ತಾಲೂಕು ಮಟ್ಟದ  ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಎಸ್ ಡಿಎಂ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಿಗೆ ಪ್ರಶಸ್ತಿಯ ಗರಿ

0

ಧರ್ಮಸ್ಥಳ: ಶ್ರೀ ಧ.ಮ.ಅ.ಹಿ ಪ್ರಾಥಮಿಕ ಶಾಲೆ ಧರ್ಮಸ್ಥಳದಲ್ಲಿ ಸೆ.29ರಂದು ನಡೆದ ತಾಲೂಕು ಮಟ್ಟದ  ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಎಸ್ ಡಿಎಂ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ಸಂಸ್ಕೃತ ಭಾಷಣ ಪ್ರೌಢ ವಿಭಾಗದಲ್ಲಿ ಸ್ತುತಿ ಪ್ರಥಮ, ಭಾವಗೀತೆ ರೇವಂತ ಮನೋಹರ್ ರಾವ್ ಪ್ರಥಮ, ಭರತನಾಟ್ಯ ಹಂಸಿನಿ ಭಿಡೆ ಪ್ರಥಮ, ಚಿತ್ರ ಕಲೆ ಸಾತ್ವಿಕ್ ವಿಜೆ ಪ್ರಥಮ, ಹಾಸ್ಯ ಚಿನ್ಮಯ್ ದ್ವಿತೀಯ, ಜಾನಪದ ನೃತ್ಯ ದ್ವಿತೀಯ ಪ್ರೌಢ ವಿಭಾಗ, ಕವ್ವಾಲಿ ದ್ವಿತೀಯ ಪ್ರೌಢ ವಿಭಾಗ, ಇಂಗ್ಲಿಷ್ ಭಾಷಣ ಜೆಸ್ವಿನ್ ತೃತೀಯ, ಮಿಮಿಕ್ರಿ ಮನ್ವಿತ್ ತೃತೀಯ, ಆಂಗ್ಲ ಕಂಠ ಪಾಠ ಪೂರ್ವಿ ಭಟ್ ಪ್ರಥಮ, ಲಘು ಸಂಗೀತ ಪ್ರಾಪ್ತಿ ಶೆಟ್ಟಿ ಪ್ರಥಮ, ಹಾಸ್ಯ ತನ್ಮಯ ತೃತೀಯ, ಹಿಂದಿ ಕಂಠ ಪಾಠ  ಕಿರಿಯ ಪ್ರಾಥಮಿಕ ವಿಭಾಗದಲ್ಲಿ  ಸಮ್ಯಕ್ ದ್ವಿತೀಯ , ಧಾರ್ಮಿಕ ಪಠಣ ಸಂಸ್ಕೃತ ಆರುಷ್ ಪಿ ಜೋಷಿ, ಆವೆ ಮಣ್ಣಿನ ಮಾದರಿ ಸ್ವಾತ್ಮ ಪುರೋಹಿತ್ ತೃತೀಯ ಇವರು ಪ್ರಶಸ್ತಿಯನ್ನು ಗಳಿಸಿದ್ದಾರೆ.

ಒಟ್ಟು ಬಹುಮಾನಗಳ ಸಂಖ್ಯೆ 15. ಇದರಲ್ಲಿ 6 ಪ್ರಥಮ, 5 ದ್ವಿತೀಯ ಹಾಗೂ 4 ತೃತೀಯ ಸ್ಥಾನ ಪಡೆದಿದ್ದು, 6 ವಿಭಾಗದ ಸ್ಪರ್ಧೆಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆ ಆಗಿರುತ್ತದೆ ಎಂದು ಶಾಲಾ ಮುಖ್ಯೋಪಾಧ್ಯಾಯಿನಿ ಪರಿಮಳ ಎಂ.ವಿ ಯವರು ತಿಳಿಸಿದ್ದಾರೆ.

 

LEAVE A REPLY

Please enter your comment!
Please enter your name here