ಶ್ರೇಷ್ಠವಾದದ್ದು. ಅದನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮ ಮೇಲಿದ್ದು, ನಮ್ಮ ಮಕ್ಕಳನ್ನು ಭಜನೆಯ ಶ್ರದ್ದಾ ಕೇಂದ್ರಕ್ಕೆ ಸೇರಿಸಬೇಕು ಎಂದು ಬಳಂಜ ಬ್ರಹ್ಮ ಶ್ರೀ ನಾರಾಯಣ ಗುರು ಸೇವಾ ಸಮಿತಿ ಅಧ್ಯಕ್ಷ ಪ್ರವೀಣ್ ಕುಮಾರ್ ಹೆಚ್‌ಎಸ್ ಹೇಳಿದರು. ಸಮಾಜ ಮೆಚ್ಚುವ ಕೆಲಸವನ್ನು ಮಾಡುತ್ತಿರುವ ಹರೀಶ್.ವೈ.ಚಂದ್ರಮ ಅಭಿನಂದನಾರ್ಹರು ಎಂದು ಅಭಿಪ್ರಾಯ ಪಟ್ಟರು.

ಅವರು ಸೆ 28 ರಂದು ಬಳಂಜದಲ್ಲಿ ನಡೆದ ಬ್ರಹ್ಮಶ್ರೀ ಕುಣಿತಾ ಭಜನಾ ಮಂಡಳಿಯ ವಾರ್ಷಿಕೋತ್ಸವ, ಪುಸ್ತಕ ವಿತರಣೆ ಹಾಗೂ ಸತ್ಯನಾರಾಯಣ ಪೂಜೆಯ ಧಾರ್ಮಿಕ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕಾರ್ಯಕ್ರಮದ ಉದ್ಘಾಟನೆಯನ್ನು ಪ್ರಗತಿಪರ ಕೃಷಿಕ ಸತೀಶ್ ರೈ ಬಾರ್ದಡ್ಕ ನೇರವರಿಸಿ ಕಾರ್ಯಕ್ರಮಕ್ಕೆ ಶುಭಕೋರಿದರು.

ವೇದಿಕೆಯಲ್ಲಿ ಪ್ರಗತಿರ ಕೃಷಿಕ ವಿಶ್ವನಾಥ ಹೊಳ್ಳ,ಯುವ ಉದ್ಯಮಿ ರಾಕೇಶ್ ಹೆಗ್ಡೆ ಬಳಂಜ,ಗಣೇಶೋತ್ಸವ ಸಮಿತಿ ಅಧ್ಯಕ್ಷ ಸಂತೋಷ್ ಪಿ ಕೋಟ್ಯಾನ್, ಬಳಂಜ ಗ್ರಾ.ಪಂ ಮಾಜಿ ಉಪಾದ್ಯಕ್ಷ ಸದಾನಂದ ಸಾಲಿಯಾನ್ ಬಳಂಜ,ಗುರುವಾಯನಕೆರೆ ಕೆನರಾ ಬ್ಯಾಂಕ್ ಮ್ಯಾನೇಜರ್ ಚಿನ್ನ ಕಂಬಗಿರಿ,ಪ್ರಗತಿಪರ ಕೃಷಿಕ ಗಣೇಶ್ ಪೂಜಾರಿ ಬೊಂಟ್ರೋಟ್ಟು, ಬಳಂಜ ಗ್ರಾ.ಪಂ ಸದಸ್ಯರಾದ ಯಶೋಧರ ಶೆಟ್ಟಿ, ಶೋಭಾ ಕುಲಾಲ್ ಉಪಸ್ಥಿತರಿದ್ದರು

ಬಳಂಜ ಬ್ರಹ್ಮ ಶ್ರೀ ಕುಣಿತಾ ಭಜನಾ ಮಂಡಳಿ ಸಂಚಾಲಕ ಹರೀಶ್ ವೈ ಚಂದ್ರಮ ಪ್ರಾಸ್ತವಿಕ ಮಾತನಾಡಿ ಸ್ವಾಗತಿಸಿದರು.ರಘುನಾಥ್ ಶಾಂತಿಯವರು ಪೂಜೆಯನ್ನು ನೆರವೇರಿಸಿದರು.
ವಿಶಾಲ ಜಗದೀಶ್ ಕಾರ್ಯಕ್ರಮ ನಿರೂಪಿಸಿದರು. ಸರಿತಾ ಪ್ರವೀಣ್, ಅಮೃತ ಎಸ್ ಕೋಟ್ಯಾನ್ ಸಹಕರಿಸಿದರು.

ಸನ್ಮಾನ ಮತ್ತು ಪುಸ್ತಕ ವಿತರಣೆ

ಕಾರ್ಯಕ್ರಮದಲ್ಲಿ ಭಜನಾ ತಂಡಕ್ಕೆ ಸದಾ ಪ್ರೋತ್ಸಾಹ ನೀಡುತ್ತಿರುವ ಕೆನರಾ ಬ್ಯಾಂಕ್ ಮ್ಯಾನೇಜರ್ ಚಿನ್ನ ಕಂಬಗಿರಿಯವರನ್ನು ಸನ್ಮಾನಿಸಲಾಯಿತು. ಭಜನಾ ತಂಡದ ಎಲ್ಲಾ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಿಸಲಾಯಿತು.

LEAVE A REPLY

Please enter your comment!
Please enter your name here